Gautam Adani: ಉದ್ಯಮಿ ಗೌತಮ್ ಅದಾನಿ ವಿಚಾರದಲ್ಲಿ ಎಡವಿದ ಅಮೆರಿಕಗೆ ದೊಡ್ಡ ನಷ್ಟದ ಆತಂಕ
ಅಮೆರಿಕ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿದ್ದರೂ ತನ್ನ ಎಡವಟ್ಟುಗಳ ಸರಪಳಿ ಮುಂದುವರಿಸಿ, ಜಾಗತಿಕ ಮಟ್ಟದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನ ಹಾಳು ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಮತ್ತೆ ಪುಷ್ಠಿ ಸಿಕ್ಕಿದೆ. ಭಾರತ ಮೂಲದ ಉದ್ಯಮಿ ಗೌತಮ್ ಅದಾನಿ ಅವರ ವಿಚಾರದಲ್ಲೂ ಅಮೆರಿಕ ಇದೇ ರೀತಿ ಎಡವಟ್ಟು ಮಾಡಿಕೊಂಡಿರುವುದು ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಗೊತ್ತಾಗುತ್ತಿದೆ.
ಆಧುನಿಕ ಜಗತ್ತು ಸಾಕಷ್ಟು ವೇಗದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದೆ ನುಗ್ಗುತ್ತಿದ್ದು, ಇಡೀ ಪ್ರಪಂಚ ಇನ್ನಷ್ಟು ವಿಶಾಲವಾಗುತ್ತಿದೆ. ಹೀಗಾಗಿ ಒಂದೇ ದೇಶದ ಮೇಲೆ ಅವಲಂಬನೆ ಕೂಡ ತಪ್ಪುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಸಜ್ಜಾಗಿವೆ. ಆದರೆ ಇಂತಹ ಸಂದರ್ಭದಲ್ಲೇ ಅಮೆರಿಕದ ನಾಯಕರು ಜಾಗತಿಕ ಸಂಬಂಧದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದ ಕೂಡ ಇತ್ತು. ಉದ್ಯಮಿ ಗೌತಮ್ ಅದಾನಿ ಅವರ ವಿಚಾರದಲ್ಲಿ ಅಮೆರಿಕದ ನಾಯಕರು ಮತ್ತು ಅಲ್ಲಿನ ವ್ಯವಸ್ಥೆಯ ಎಡವಟ್ಟು ಇದೀಗ ಮತ್ತೊಮ್ಮೆ ಬಯಲಾಗಿದೆ.

ಅಮೆರಿಕದಿಂದ ದಾಖಲೆ ಇಲ್ಲದ ಆರೋಪ
ಜಾಗತಿಕ ಮಟ್ಟದಲ್ಲಿ ಅದಾನಿ ಸಮೂಹವು ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟಿಗಿನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಬಂದರು ಸೇರಿದಂತೆ, ಹಲವು ಮೂಲಸೌಕರ್ಯ ಕಾಮಗಾರಿಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದೆ. ಈ ಮೂಲಕ ಅದಾನಿ ಸಮೂಹವು ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುತ್ತಿದೆ. ಇಷ್ಟಾದರೂ ಅತ್ತ ಅಮೆರಿಕ ಮಾತ್ರ ಅದಾನಿ ಸಮೂಹದ ವಿರುದ್ಧ ದಾಖಲೆ ಇಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ, ಜಗತ್ತಿನ ಎದುರು ತಲೆತಗ್ಗಿಸುವ ಸ್ಥಿತಿ ಬಂದಿದೆ ಎಂಬ ಆರೋಪ ಕೇಳಿಬಂದಿದೆ.
ಅಮೆರಿಕದ ಮಹಾ ಎಡವಟ್ಟು ಬಹಿರಂಗ?
ಜಾಗತಿಕ ಮಟ್ಟದಲ್ಲಿ ಅಮೆರಿಕಗೆ ದೊಡ್ಡ ದೊಡ್ಡ ಸ್ನೇಹಿತರು ಇದ್ದರೂ, ಏಷ್ಯಾ ಭಾಗದಲ್ಲಿ ಭಾರತವೇ ದೊಡ್ಡ ಸ್ನೇಹಿತ. ಹೀಗಿದ್ದರೂ ಅಮೆರಿಕ ಗೌತಮ್ ಅದಾನಿ ಅವರ ವಿಚಾರದಲ್ಲಿ ಎಡವಿದ್ದು, ಭಾರತ ಮತ್ತು ಅಮೆರಿಕ ಸಂಬಂಧಕ್ಕೆ ಕೂಡ ಪೆಟ್ಟು ಕೊಟ್ಟಿದೆಯಾ? ಎನ್ನುವ ಅನುಮಾನ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಭಾರತದ ಆರ್ಥಿಕ ಪರಿಸರ ವ್ಯವಸ್ಥೆ ಪ್ರಮುಖ ವ್ಯಕ್ತಿ ಆಗಿರುವ ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ, ಅಮೆರಿಕದ ನ್ಯಾಯ ಇಲಾಖೆ ದೋಷಾರೋಪಣೆ ಮಾಡಿರುವುದು ಚರ್ಚೆಗೆ ವೇದಿಕೆ ಒದಗಿಸಿದೆ. ಅಲ್ಲದೆ, ಈ ವಿಚಾರದಲ್ಲಿ ಅಮೆರಿಕ ಅಜಾಗರೂಕತೆಯಿಂದ ತನ್ನ ಸ್ವಂತ ಹಿತಾಸಕ್ತಿಗಳನ್ನು ಹಾಳು ಮಾಡುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಾಲು ಸಾಲು ಮೂಲಸೌಕರ್ಯ ಕಾಮಗಾರಿ
ಹಿಂಡನ್‌ಬರ್ಗ್ ವರದಿ ಕೂಡ ಇದೇ ರೀತಿ ತಲೆಬುಡ ಇಲ್ಲದ ಆರೋಪ ಎಂಬ ಮಾತುಗಳು ಕೂಡ ಈಗ ಚರ್ಚೆಗೆ ಬಂದಿವೆ. ಪಶ್ಚಿಮ ನಿಜವಾಗಿಯೂ ಚೀನಾದ ಪ್ರಾಬಲ್ಯವನ್ನು ಎದುರಿಸುವ ಗುರಿ ಹೊಂದಿದ್ದರೆ ಅದು ಕಾರ್ಯತಂತ್ರದ ದೂರದೃಷ್ಟಿಯಿಂದಲೇ ಕಾರ್ಯನಿರ್ವಹಿಸಬೇಕಾಗಿದೆ ಎಂಬ ಸಲಹೆಗಳು ಈಗ ಕೇಳಿಬಂದಿವೆ. ಈಗಾಗಲೇ ಅದಾನಿ ಸಮೂಹವು ಹಲವು ಪ್ರಮುಖ ಬಂದರು, ವಿದ್ಯುತ್ ಸೌಕರ್ಯ ಸೇರಿದಂತೆ ಸಾಕಷ್ಟು ಮೂಲಸೌಕರ್ಯ ಕಾಮಗಾರಿಗಳನ್ನು ಮುನ್ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಅಮೆರಿಕ ಮತ್ತು ಅಲ್ಲಿನ ಸಂಸ್ಥೆಗಳು ಮಾಡಿಕೊಂಡ ಎಡವಟ್ಟು ಚರ್ಚೆಗೆ ಬರುತ್ತಿದೆ.












Click it and Unblock the Notifications