ಮೇ.27: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಮೇ.27: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

3.35: ಹಠ ಬಿಟ್ಟ ಅರವಿಂದ್ ಕೇಜ್ರಿವಾಲ್, ವೈಯಕ್ತಿಕ ಬಾಂಡ್ ಸಲ್ಲಿಸಿ ಜಾಮೀನು ಅರ್ಜಿ ಹಾಕಲು ಒಪ್ಪಿದ್ದಾರೆ. ನಿತಿನ್ ಗಡ್ಕರಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಮೇ.21 ರಿಂದ ಜೈಲುವಾಸಿಯಾಗಿದ್ದಾರೆ.
12.45: ಆಮ್ ವೇ ಸಿಇಒ ಬಂಧಿಸಿದ ಆಂಧ್ರ ಪೊಲೀಸರು. ಆಮ್ ವೇ ಸಂಸ್ಥೆ ಮೇಲೆ ಅಕ್ರಮವಾಗಿ ಹಣ ರವಾನೆ ಮಾಡಿದ ಆರೋಪವಿದೆ.
12.30: ವೈಯಕ್ತಿಕ ಬಾಂಡ್ ನೀಡಿ ಜೈಲಿನಿಂದ ಹೊರ ಬರುವಂತೆ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ ಸೂಚನೆ.

News in brief on May 27

12.20: ಮೇ.27 ರಂದು ಪಂಡಿತ್ ಜವಹಾರಲಾಲ್ ನೆಹರೂ ಅವರ 50ನೇ ಪುಣ್ಯತಿಥಿಯನ್ನು ದೇಶದೆಲ್ಲಡೆ ಆಚರಿಸಲಾಗುತ್ತಿದೆ.
12.15: ಸಚಿವ ಕಲ್ ರಾಜ್ ಮಿಶ್ರಾ ಹಾಗೂ ಮನೋಜ್ ಸಿನ್ಹಾ ಅವರನ್ನು ಗೋರಖ್ ಧಮ್ ಎಕ್ಸ್ ಪ್ರೆಸ್ ದುರಂತ ಸ್ಥಳದ ಪರಿಶೀಲನೆಗೆ ಕಳಿಸಿದ ಪ್ರಧಾನಿ ಮೋದಿ.
12.10: ದಕ್ಷಿಣ ಕಾಶ್ಮೀರದ ಬಳಿ ಭಾರತೀಯ ವಾಯುಸೇನೆಗೆ ಸೇರಿದ ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ.
11.12: ಭೂತಾನ್ ಪ್ರಧಾನಿ ತ್ಸಾರಿಂಗ್ ತೊಹ್ಬೆ, ಪಾಕ್ ಪ್ರಧಾನಿ ನವಾಜ್ ಷರೀಫ್ ಆವನ್ನು ಭೇಟಿ ಮಾಡಿದ ಮೋದಿ.
11.02: ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ದೇಶಗಳ ಪ್ರಧಾನಿ ಹಾಗೂ ಪ್ರತಿನಿಧಿಗಳ ಜತೆ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದ್ದಾರೆ.
10.55: ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು 12.45ಕ್ಕೆ ತಮ್ಮ ಕಚೇರಿಯಲ್ಲಿ ಅಧಿಕಾರವಹಿಸಿಕೊಳ್ಳಲಿದ್ದಾರೆ.
10.38: ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಸೆ ಅವರನ್ನು ಭೇಟಿ ಮಾಡಿದ ಮೋದಿ.
News in brief on May 27

10.25: ಉತ್ತರಪ್ರದೇಶದ ಗೋರಖ್ ದಮ್ ಎಕ್ಸ್ ಪ್ರೆಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರು ಹಾಗೂ ಗಾಯಗೊಂಡವರಿಗೆ 50,000 ರು ಪರಿಹಾರ ಧನ ಘೋಷಿಸಿದ ಮೋದಿ.
10.15: ಹೈದರಾಬಾದ್ ಹೌಸ್ ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಗಯೂಮ್ ರನ್ನು ಭೇಟಿ ಮಾಡಿದ ಮೋದಿ.
10.00: ತನ್ನ ಸಚಿವ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ ನರೇಂದ್ರ ಮೋದಿ.

9.45: ಉತ್ತರ ಚಿಲಿಯಲ್ಲಿ ಸುಮಾರು 7,000 ಹಳೆಯದಾರ ಮಮ್ಮಿಯನ್ನು ವಿದ್ಯಾರ್ಥಿಗಳ ಗುಂಪೊಂದು ಪತ್ತೆ ಮಾಡಿದೆ.
9.30: ಶಿಮ್ಲಾದ ಬಸ್ ದುರಂತದಲ್ಲಿ ಸುಮಾರು 13 ಜನ ದುರಂತ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+