ಹೆಡ್ ಲೈನ್ಸ್: ದೇಶ, ವಿದೇಶಗಳ ಚುಟುಕು ಸುದ್ದಿ

ಬೆಂಗಳೂರು, ಮೇ.14: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

4.25: ಬಿಜೆಪಿ ಜತೆ ಗೆಳೆತನ ಬೆಳೆಸುವ ಯಾವುದೇ ಮಾತುಕತೆ ನಡೆದಿಲ್ಲ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಹೇಳಿಕೆ.
4.00: ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬೀಳುವ ತನಕ ಯಾವುದೇ ಪಕ್ಷದ ಜತೆ ಮೈತ್ರಿ ಬಗ್ಗೆ ಮಾತನಾಡುವುದಿಲ್ಲ ಎಂದು ಜಯಲಲಿತಾ ಹೇಳಿಕೆ.
3.45: ಮೋದಿ ಜತೆ ಮೀಟಿಂಗ್ ತಪ್ಪಿಸಿ, ಭೋಪಾಲ್ ಗೆ ತೆರಳಿದ ಸುಷ್ಮಾರಿಂದ ರಾಜನಾಥ್, ಗಡ್ಕರಿ ಭೇಟಿ ಮಾತುಕತೆ.
3.30: ವಿಶ್ವಕಪ್ ಗೆ ಭಾರತ ಹಾಕಿ ತಂಡ ವನ್ನು ಪ್ರಕಟಿಸಲಾಗಿದ್ದು ಸರ್ದಾರ ಸಿಂಗ್ ನಾಯಕರಾಗಿದ್ದಾರೆ.

Sharad Pawar

1.20: ಹೈದರಾಬಾದಿನಲ್ಲಿ ರಾಜಕೀಯ ಗಲಭೆ ಎರಡು ಜೀವಗಳ ಬಲಿ.
1.00: ಸುಷ್ಮಾರಿಂದ ಅಡ್ವಾಣಿಗೆ ಮೂರು ಹುದ್ದೆಗಳ ಆಫರ್. ಚೇರ್ಮನ್, ಸ್ಪೀಕರ್ ಅಥವಾ ಎನ್ ಡಿಎ ಸಂಚಾಲಕ.
12.45: ಬಿಜೆಪಿಗೆ ನಮ್ಮ ಬೆಂಬಲವಿದೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮತ್ತೊಮ್ಮೆ ಸ್ಪಷ್ಟನೆ.
12.30: ಎನ್ ಡಿಎ ಅಧಿಕಾರಕ್ಕೆ ಬಂದರೆ ಅರುಣ್ ಜೇಟ್ಲಿ ಅವರಿಗೆ ಆರ್ಥಿಕ ಖಾತೆ, ಸುಷ್ಮಾ ಸ್ವರಾಜ್ ಗೆ ರಕ್ಷಣಾ ಖಾತೆ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ.
12.15: ಈ ನಡುವೆ ಎನ್ ಡಿಎಗೆ ಅಧಿಕಾರಕ್ಕೆ ಬಂದರೆ ಪ್ರಮುಖ ಪಾತ್ರ ವಹಿಸಲು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸಿದ್ಧವಾಗುತ್ತಿದೆ.
12.00: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್.
11.45: ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು ಬಿಜೆಪಿ ಜತೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದಾರೆ.
11.30: ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸುಮಾರು 201 ಜನ ಸಾವು, ನೂರಾರು ಮಂದಿಗೆ ಗಾಯ. ಗಣಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
Top news in brief for the day

11.00: ಬಿಜೆಪಿ ಪ್ರಾದೇಶಿಕ ಪಕ್ಷಗಳತ್ತ ಮುಖ ಮಾಡಿದ್ದು, ಸರ್ಕಾರ ರಚನೆಗೆ ಯಾವ ಪಕ್ಷದ ಜತೆ ಮೈತ್ರಿ ಸೂಕ್ತ ಎಂಬ ಚರ್ಚೆ ಆರಂಭವಾಗಿದೆ.
10.45: ಮೇ.16 ರಂದು ಬಿಜೆಪಿ ಸಂಸದೀಯ ಸಮಿತಿ ಸಭೆ ನಡೆಯಲು ನಿಗದಿಯಾಗಿದೆ.
10.30: ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಮತ್ತೆ ಸುದ್ದಿಯಲ್ಲಿ, ಉಗ್ರರೆಲ್ಲ ಒಂದೇ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ ಏಕೆ? ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
10.15: ಮೋದಿ ವೀಸಾ ಬಗ್ಗೆ ಅಮೆರಿಕ ತನ್ನ ನಿಲುವು ಪ್ರಕಟಿಸಿದ್ದು, ರಾಜ್ಯ ಹಾಗೂ ರಾಷ್ಟ್ರದ ಮುಖ್ಯಸ್ಥರು ಏ 1 ವೀಸಾ ಪಡೆಯಲು ಅರ್ಹರಾಗಿದ್ದಾರೆ ಎಂದಿದೆ.
10.00: ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಯಾವುದೇ ತನಿಖೆ ಬಾಕಿ ಉಳಿದಿಲ್ಲವೆಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.ಹೀಗಾಗಿ ಕ್ಲೀನ್ ಚಿಟ್ ಪಡೆದ ಗಡ್ಕರಿ ಮತ್ತೊಮ್ಮೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+