ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.20: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಅ.20: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

16.00:
ಆಂಧ್ರಪ್ರದೇಶದ ಪೂರ್ವ ಗೋದಾವರಿಯ ಕಾಕಿನಾಡಲ್ಲಿ ಪಟಾಕಿ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ತಗುಲಿದ್ದು 10 ಜನ ಸಾವನ್ನಪ್ಪಿರುವ ದುರಂತ ಸಂಭವಿಸಿದೆ.

15.15: ಶಿವಸೇನಾ ಶಾಸಕಾಂಗ ಸಭೆ ಮುಕ್ತಾಯ, ಬಿಜೆಪಿ ಜೊತೆ ಮೈತ್ರಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ವಕ್ತಾರರಿಂದ ಸ್ಪಷ್ಟನೆ

15.00:
ಬಿಜೆಪಿ -ಶಿವಸೇನಾ ಮೈತ್ರಿ ಬಗ್ಗೆ ಬಿಜೆಪಿ ನಿರ್ಧಾರವೇ ಅಂತಿಮ : ಭೈಯಾಜೀ ಜೋಶಿ, ಆರೆಸ್ಸೆಸ್

2.40:
ಬಿಹಾರದ ಮಾಜಿ ಸಿಎಂ ನಿತೀಶ್ ಕುಮಾರ್ ಅವರು ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಹಾ ಧರಣಿ ಕೈಗೊಂಡಿದ್ದಾರೆ.

Nitish Kumar

13.15: ನಾನು ಮಹಾರಾಷ್ಟ್ರ ಸಿಎಂ ರೇಸಿನಲ್ಲಿಲ್ಲ, ನಾನು ಕೇಂದ್ರ ಸಚಿವ ಸ್ಥಾನವನ್ನು ತೊರೆಯುತ್ತಿಲ್ಲ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಪುನರುಚ್ಚರಿಸಿದ್ದಾರೆ

11.30:
ಹರ್ಯಾಣ ಸಿಎಂ ಆಯ್ಕೆ ಪ್ರಕ್ರಿಯೆ ಮಂಗಳವಾರಕ್ಕೆ ಮುಂದೂಡಿದ ಬಿಜೆಪಿ. ರೇಸಿನಲ್ಲಿ ಕ್ಯಾಪ್ಟನ್ ಅಭಿಮನ್ಯು ಮುಂದೆ.
Nitin Gadkari

11.00:

ರಾಜನಾಥ್ ಸಿಂಗ್ ಹಾಗೂ ಜೆಪಿ ನಡ್ಡಾ ಅವರು 3 ಗಂಟೆ ಮುಂಬೈಗೆ ಆಗಮಿಸಲಿದ್ದು, ನೂತನ ಸಿಎಂ ಆಯ್ಕೆ ಮಾಡಲಿದ್ದಾರೆ.

10.35:
2ಜಿ ಹಗರಣದ ಆರೋಪಿಗಳಾದ ಮಾಜಿ ಟೆಲಿಕಾಂ ಸಚಿವ ಎ ರಾಜ ಹಾಗೂ ಕನ್ನಿಮೋಳಿ ಅವರ ವಿರುದ್ಧ ವಿಚಾರಣೆಯನ್ನು ಸಿಬಿಐ ವಿಶೇಷ ಕೋರ್ಟ್ ನಿಂದ ಅಕ್ಟೋಬರ್ 31ಕ್ಕೆ ಮುಂದೂಡಲಾಗಿದೆ.

10.25:
ಬಿಜೆಪಿ ಜೊತೆ ಕೈಜೋಡಿಸಲು ಎನ್ ಸಿಪಿ ಮುಂದಾಗಿರುವುದನ್ನು ನೋಡಿದರೆ ಕಾಂಗ್ರೆಸ್ ಜೊತೆ ಏಕೆ ಮೈತ್ರಿ ಕಳೆದುಕೊಂಡರು ಎಂಬುದು ಅರ್ಥವಾಗುತ್ತದೆ: ರಷೀದ್ ಅಲಿ, ಕಾಂಗ್ರೆಸ್.
Updates India, International News in Brief Oct 20


10.15:
ಸೇನಾ ಭವನದಲ್ಲಿ ಶಿವಸೇನಾ ಶಾಸಕರ ಸಭೆ ನಡೆಸಲಾಗುತ್ತಿದ್ದು, ಅಸೆಂಬ್ಲಿ ಚುನಾವಣೆ ಫಲಿತಾಂಶ ಹಾಗೂ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.

10.00:
ವಾರಣಾಸಿಯಲ್ಲಿ ಮುಸ್ಲಿಂ ಸಮುದಾಯದವರು ದೀಪಾವಳಿ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ.

9.45:
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಚಂಡಮಾರುತ ಪೀಡಿತ ಒಡಿಶಾ ಜಿಲ್ಲೆಯ ಕೊರಪಟ್ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

9.30:
ಹರ್ಯಾಣದಲ್ಲಿ ಕ್ಯಾಪ್ಟನ್ ಅಭಿಮನ್ಯು ಅವರು ಸಿಎಂ ಸ್ಥಾನದ ರೇಸಿನಲ್ಲಿ ಮುಂಚೂಣಿಯಲ್ಲಿದ್ದಾರೆ.
English summary
Top News of the today :Former CM Nitish Kumar holds 'Mahadharna' against PM Narendra Modi at Patna's Gandhi Maidan seeking special status to Bihar and other news updates from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X