ಸಾಲ ಹಿಂದಿರುಗಿಸಲು ಹೇಳಿದ್ದಕ್ಕೆ ಮರಕ್ಕೆ ಕಟ್ಟಿ ಥಳಿತ

ಡಿಯೋರಿಯಾ, ಮಾರ್ಚ್ 30: ಸಾಲ ಹಿಂದಿರುಗಿಸಲು ಕೇಳಿದ್ದಕ್ಕಾಗಿ ಯುವಕನೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಡಿಯೊರಿಯಾ ಎಂಬಲ್ಲಿ ನಡೆದಿದೆ. ಯುವಕನನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ತನ್ನ ಬಳಿ ಸಾಲ ಪಡೆದಿದ್ದ ಕೆಲವರ ಬಳಿ ಸಾಲ ವಾಪಸ್ ಪಡೆಯಲೆಂದು ಯುವಕ ತೆರಳಿದ್ದಾನೆ. ಈ ಸಂದರ್ಭದಲ್ಲಿ ಸಾಲ ಹಿಂದಿರುಗಿಸಲು ಇಷ್ಟವಿಲ್ಲದ ಯುವಕರು ಆತನನ್ನು ಮರವೊದಕ್ಕೆ ಕಟ್ಟಿ, ಕೋಲು ಮತ್ತು ಬೆಲ್ಟಿನಿಂದ ಚೆನ್ನಾಗಿ ಥಳಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪ್ರಮುಖ ಆರೋಪಿಯನ್ನು ಬಂಧದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.

UP: Youth thrashed for asking to return borrowed money

ಪತ್ನಿ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ನೂರಾರು ಜನರ ನಡುವಲ್ಲಿ ಪತಿಯೇ ಥಳಿಸಿದ ಹೀನಾತಿಹೀನ ಘಟನೆ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬುಲಂದ್ಶರ್ ನಲ್ಲಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+