Financial support to child girl: ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾದ ಯುಪಿ ಸರ್ಕಾರ!
ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಉತ್ತರ ಪ್ರದೇಶ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು ಇತರೆ ರಾಜ್ಯಗಳಿಗೂ ಮಾದರಿಯಾಗಿದೆ. ಆ ಯೋಜನೆ ಯಾವುದು? ಅದರಿಂದ ಹೆಣ್ಣು ಮಕ್ಕಳಿಗಾಗುವ ಪ್ರಯೋಜನಗಳೇನು ತಿಳಿಯೋಣ.
ಲಕ್ನೋ ಫೆಬ್ರವರಿ 25: ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಉತ್ತರ ಪ್ರದೇಶ ಸರ್ಕಾರ 'ಕನ್ಯಾ ಸುಮಂಗಲಾ' ಎಂಬ ಯೋಜನೆಯನ್ನು ಆರಂಭಿಸಿದೆ. ಕಂತುಗಳಲ್ಲಿ ಹಣವನ್ನು ಒದಗಿಸುವ ಈ ಯೋಜನೆಗೆ ಯುಪಿ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ 1053 ಕೋಟಿ ರೂ. ಮಂಜೂರು ಮಾಡಿದೆ. ಪದವಿಗಾಗಿ ಅರ್ಜಿ ಸಲ್ಲಿಸುವವರೆಗೆ ಆರ್ಥಿಕ ಸಹಾಯವನ್ನು ಒದಗಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
ಒಂದು ಕಾಲದಲ್ಲಿ ಭಾರತದಲ್ಲಿ ಹೆಣ್ಣು ಶಿಶು ಹತ್ಯೆ ಸಾಮಾನ್ಯವಾಗಿತ್ತು. ಹಿಂದುಳಿದ ಸಮಾಜದಲ್ಲಿ ಪುರುಷನನ್ನು ಅದೃಷ್ಟವಂತ ಮತ್ತು ಹೆಣ್ಣನ್ನು ದುರಾದೃಷ್ಟ ಎಂದು ಪರಿಣಿಸಲಾಗುತ್ತಿತ್ತು. ಹೆಣ್ಣು ಮಕ್ಕಳೆಂದರೆ ಬರೀ ದುಂದು ವೆಚ್ಚ. ತಂದೆ-ತಾಯಿಗಳಿಗೆ ಲಾಭ ತಂದುಕೊಡುವುದಿಲ್ಲ ಎಂಬ ಸ್ವಾರ್ಥ ಮತ್ತು ಹಿಂದುಳಿದ ಚಿಂತನೆ ಸಾವಿರಾರು ಹೆಣ್ಣು ಶಿಶುಗಳ ಹತ್ಯೆಗೆ ಕಾರಣವಾಗಿದೆ. ಆದರೆ, ಬದಲಾದ ಕಾಲದಿಂದ ಕಲಿತ ಪಾಠಗಳು ಮತ್ತು ಸರ್ಕಾರ ಕೈಗೊಂಡ ಜಾಗೃತಿ ಅಭಿಯಾನಗಳಿಂದ ಹೆಣ್ಣು ಶಿಶುಹತ್ಯೆ ಶೇಕಡಾ 96ರಷ್ಟು ಕಡಿಮೆಯಾಗಿದೆ.

ಓದಲು ಕಳುಹಿಸಿದ ಪಾಲಕರು
ಇಂದಿಗೂ ಕೆಲ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ದರಿಲ್ಲ. ಕೆಲವು ರಾಜ್ಯಗಳಲ್ಲಿ ಅವರನ್ನು ಮನೆಗೆಲಸಕ್ಕೆ ತಳ್ಳಿ ನಂತರ ಮದುವೆ ಮಾಡುವ ಪದ್ದತಿ ಇದೆ. ದಕ್ಷಿಣದ ರಾಜ್ಯಗಳಲ್ಲಿ ಈ ಪದ್ದತಿ ತೀರಾ ಕಡಿಮೆ. ಆದರೆ ಉತ್ತರಪ್ರದೇಶ, ಬಿಹಾರ, ಹರಿಯಾಣ, ರಾಜಸ್ಥಾನ ಮತ್ತು ಉತ್ತರಖಂಡ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಇದನ್ನು ವ್ಯಾಪಕವಾಗಿ ಕಾಣಬಹುದು. ಇದರ ಪರಿಣಾಮವಾಗಿ ಹೆಣ್ಣುಮಕ್ಕಳು ಗಮನಾರ್ಹವಾಗಿ ಹಿಂದುಳಿಯುತ್ತಿದ್ದಾರೆ.

1053 ಕೋಟಿ ಮೀಸಲು
ಇದನ್ನು ಗಮನದಲ್ಲಿಟ್ಟುಕೊಂಡು ಉತ್ತರಪ್ರದೇಶ ಸರ್ಕಾರ ಈಗ ಅದ್ಬುತ ಯೋಜನೆಯೊಂದನ್ನು ತಂದಿದೆ. ಕೆಲವು ದಿನಗಳ ಹಿಂದೆ ಉತ್ತರಪ್ರದೇಶ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಸಂದರ್ಭದಲ್ಲಿ ಯೋಜನೆಯೊಂದನ್ನು ಪರಿಚಯಿಸಲಾಯಿತು. 'ಕನ್ಯಾ ಸುಮಂಗಲಾ' ಹೆಸರಿನ ಈ ಯೋಜನೆಗೆ ಈ ವರ್ಷವೊಂದರಲ್ಲೇ ಯುಪಿ ಸರ್ಕಾರ 1053 ಕೋಟಿಯನ್ನು ಮೀಸಲಿಟ್ಟಿದೆ. ಈ ಯೋಜನೆಯಡಿ ಹೆಣ್ಣು ಮಕ್ಕಳ ಕುಟುಂಬಗಳಿಗೆ ತಲಾ 15 ಸಾವಿರ ನೀಡುವುದಾಗಿ ಘೋಷಿಸಲಾಗಿದೆ. ಈ ಮೊತ್ತವನ್ನು ಒಟ್ಟು ಆರು ಕಂತುಗಳಲ್ಲಿ ಪಾವತಿಸಲಾಗುವುದು.

ಯೋಜನೆ ಪ್ರಯೋಜ ಪಡೆಯುವ ಅರ್ಹತೆಗಳೇನು?
ಈ ಯೋಜನೆಯಡಿ ಸೇರಲು ಬಯಸುವ ಕುಟುಂಬವು ಉತ್ತರಪ್ರದೇಶದ ಖಾಯಂ ನಿವಾಸಿಯಾಗಿರಬೇಕು. ಗರಿಷ್ಠ ಎರಡು ಹೆಣ್ಣು ಮಕ್ಕಳಿರಬೇಕು. ಕುಟುಂಬದ ವಾರ್ಷಿಕ ಆದಾಯ ಮೂರು ಲಕ್ಷಕ್ಕಿಂತ ಕಡಿಮೆ ಇರಬೇಕು. ದತ್ತು ಪಡೆದ ಹೆಣ್ಣು ಮಕ್ಕಳು ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಒಂದು ವೇಳೆ ಒಂದು ಕುಟುಂಬ ಅವಳಿ ಹೆಣ್ಣು ಮತ್ತು ಮೂರನೇ ಹೆಣ್ಣು ಮಗುವನ್ನು ಹೊಂದಿದ್ದರೆ ಅವರೂ ಕೂಡ ಈ 'ಕನ್ಯಾ ಸುಮಂಗಲಾ' ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಏಪ್ರಿಲ್ 1,2015ರಂದು ಅಥವಾ ನಂತರ ಜನಿಸಿದ ಹೆಣ್ಣು ಮಕ್ಕಳ ಕುಟುಂಬ ಕೂಡ ಸಹ ಈ ಯೋಜನೆಯ ಅಡಿಯಲ್ಲಿ ಬರುತ್ತಾರೆ.

ಹುಟ್ಟಿನಿಂದ ಪದವಿಯವರೆಗೆ ಆರ್ಥಿಕ ಸಹಾಯ
ಹೆಣ್ಣು ಮಗು ಜನಿಸಿದ ತಕ್ಷಣ ಪೋಷಕರಿಗೆ 2000 ರೂ. ಅವರ ಮೊದಲ ಹುಟ್ಟುಹಬ್ಬಕ್ಕೆ ನೀಡಲಾಗುತ್ತದೆ. ಲಸಿಕೆ ನಂತರ ಅವರಿಗೆ 1000 ನೀಡಲಾಗುತ್ತದೆ. ನಂತರ ಮಗುವನ್ನು ಶಾಲೆಯ ಒಂದನೇ ತರಗತಿಗೆ ಸೇರಿಸಿದಾಗ ಅವರಿಗೆ 2000 ರೂ. ಆರನೇ ತರಗತಿ ಪ್ರವೇಶಕ್ಕೆ 2000 ಮತ್ತು 9ನೇ ತರಗತಿ ಪ್ರವೇಶಕ್ಕೆ 3000 ರೂ ನೀಡಲಾಗುತ್ತದೆ. ಆ ನಂತರ ಬಾಲಕಿ 10 ಅಥವಾ 12ನೇ ತರಗತಿ ಮುಗಿಸಿ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗೆ ದಾಖಲಾದಾಗ ಅವರಿಗೆ 5000 ರೂ. ಹಣವನ್ನು ನೇರವಾಗಿ ಸಂಬಂಧಪಟ್ಟ ಬಳಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಆ ಆರ್ಥಿಕ ಬೆಂಬಲದಿಂದಾಗಿ ಬಡವರು ಸಹ ತಮ್ಮ ಹೆಣ್ಣುಮಕ್ಕಳನ್ನು ಶಾಲೆ ಮತ್ತು ಕಾಲೇಜಿಗೆ ಕಳುಹಿಸಲು ಆಸಕ್ತಿ ವಹಿಸುತ್ತಾರೆ. ದೂರದೃಷ್ಟಿಯೊಂದಿಗೆ ಯುಪಿ ಸರ್ಕಾರ ತಂದಿರುವ ಈ ಯೋಜನೆ ಇತರೆ ರಾಜ್ಯಗಳಿಗೂ ಮಾದರಿಯಾಗುವುದರಲ್ಲಿ ಸಂಶಯವಿಲ್ಲ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications