ದಿ ಕೇರಳ ಸ್ಟೋರಿ ಸಿನೆಮಾ ನೋಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ಮೃತಿ ಇರಾನಿ
ಬೆಂಗಳೂರು, ಮೇ 9: ವಿವಾದದಿಂದ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಸ್ಮೃತಿ ಇರಾನಿ ಅವರು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿದ್ದಾರೆ.
#WATCH | Delhi: Union Minister Smriti Irani arrives at a cinema hall in Chanakyapuri to watch the film 'The Kerala Story'. pic.twitter.com/llpZA0ZLDB
— ANI (@ANI) May 9, 2023
ಮಂಗಳವಾರ ಕುಟುಂಬ ಸಮೇತ ದಿ ಕೇರಳ ಸಿನಿಮಾ ವೀಕ್ಷಿಸಿದ ಪ್ರಹ್ಲಾದ್ ಜೋಶಿ ಅವರು ಇಂದು ಪಕ್ಕದ ರಾಜ್ಯದಲ್ಲಿ ಶಾಂತಿ ಕದಡಿದ ಸಮಸ್ಯೆ ನಾಳೆ ನಮ್ಮ ರಾಜ್ಯದಲ್ಲಿ ತನ್ನ ಉಪಟಳ ಶುರು ಮಾಡಬಹುದು. ಎಲ್ಲರೂ ಜಾಗೃತರಾಗಬೇಕಿದೆ. ಇಂತಹ ಕರಾಳ ಸತ್ಯವನ್ನು ನಮ್ಮೆದುರು ತಂದಿಟ್ಟ ಚಿತ್ರದ ನಿರ್ದೇಶಕರಿಗೆ, ನಿರ್ಮಾಪಕರಿಗೆ ಹಾಗೂ ಪೂರ್ತಿ ಚಿತ್ರ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಮುಮದುವರೆದು ಭಾರತದ ಸಾಮಾಜಿಕ ವ್ಯವಸ್ಥೆಯ ಆತ್ಮವಾಗಿರುವ ಕುಟುಂಬ ವ್ಯವಸ್ಥೆಗೆ ಕೈ ಹಾಕಿ, ಮಹಿಳೆಯರ ಗೌರವಕ್ಕೆ ಧಕ್ಕೆ ತಂದು, ನಮ್ಮ ಸಂಸ್ಕೃತಿಯ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಅಸುರಿ ಶಕ್ತಿಗಳು ಹಲವು ದಶಕಗಳಿಂದ ಮಾಡುತ್ತಿವೆ. ದೇಶದ ಸುರಕ್ಷತೆಗೆ ಧಕ್ಕೆ ತರಲು ಯಾವೆಲ್ಲ ರೀತಿಯ ಹುನ್ನಾರಗಳು ನಡೆಯುತ್ತವೆ ಎಂಬುದನ್ನು ತಿಳಿಯಲು "ದಿ ಕೇರಳ ಸ್ಟೋರಿ" ಖಂಡಿತವಾಗಿ ಎಲ್ಲರೂ ವೀಕ್ಷಿಸಬೇಕು ಎಂದು ಹೇಳಿದ್ದಾರೆ.
ಸಚಿವ ಪ್ರಹ್ಲಾದ್ ಜೋಶಿ ಅಲ್ಲದೆ ಮಂಗಳವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಚಾಣಕ್ಯಪುರಿ ಚಿತ್ರಮಂದಿರಕ್ಕೆ ಆಗಮಿಸಿ 'ದಿ ಕೇರಳ ಸ್ಟೋರಿ' ಚಿತ್ರ ವೀಕ್ಷಿಸಿದ್ದಾರೆ. ದಿ ಕೇರಳ ಸಿನಿಮಾ ಬಿಡುಗಡೆಯಾದಗಿನಿಂದ ವಿವಾದದ ಕೇಂದ್ರ ಬಿಂದುವಾಗಿದೆ. ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ಸಿನಿಮಾ ಪ್ರದರ್ಶನಕ್ಕೆ ತೆರಿಗೆ ರಿಯಾಯಿತಿ ಘೋಷಿಸಿದರೆ, ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿಷೇಧ ವಿಧಿಸಲಾಗಿದೆ. ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನ ಮಾಡುವುದಿಲ್ಲ ಎಂದು ಚಿತ್ರ ಮಂದಿರಗಳ ಮಾಲೀಕರು ಹೇಳಿದ್ದಾರೆ.

ಇನ್ನು ದಿ ಕೇರಳ ಸ್ಟೋರಿ ಸಿನಿಮಾ ನಿರ್ಮಾಪಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಹೇಳಿಕೆ ನೀಡಿದ್ದಾರೆ. ಇದೇ ಮೇ 5ರಂದು ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗಿದೆ. ಈ ಮಧ್ಯೆ ವಿವಾದಿತ ಹಿಂದಿ ಸಿನಿಮಾ 'ದಿ ಕೇರಳ ಸ್ಟೋರಿ' ಚಿತ್ರದ ಸಿಬ್ಬಂದಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರತಂಡದ ಸಿಬ್ಬಂದಿಗೆ ಭದ್ರತೆ ಒದಗಿಸಲಾಗಿದೆ.
{document1}












Click it and Unblock the Notifications