ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್‌ ಲಸಿಕೆಗೆ WHO ಅನುಮೋದನೆ ಸಂಬಂಧ ಆರೋಗ್ಯ ಸಚಿವರ ಚರ್ಚೆ

|
Google Oneindia Kannada News

ನವದೆಹಲಿ, ಆಗಸ್ಟ್ 12: ಭಾರತದಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಭಾರತ್ ಬಯೋಟೆಕ್‌ನ "ಕೋವ್ಯಾಕ್ಸಿನ್" ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ WHO ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಮೊದಲ ಎರಡು ಕೊರೊನಾ ಲಸಿಕೆಗಳಲ್ಲಿ ಕೋವ್ಯಾಕ್ಸಿನ್ ಕೂಡ ಒಂದು. ಆದರೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಬಾಕಿ ಇದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅರ್ಜಿ ಹಾಕಿದ್ದು, ಸೆಪ್ಟೆಂಬರ್‌ನಲ್ಲಿ ಅನುಮೋದನೆ ನಿರೀಕ್ಷೆಯಿದೆ.

ಕೋವ್ಯಾಕ್ಸಿನ್ ಲಸಿಕೆ ಪ್ರಭಾವದ ಕುರಿತು ಭಾರತ್ ಬಯೋಟೆಕ್ ವರದಿ ಸಲ್ಲಿಕೆಕೋವ್ಯಾಕ್ಸಿನ್ ಲಸಿಕೆ ಪ್ರಭಾವದ ಕುರಿತು ಭಾರತ್ ಬಯೋಟೆಕ್ ವರದಿ ಸಲ್ಲಿಕೆ

ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವಂತೆ ಭಾರತ್ ಬಯೋಟೆಕ್‌ ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್‌ ತುರ್ತು ಬಳಕೆಯ ಪಟ್ಟಿಗೆ (ಇಯುಎಲ್) ಸೇರಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿಕೊಂಡಿದೆ. ನಾವು ಶೀಘ್ರದಲ್ಲಿಯೇ ಡಬ್ಲ್ಯುಎಚ್‌ಒನಿಂದ ಇಯುಎಲ್ ಸ್ವೀಕರಿಸುತ್ತೇವೆ ಎಂಬ ನಿರೀಕ್ಷೆಯೊಂದಿಗೆ ಪರಿಶೀಲನಾ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿಕೊಂಡಿದೆ.

Union Minister Mansukh Mandaviya Meets WHO Chief Scientist To Discusses WHOs Approval Of Covaxin

"ನಾವು ಕೋವ್ಯಾಕ್ಸಿನ್ ದತ್ತಾಂಶಗಳ ಮೇಲೆ ಗಮನ ಹರಿಸಿದ್ದು, ಭಾರತ್ ಬಯೋಟೆಕ್ ಈಗ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸಿದೆ. ನಾವು ಪ್ರಸ್ತುತ ಇಯುಎಲ್‌ನೊಂದಿಗೆ ಆರು ಲಸಿಕೆಗಳನ್ನು ಅನುಮೋದಿಸಿದ್ದೇವೆ ಮತ್ತು ನಮ್ಮ ಸ್ಟ್ರಾಟೆಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್ (ಎಸ್‌ಎಜಿಇ) ಯಿಂದ ಹಲವು ಲಸಿಕೆಗಳ ಶಿಫಾರಸುಗಳನ್ನು ಹೊಂದಿದ್ದೇವೆ. ದತ್ತಾಂಶ ನಮಗೆ ದೊರೆತ ಕೂಡಲೇ ಸಮಿತಿಯಿಂದ ಪರಿಶೀಲನಾ ಕಾರ್ಯ ಪ್ರಾರಂಭಿಸುತ್ತೇವೆ" ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದರು.

ಪ್ರಸ್ತುತ ಕೋವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ಡಿಸಿಜಿಐ ಅನುಮೋದನೆ ನೀಡಿದ್ದು, ಭಾರತದಲ್ಲಿ ಈ ಲಸಿಕೆಯನ್ನು ಎಲ್ಲೆಡೆ ನೀಡಲಾಗುತ್ತಿದೆ. ಆದರೆ ಈಚೆಗೆ ಲಸಿಕೆಯ ವೈದ್ಯಕೀಯ ಪ್ರಯೋಗಗಳ ಮಾಹಿತಿ ಕೊರತೆಯನ್ನು ಉಲ್ಲೇಖಿಸಿದ್ದ ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಕ ಸಂಸ್ಥೆ, ಈ ಲಸಿಕೆಯ ತುರ್ತು ಬಳಕೆಯ ದೃಢೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದು ವಿದೇಶಗಳಲ್ಲಿ ಅನುಮೋದನೆ ಪಡೆಯಲು ಕೋವ್ಯಾಕ್ಸಿನ್‌ ಗೆ ಅಡೆತಡೆಗಳನ್ನು ಉಂಟು ಮಾಡಿದೆ.

ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ದತ್ತಾಂಶ ಕೊರತೆ ಕಾರಣವಾಗಿ ಕೋವ್ಯಾಕ್ಸಿನ್‌ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಲು ಹಿಂದೇಟು ಹಾಕಿತ್ತು. ಈ ದತ್ತಾಂಶ, ಲಸಿಕೆಯ ರಫ್ತಿಗೆ ಹಾಗೂ ಲಸಿಕೆ ಪಾಸ್‌ಪೋರ್ಟ್‌ ಪಡೆದುಕೊಳ್ಳಲು ಅತ್ಯವಶ್ಯಕವಾಗಿದೆ.

ದೇಶದಲ್ಲಿ ಉತ್ಪಾದನೆಯಾಗುತ್ತಿರುವ "ಕೋವ್ಯಾಕ್ಸಿನ್" ದಕ್ಷತೆ ಬಗ್ಗೆ ಮೊದಲಿನಿಂದಲೂ ಕೆಲವು ಆಕ್ಷೇಪಗಳು ಕೇಳಿಬಂದಿದ್ದವು. ಮೂರನೇ ಹಂತದ ಪ್ರಯೋಗದ ವರದಿಯಿಲ್ಲದೇ ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದ್ದು ಮೊದಲು ಆಕ್ಷೇಪಕ್ಕೆ ಕಾರಣವಾಗಿತ್ತು. ಆರಂಭಿಕ ಹಂತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಕಾರ್ಯಕರ್ತರು ಹಿಂದೇಟು ಹಾಕಿದ ಸಂಗತಿಗಳೂ ನಡೆದಿದ್ದವು.

ಕೋವಿಶೀಲ್ಡ್-ಕೋವ್ಯಾಕ್ಸಿನ್ ಮಿಶ್ರಿತ ಲಸಿಕೆ ಪ್ರಯೋಗಕ್ಕೆ ಅನುಮತಿಕೋವಿಶೀಲ್ಡ್-ಕೋವ್ಯಾಕ್ಸಿನ್ ಮಿಶ್ರಿತ ಲಸಿಕೆ ಪ್ರಯೋಗಕ್ಕೆ ಅನುಮತಿ

ಆನಂತರ ಹಲವು ಅಧ್ಯಯನಗಳ ಸಾಕ್ಷ್ಯಗಳನ್ನು ಸಂಸ್ಥೆ ಒದಗಿಸಿತ್ತು. ಕೋವ್ಯಾಕ್ಸಿನ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ 77.8% ದಕ್ಷತೆ ತೋರಿರುವುದು ಸಾಬೀತಾಗಿದೆ ಎಂದು ಹೇಳಿಕೊಂಡಿತ್ತು. ಗಂಭೀರ ಕೊರೊನಾ ಸೋಂಕಿನ ವಿರುದ್ಧವೂ ಭಾರತ್ ಬಯೋಟೆಕ್ ಲಸಿಕೆ 93.4% ಪರಿಣಾಮಕಾರಿಯಾಗಿದೆ. ಜೊತೆಗೆ ಈಗಿರುವ ಅಪಾಯಕಾರಿ ಡೆಲ್ಟಾ ವಿರುದ್ಧ 65.2% ರಕ್ಷಣೆ ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿತ್ತು.

Union Minister Mansukh Mandaviya Meets WHO Chief Scientist To Discusses WHOs Approval Of Covaxin

ಈಚೆಗೆ ಹಂಗೇರಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸಿ ಹಾಗೂ ನ್ಯೂಟ್ರಿಷನ್ ಕೋವ್ಯಾಕ್ಸಿನ್ ಲಸಿಕೆಗೆ ಉತ್ತಮ ಉತ್ಪಾದನಾ ಗುಣಮಟ್ಟಕ್ಕೆ ಪ್ರಮಾಣ ಪತ್ರ ನೀಡಿತ್ತು.

ಇದೀಗ ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಡೋಸ್‌ಗಳ ಮಿಶ್ರಣ ಪ್ರಯೋಗಕ್ಕೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.

English summary
Union Minister Mansukh Mandaviya meets WHO Chief Scientist Dr Soumya Swaminathan, discusses WHO's approval of Covaxin
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X