ಹಲವು ಮಹತ್ವದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ನವದೆಹಲಿ, ಸೆಪ್ಟೆಂಬರ್ 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೋಟ್ಯಂತರ ವೆಚ್ಚದ ಹಲವು ಪ್ರಮುಖ ಯೋಜನೆಗಳಿಗೆ ಅಸ್ತು ಎಂದಿದೆ.

ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಸಂಪುಟವು ಅಭಿವೃದ್ಧಿಗೆ ಪೂರಕವಾದ ಹಲವು ಯೋಜನೆಗಳಿಗೆ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.

Union cabinet approves several schems and decissions

ಕೇಂದ್ರ ಸಂಪುಟವು ಹಲವು ಪ್ರಮುಖ ಯೋಜನೆಗಳಿಗೆ ಅಸ್ತು ಎಂದಿದ್ದು ಅವುಗಳಲ್ಲಿ ಪ್ರಮುಖವಾದ ಯೋಜನೆಗಳ ಪಟ್ಟಿ ಇಲ್ಲಿದೆ..

* ಪಾಟ್ನಾದಲ್ಲಿ ಡೊಮೆಸ್ಟಿಕ್‌ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ

* ಕಾಮಗಾರಿ ಪೂರ್ಣವಾಗಿರದ ಹೊಟೆಲ್‌ ಗುಲ್ಮರ್ಗ್ ಅಶೋಕ್ ಹಾಗೂ ಹೊಟೆಲ್ ಪಾಟಲಿಪುತ್ರ ಅಶೋಕ್ ಕಾಮಗಾರಿಗಳನ್ನು ರಾಜ್ಯ ಸರ್ಕಾರಗಳಿಗೆ ಒಪ್ಪಿಸಲು ಒಪ್ಪಿಗೆ ಸೂಚಿಸಲಾಗಿದೆ. ಈ ಎರಡು ಕಾಮಗಾರಿಗಳು ಕ್ರಮವಾಗಿ ಜಮ್ಮು ಕಾಶ್ಮೀರ ಮತ್ತು ಪಟ್ನಾ ಸರ್ಕಾರದ ಸುಪದ್ರಿಗೆ ಸೇರಲಿವೆ.

* ರಾಜಸ್ತಾನ ಹಾಗೂ ಪಂಜಾಬ್‌ನಲ್ಲಿ ನಿರ್ಮಿಸಲಾಗುತ್ತಿರುವ ಶ್ರೀಹಿಂದ್ ಕಾಲುವೆ ಹಾಗೂ ರಾಜಸ್ತಾನ ಜಲಪೂರೈಕೆ ಕಾಲುವೆಗಳಿಗೆ 850 ಕೋಟಿ ನೆರವು ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.

* ಅತಿಯಾದ ಸಕ್ಕರೆ ಉತ್ಪಾದನೆಯನ್ನು ನಿರ್ವಹಿಸಲು ಭಿನ್ನವಾದ ಸಮಗ್ರ ನೀತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

* ಕೇಂದ್ರ ಸಚಿವ ಸಂಪುಟ ಸಭೆಯು ರಾಷ್ಟ್ರೀಯ ಡಿಜಿಟಲ್ ಕಮ್ಯುನಿಕೇಷನ್ಸ್ ಪಾಲಿಸಿ-2018 ಅನ್ನು ಅನುಮೋದಿಸಿದೆ ಮತ್ತು ಟೆಲಿಕಾಂ ಆಯೋಗಕ್ಕೆ "ಡಿಜಿಟಲ್ ಕಮ್ಯುನಿಕೇಷನ್ಸ್ ಕಮಿಷನ್" ಎಂದು ಮರುನಾಮಕರಣ ಮಾಡಲು ಸಹ ಒಪ್ಪಿಗೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+