UGC NET 2022 Exam Date: ಜೂನ್ ತಿಂಗಳಿನಲ್ಲಿ ಯುಜಿಸಿಯ ನೀಟ್ ಪರೀಕ್ಷೆ

ನವದೆಹಲಿ, ಏಪ್ರಿಲ್ 12: ಕಳೆದ 2021ರ ಡಿಸೆಂಬರ್ ಮತ್ತು 2022ರ ಜೂನ್ ತಿಂಗಳಿನ ಯುಜಿಸಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಜೂನ್ ಇದೇ 2022ರ ಜೂನ್ ತಿಂಗಳಿನಲ್ಲಿ ನಡೆಸುವುದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ನಿರ್ಧರಿಸಿದೆ.

ಎರಡೂ ಅವಧಿಯ ಎನ್ಇಟಿ ಪರೀಕ್ಷೆಯನ್ನು ವಿಲೀನಗೊಳಿಸಲಾಗಿದೆ. ಈ ವರ್ಷ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಎಂ ಜಗದೀಶ್ ಕುಮಾರ್ ತಿಳಿಸಿದ್ದಾರೆ.

ಕಳೆದ ಡಿಸೆಂಬರ್ ಮತ್ತು ಈ ವರ್ಷದ ಜೂನ್ ತಿಂಗಳಿನಲ್ಲಿ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ವಿಲೀನಗೊಳಿಸಿದ್ದು, ಜೂನ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಅಧಿಕೃತವಾಗಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಿದೆ ಎಂದು ಜಗದೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

UGC NET 2022 Exam Date: NTA to conduct UGC NET 2022 in June

ಯುಜಿಸಿ ಎನ್ಇಟಿ ಪರೀಕ್ಷೆ ದಿನಾಂಕ ಪ್ರಕಟವಾಗಿಲ್ಲ:

ಯುಜಿಸಿ ಎನ್ಇಟಿ ಪರೀಕ್ಷೆಯ ದಿನಾಂಕವು ಇನ್ನೂ ಪ್ರಕಟವಾಗಿಲ್ಲ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಅಧಿಕೃತವಾಗಿ ಪರೀಕ್ಷೆಯ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಬೇಕಿದೆ. ಯುಜಿಸಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಯುಜಿಸಿ ಎನ್ಇಟಿ ವೆಬ್ ಸೈಟ್ ugcnet.nta.nic.in. ಗೆ ಲಾಗಿ ಆಗಿರಿ.

ಎನ್ ಟಿಎಯಿಂದ ಡಿಸೆಂಬರ್ 2021 ಮತ್ತು ಜೂನ್ 2022ರ ಯುಜಿಸಿ ಎನ್ಇಟಿ 2022 ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ - ugcnet.nta.nic.in ನಲ್ಲಿ ತಮ್ಮನ್ನು ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತದೆ.

ಎರಡು ಅವಧಿಯ ಬದಲಿಗೆ ಒಂದೇ ಅವಧಿಯಲ್ಲಿ ಪರೀಕ್ಷೆ:

ಯುಜಿಸಿ ಎನ್ಇಟಿ ಪರೀಕ್ಷೆಯನ್ನು ಸಾಮಾನ್ಯವಾಗಿ ಪ್ರತಿ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಎರಡು ಬಾರಿ ಪರೀಕ್ಷೆ ನಡೆಸುವುದರ ಬದಲಿಗೆ ಒಂದು ವರ್ಷದ ಒಂದೇ ಬಾರಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ಮತ್ತು ಮುಂಬರುವ ಜೂನ್ ತಿಂಗಳಿನಲ್ಲಿ ನಡೆಯುವ ಎರಡೂ ಅವಧಿಯ ಪರೀಕ್ಷೆಗಳನ್ನು ಒಂದೇ ಅವಧಿಯಲ್ಲಿ ನಡೆಸುವುದಕ್ಕೆ ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+