ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!

Posted By:
Subscribe to Oneindia Kannada

ಬೆಂಗಳೂರು, ಮೇ 25: ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ ಗೋಪಾಲ್ ವರ್ಮಾ ಮತ್ತೊಮ್ಮೆ ತಮ್ಮ ಟ್ವೀಟ್ ಮೂಲಕ ಹಲವಾರು ಮಂದಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಸ್ಸಾಂನ ಬಿಜೆಪಿ ಶಾಸಕಿ ಅಂಗೂರ್ ಲತಾ ದೇಕಾ ಬಗ್ಗೆ ಟ್ವೀಟ್ ಮಾಡಿ, ಟ್ವೀಟ್ ಲೋಕದಲ್ಲಿ ಚರ್ಚೆಗೀಡಾಗಿದ್ದಾರೆ.

'ಒಬ್ಬ ಎಂಎಲ್ಎ ಈ ರೀತಿ ಕಾಣುತ್ತಿದ್ದಾರೆ ಎಂದರೆ ಅಚ್ಚೇ ದಿನ್ ಬಂದಿದೆ ಎಂದರ್ಥ. ಥ್ಯಾಂಕ್ಯೂ ಅಂಗೂರ್ ಲತಾ ಜೀ, ಥ್ಯಾಂಕ್ಯೂ ಮೋದಿಜೀ, ಮೊದಲ ಬಾರಿಗೆ ನಾನು ರಾಜಕೀಯ ಇಷ್ಟಪಡುತ್ತಿದ್ದೇನೆ' ಎಂಬರ್ಥದಲ್ಲಿ ಆರ್ ಜಿವಿ ಟ್ವೀಟ್ ಮಾಡಿದ್ದರು. [ಅಸ್ಸಾಂನಲ್ಲಿ ಬಿಜೆಪಿ ಆಡಳಿತ ಆರಂಭ, ಸಿಎಂ ಆದ ಸೋನೊವಾಲ್]

#SaySorryRGV: When Twitterati lashed out at Ram Gopal Varma for his comment on BJP MLA

ಆರ್ ಜಿವಿ ಅವರ ಟ್ವೀಟ್ ನೋಡಿದ ಬಳಿಕ ಬಿಜೆಪಿ ಅಭಿಮಾನಿಗಳು #SaySorryRGV ಎಂಬ ಟ್ಯಾಗ್ ಮೂಲಕ ವರ್ಮಾ ವಿರುದ್ಧ ಟ್ವೀಟ್ ಗಳನ್ನು ಮಾಡಲಾಯಿತು.

ನಂತರ ಟ್ವೀಟ್ ಬಗ್ಗೆ ವರ್ಮಾ ಸ್ಪಷ್ಟನೆ ನೀಡಿ ನಾನು ಕೇವಲ ಹೊಗಳಿಕೆಗಾಗಿ ಈ ರೀತಿ ಹೇಳಿದೆ. ಯಾವುದೇ ಅಪಾರ್ಥ ಇಲ್ಲ ಎಂದಿದ್ದಾರೆ.

ಆದರೆ, ವರ್ಮಾ ಅವರ ಕೆಟ್ಟ ಮನಸ್ಥಿತಿ ಬಗ್ಗೆ ಸಾರ್ವಜನಿಕರು ಟೀಕಿಸಿದ್ದಾರೆ. [ಬಿಜೆಪಿಯ ಕನಸಿನ 'ಕಾಂಗ್ರೆಸ್ ಮುಕ್ತ್ ಭಾರತ್' ಹತ್ತಿರ, ಇನ್ನಷ್ಟು ಹತ್ತಿರ]

ಕೆಲವರಂತೂ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರೇ ಅತ್ಯಂತ ಸುಂದರಿ ಎಂದು ರಮ್ಯಾ ಅವರ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಚರ್ಚೆ ಇಲ್ಲಿದೆ ನೋಡಿ...

ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!

ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!

-
-
-
ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!

ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bollywood famous director, Ram Gopal Varma's comment once again has triggered controversy. Taking to Twitter, Varma made obnoxious comment against BJP's woman MLA Angoorlata Deka from Assam.
Please Wait while comments are loading...