ತುನಿಷಾ ಶರ್ಮಾಗೆ ಶೀಜಾನ್ ಖಾನ್ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ ನಟಿಯ ತಾಯಿ
ನವದೆಹಲಿ, ಡಿ. 30: ನಟ ಮತ್ತು ತುನಿಷಾ ಶರ್ಮಾ ಅವರ ಮಾಜಿ ಗೆಳೆಯ ಶೀಜಾನ್ ಖಾನ್ ಅವರು ಆಕೆಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದು ನಟಿಯ ತಾಯಿ ಶುಕ್ರವಾರ ಆರೋಪಿಸಿದ್ದಾರೆ.
ತುನಿಷಾ ತಾಯಿ ವನಿತಾ ಶರ್ಮಾ, ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಒಂದು ದಿನ ಮೊದಲು ತಾವು ಸೆಟ್‌ಗೆ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ. ಶೀಜಾನ್ ಬೇರೊಬ್ಬರೊಂದಿಗೆ ಸಂಬಂಧದಲ್ಲಿದ್ದು, ಆಕೆಗೆ ಮೋಸ ಮಾಡುತ್ತಿದ್ದ. ಈ ಬಗ್ಗೆ ನನ್ನ ಮಗಳು ಪ್ರಶ್ನಿಸಿದಕ್ಕೆ ಧಾರಾವಾಹಿ ಸೆಟ್‌ನಲ್ಲಿಯೇ ದೈಹಿಕವಾಗಿ ಹಲ್ಲೆ ಮಾಡಿದ್ದ ಎಂದು ಆರೋಪಿಸಿದ್ದಾರೆ.
ಆಕೆಗೆ ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ತುನಿಷಾ ಶರ್ಮಾ ಅವರ ಕುಟುಂಬವು ಪೊಲೀಸರಿಗೆ ಮನವಿ ಮಾಡಿದೆ. ನಟಿಯ ತಾಯಿ ವನಿತಾ, ಆಕೆಯ ಚಿಕ್ಕಪ್ಪ ಪವನ್ ಶರ್ಮಾ ಪೊಲೀಸರಿಗೆ ಮನವಿ ಮಾಡಿದ್ದಾರೆ.

20 ವರ್ಷದ ನಟಿ ತುನಿಷಾ ಶರ್ಮಾ, ಡಿಸೆಂಬರ್ 24 ರಂದು ತನ್ನ ಟಿವಿ ಶೋ ಅಲಿ ಬಾಬಾ ದಸ್ತಾನ್-ಇ-ಕಾಬೂಲ್‌ನ ಸೆಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರಂತ ನಡೆದು ಒಂದು ದಿನದ ನಂತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶೀಜಾನ್ ಖಾನ್‌ರನ್ನು ಬಂಧಿಸಲಾಯಿತು.
ತುನಿಷಾ ಶರ್ಮಾ ತಾಯಿ ಕೂಡ ಆಕೆಯ ಮಾಜಿ ಗೆಳೆಯ ಶೀಜಾನ್ ಸಾವಿಗೂ ಮುನ್ನ ತುನಿಷಾಗೆ ಮೋಸ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದಾರೆ. ಆಕೆಯ ಸಾವಿಗೆ ಎರಡು ವಾರಗಳ ಮೊದಲು ಅವರು ಬೇರ್ಪಟ್ಟರು ಎಂದು ವರದಿಯಾಗಿದೆ.
ಶೀಜಾನ್ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಎಂದು ವನಿತಾ ಆರೋಪಿಸಿದ್ದು, ಈ ವೇಳೆ ತುನಿಷಾ ವರ್ತನೆಯಲ್ಲಿಯೂ ಬದಲಾವಣೆಯಾಗಿದೆ. ಶೀಜಾನ್ ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಆಕೆಗೆ ಒತ್ತಾಯಿಸಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ವನಿತಾ ಶರ್ಮಾ, ಶೀಜಾನ್‌ಗೆ ಶಿಕ್ಷೆಯಾಗುವವರೆಗೂ ನಾನು ಸುಮ್ಮನಿರುವುದಿಲ್ಲ ಎಂದು ತಿಳಿಸಿದ್ದಾರೆ. "ಸೆಟ್‌ಗಳಲ್ಲಿ ಶೀಜಾನ್ ಡ್ರಗ್ಸ್ ಸೇವಿಸುತ್ತಿದ್ದರು ಎಂದು ತುನಿಷಾ ನನಗೆ ತಿಳಿಸಿದ್ದಾಳೆ. ತುನಿಷಾಳ ನಡವಳಿಕೆಯಲ್ಲಿ ಬದಲಾವಣೆಗಳಾಗಿವೆ. ಇಸ್ಲಾಂ ಧರ್ಮವನ್ನು ಅನುಸರಿಸಲು ಶೀಜಾನ್ ಅವಳನ್ನು ಒತ್ತಾಯಿಸಿದ್ದರು. ಅವಳು ಆ ದಿನ ಬೆಳಗ್ಗೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿದಳು. ಆದರೆ ಅದರ ನಂತರ ಏನಾಯಿತು, ನಮಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ.
ಇದು ಕೊಲೆಯೂ ಆಗಿರಬಹುದು ಎಂದಿರುವ ಅವರು, ಶೀಜಾನ್ ಅವಳಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸಿದರು ಎಂದು ಹೇಳಿಕೊಂಡಿದ್ದಾರೆ.
ಮತ್ತೊಂದು ಸಂದರ್ಶನದಲ್ಲಿ ತನ್ನ ಮಗಳನ್ನು ಶೀಜಾನ್ ತಿಂಗಳುಗಟ್ಟಲೆ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. "ನನ್ನ ಮಗಳ ಬದುಕಲ್ಲಿ ಅವರು ಬಂದ ಮೇಲೆ ಆಕೆ ನನ್ನಿಂದ ದೂರವಾಗಲು ಪ್ರಾರಂಭಿಸಿದಳು. ನಾನು ಅವಳನ್ನು ಅವರ ಸಂಬಂಧದ ಬಗ್ಗೆ ಕೇಳುತ್ತಿದ್ದೆ ಆದರೆ ಅವಳು ಹೆಚ್ಚು ಮಾತನಾಡಲಿಲ್ಲ. ಅವಳನ್ನು ಅವನ ಮನೆಯವರು ಬ್ಲ್ಯಾಕ್‌ಮೇಲ್ ಮಾಡಿದರು. ಅವಳಿಗೆ ಉರ್ದು ಕಲಿಸಲಾಯಿತು. ಅವಳು ಉರ್ದು ಮಾತನಾಡಲು ಪ್ರಾರಂಭಿಸಿದಳು" ಎಂದು ತಿಳಿಸಿದ್ದಾರೆ.
ನಟಿಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು ಎರಡು ಡಜನ್ ಜನರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಮತ್ತಷ್ಟು ಮಾಹಿತಿಗಾಗಿ ವಾಲೀವ್ ಪೊಲೀಸರು ತುನಿಷಾ ಅವರ ಫೋನ್ ಅನ್ನು ಪರಿಶೀಲಿಸುತ್ತಿದ್ದಾರೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications