Tripura Election Results 2023 : ಮುನ್ನಡೆ ಕಾಯ್ದುಕೊಂಡ ಬಿಜೆಪಿ, ಬುಡಕಟ್ಟು ಮತಗಳು ತಿಪ್ರಾ ಮೋಥಾಗೆ!
ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಸಿಪಿಎಂನಿಂದ ಕೌನ್ಸಿಲ್ ಅನ್ನು ವಶಪಡಿಸಿಕೊಂಡು ಇತಿಹಾಸವನ್ನು ನಿರ್ಮಿಸಿದ ಕಾರಣದಿಂದ ತಿಪ್ರಾ ಮೋಥಾ ಹೆಚ್ಚು ಪ್ರಚಾರಕ್ಕೆ ಬಂದಿದೆ.
ಅಗರ್ತಲ, ಮಾರ್ಚ್ 02: ಚೊಚ್ಚಲ ವಿಧಾನಸಭಾ ಚುನಾವಣೆಯಲ್ಲಿ ಪ್ರದ್ಯೋತ್ ದೇಬ್ ಬರ್ಮಾ ಅವರ ತಿಪ್ರಾ ಮೋಥಾ ಕಿಂಗ್‌ಮೇಕರ್ ಆಗದಿದ್ದರೂ ಸಹ ಉತ್ತಮ ಸ್ಥಾನಗಳನ್ನು ಗಳಿಸುವತ್ತ ಹೆಜ್ಜೆಯಿರಿಸಿದೆ. ಮತ ಏಣಿಕೆಯ ಆರಂಭಿಕ ಪ್ರಕ್ರಿಯೆಯಿಂದಲೂ ಬಿಜೆಪಿ ಬಹುಮತಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ - ಸಿಪಿಎಂ ಮೈತ್ರಿಕೂಟದ ಕೊರಳಿಗೆ ಉಸಿರುಗಟ್ಟಿಸುವ ಮೂಲಕ ತಿಪ್ರಾ ಮೋಥಾ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
*ಪ್ರದ್ಯೋತ್ ದೇಬ್ ಬರ್ಮಾ ಅವರ ತಿಪ್ರಾ ಮೋಥಾ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳು*
1. ಉಪ ಮುಖ್ಯಮಂತ್ರಿ ಸ್ಥಾನವಾದ ಚರಿಲಂನಲ್ಲಿ ತಿಪ್ರಾ ಮೋಥಾ ಮುನ್ನಡೆ ಸಾಧಿಸಿದೆ.

2. ತೆಲಿಯಮುರ ಕ್ಷೇತ್ರದಲ್ಲೂ ತಿಪ್ರಾ ಮೋತಾ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ
3. ತಿಪ್ರಾ ಮೋಥಾವನ್ನು ತ್ರಿಪುರಾ ಚುನಾವಣೆ 2023 ರ ಕಿಂಗ್‌ಮೇಕರ್ ಎಂದು ಕರೆಯಲಾಗಿದೆ. ಏಕೆಂದರೆ ಕಾಂಗ್ರೆಸ್ ಮೈತ್ರಿಕೂಟವು ಈಗಾಗಲೇ ಟಿಪ್ರಾ ಮೋಥಾವನ್ನು ತನ್ನ ಮೈತ್ರಿಗೆ ಸೇರಲು ಸ್ವಾಗತಿಸಿದೆ. ಆದರೆ, ಬಿಜೆಪಿ ಈಗಾಗಲೇ ಬಹುಮತದತ್ತ ಮುನ್ನಡೆ ಸಾಧಿಸಿದ್ದು, ತಿಪ್ರಾ ಮೋಥಾ ಕಿಂಗ್‌ಮೇಕರ್ ಆಗುವ ಸಾಧ್ಯತೆ ಕಡಿಮೆ.
4. ಪ್ರದ್ಯೋತ್ ದೇಬ್ ಬರ್ಮಾ ಅವರು 2019 ರಲ್ಲಿ ತಿಪ್ರಾ ಮೋಥಾವನ್ನು ರಚಿಸಿದರು.
5. ತಿಪ್ರಾ ಮೋಥಾ ತ್ರಿಪುರಾದಲ್ಲಿ ಸಾಮಾಜಿಕ ಸಂಘಟನೆಯಾಗಿ ಪ್ರಾರಂಭವಾಯಿತು. 2021 ರಲ್ಲಿ, ಸಾಮಾಜಿಕ ಸಂಘಟನೆಯು ರಾಜಕೀಯ ಪಕ್ಷವಾಯಿತು.
6. ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಸಿಪಿಎಂನಿಂದ ಕೌನ್ಸಿಲ್ ಅನ್ನು ವಶಪಡಿಸಿಕೊಂಡು ಇತಿಹಾಸವನ್ನು ನಿರ್ಮಿಸಿದ ಕಾರಣದಿಂದ ಹೆಚ್ಚು ಪ್ರಚಾರಕ್ಕೆ ಬಂದಿದೆ.
7. ಮಾಜಿ ಕಾಂಗ್ರೆಸ್ಸಿಗ ಪ್ರದ್ಯೋತ್ ದೇಬ್ ಬರ್ಮಾ ಅವರು ತಿಪ್ರಾ ಮೋಥಾದ ಮುಖ್ಯಸ್ಥರಾಗಿದ್ದಾರೆ.

8. ತಿಪ್ರಾ ಮೋತಾ 42 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬುಡಕಟ್ಟು ಪರಿಷತ್ತಿನ 20 ಬುಡಕಟ್ಟು ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ.
9. ತಿಪ್ರಾ ಮೋಥಾ ಸ್ಥಳೀಯ ತ್ರಿಪುರಿಗಳ ಪರವಾಗಿ ಹೆಚ್ಚು ಕೆಲಸ ಮಾಡಲು ಬಯಸಿದೆ.
10. ಪ್ರದ್ಯೋತ್ ದೇಬ್ ಬರ್ಮಾ ಅವರು ಚುನಾವಣೆಗೆ ಮುಂಚಿತವಾಗಿ ಯಾವುದೇ ಮೈತ್ರಿಗೆ ಒಪ್ಪಿಗೆ ನೀಡಿಲ್ಲ.
60 ಸ್ಥಾನಗಳ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ತಿಪ್ರಾ ಮೋತಾ ರಾಜ್ಯದಲ್ಲಿ ಬುಡಕಟ್ಟು ಮತಗಳನ್ನು ಯಶಸ್ವಿಯಾಗಿ ತನ್ನ ಬತ್ತಳಿಕೆಗೆ ಎಳೆದುಕೊಂಡಿದ್ದು, ಪ್ರತಿಪಕ್ಷಗಳ ಮತಗಳನ್ನು ವಿಭಜಿಸಿದೆ.












Click it and Unblock the Notifications