Tripura Assembly Election: 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಎಲ್ಲ ಪಕ್ಷಗಳು ತಮ್ಮ ಬಲವನ್ನು ಹೊರಹಾಕಿವೆ. ಇದೇ ವೇಳೆ ಶನಿವಾರ ಕಾಂಗ್ರೆಸ್ ತನ್ನ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಎಲ್ಲ ಪಕ್ಷಗಳು ಭರದ ಸಿದ್ದತೆಗಳನ್ನು ನಡೆಸಿವೆ. ಇದೇ ವೇಳೆ ಶನಿವಾರ ಕಾಂಗ್ರೆಸ್ ತನ್ನ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಮೀರ್ ರಂಜನ್ ಬರ್ಮನ್ ಅವರ ಪುತ್ರ ಸುದೀಪ್ ರಾಯ್ ಬರ್ಮನ್ ಹೆಸರೂ ಸೇರಿದೆ. ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಸಮೀರ್ ರಂಜನ್ ಬರ್ಮನ್ ಅವರು ರಾಜಧಾನಿ ಅಗರ್ತಲಾದಿಂದ ಸ್ಪರ್ಧಿಸಲಿದ್ದಾರೆ.
ಜನವರಿ 21 ರಂದು ಚುನಾವಣಾ ಆಯೋಗವು ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಿತು. ಜನವರಿ 30 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಫೆಬ್ರವರಿ 2 ರವರೆಗೆ ಹಿಂಪಡೆಯಬಹುದು. ನಂತರ ಫೆಬ್ರವರಿ 16 ರಂದು ಮತದಾನ ನಡೆಯಲಿದೆ ಮತ್ತು ಅದರ ಫಲಿತಾಂಶಗಳು ಮಾರ್ಚ್ 2 ರಂದು ಮೇಘಾಲಯ ಮತ್ತು ನಾಗಾಲ್ಯಾಂಡ್ ಜೊತೆಗೆ ಘೋಷಣೆಯಾಗಲಿದೆ. ಚುನಾವಣಾ ಆಯೋಗದ ಪ್ರಕಾರ ಮಾರ್ಚ್ 4 ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
|
ತ್ರಿಪುರದ 2018ರ ಚುನಾವಣೆಯ
ತ್ರಿಪುರಾದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವಿದೆ. 2018 ರಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷವಾದ IPFT ಜೊತೆಗೆ 60 ರಲ್ಲಿ 43 ಸ್ಥಾನಗಳನ್ನು ಗೆದ್ದಿತ್ತು. ಇದರಲ್ಲಿ ಬಿಜೆಪಿ 35 ಮತ್ತು ಐಪಿಎಫ್‌ಟಿ 8 ಸ್ಥಾನಗಳನ್ನು ಪಡೆದುಕೊಂಡಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯಲು ವಿಫಲವಾಗಿತ್ತು.
|
ತ್ರಿಪುರದಲ್ಲಿ ಪೈಪೋಟಿ ಯಾರ ನಡುವೆ
ಈ ಬಾರಿ ಅಧಿಕಾರದಲ್ಲಿರುವ ಬಿಜೆಪಿ, ಎಡ-ಕಾಂಗ್ರೆಸ್ ಸಂಯೋಜನೆ ಮತ್ತು ತೃಣಮೂಲ ಕಾಂಗ್ರೆಸ್‌ನೊಂದಿಗೆ ತ್ರಿಕೋನ ಸ್ಪರ್ಧೆಯನ್ನು ಎದುರಿಸಲಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 34 ಶಾಸಕರನ್ನು ಹೊಂದಿದ್ದರೆ, ಅದರ ಮಿತ್ರ ಪಕ್ಷ ಐಪಿಎಫ್‌ಟಿ ಐವರನ್ನು ಹೊಂದಿದೆ.
ರಾಜ್ಯದಲ್ಲಿ ಬಿಜೆಪಿಯ ವಿಜಯದ ನಂತರ ಬಿಪ್ಲಬ್ ದೇವ್ ಮುಖ್ಯಮಂತ್ರಿಯಾದರು. ಆದರೆ ಕಾರ್ಯಕ್ಷಮತೆಯ ಸಮಸ್ಯೆಗಳಿಂದ ಮೇ 2022 ರಲ್ಲಿ ಅವರನ್ನು ತೆಗೆದುಹಾಕಲಾಯಿತು. ನಂತರ ಪಕ್ಷ ಡಾ ಮಾಣಿಕ್ ಸಹಾ ಅವರನ್ನು ಹೊಸ ಸಿಎಂ ಆಗಿ ಆಯ್ಕೆ ಮಾಡಿತು. ಇವರು ಸದ್ಯ ರಾಜ್ಯ ಘಟಕದೊಳಗೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಸವಾಲನ್ನೂ ಸಹಾ ಎದುರಿಸುತ್ತಿದ್ದಾರೆ. ಬಿಜೆಪಿಯನ್ನು ಸೋಲಿಸಲು ತ್ರಿಪುರಾದಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿವೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಕಾಂಗ್ರೆಸ್ ಘೋಷಿಸಿವೆ.

ಬಿಜೆಪಿ 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ರಿಪುರದ ಆಡಳಿತಾರೂಢ ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಗೆ ಒಟ್ಟು 60 ವಿಧಾನಸಭಾ ಸ್ಥಾನಗಳ ಪೈಕಿ 48 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಟೌನ್ ಬೋರ್ಡೋವಾಲಿ ಕ್ಷೇತ್ರದಿಂದ ಮತ್ತು ಕೇಂದ್ರ ಸಚಿವೆ ಪ್ರತಿಮಾ ಭೂಮಿಕ್ ಧನಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅದರಂತೆ ತ್ರಿಪುರಾದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಿಇಸಿ ತನ್ನ ಅನುಮೋದನೆ ನೀಡಿದೆ.
ಪಕ್ಷದ ಮುಖಂಡರಾದ ಅನಿಲ್ ಬಲುನಿ ಮತ್ತು ಸಂಬಿತ್ ಪಾತ್ರ ಅವರು ಶನಿವಾರ ಇಲ್ಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತ್ರಿಪುರಾ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದರು. ಭೂಮಿಕ್ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು ಎಲ್ಲೆಲ್ಲಿಂದ ಸ್ಪರ್ಧಿಸಲಿದ್ದಾರೆ?
ಪ್ರಮುಖ ಅಭ್ಯರ್ಥಿಗಳ ಪೈಕಿ ಶುಕ್ರವಾರ ಪಕ್ಷಕ್ಕೆ ಸೇರ್ಪಡೆಗೊಂಡ ಎಂಡಿ ಮೊಬೋಶರ್ ಅಲಿ ಅವರು ಕೈಲಾಶಹರ್‌ನಿಂದ ಸ್ಪರ್ಧಿಸಲಿದ್ದು, ರಾಜ್ಯ ಬಿಜೆಪಿ ಮುಖ್ಯಸ್ಥ ರಾಜೀಬ್ ಭಟ್ಟಾಚಾರ್ಜಿ ಬನಮಾಲಿಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ, ಎಡ ಭದ್ರಕೋಟೆ ಎಂದು ಪರಿಗಣಿಸಲಾದ ತ್ರಿಪುರಾದಲ್ಲಿ ಬಿಜೆಪಿಯು ಸರ್ಕಾರವನ್ನು ರಚಿಸಿತ್ತು. ಸಿಪಿಐ(ಎಂ) 25 ವರ್ಷಗಳ ಕಾಲ ರಾಜ್ಯದಲ್ಲಿ ಅವ್ಯಾಹತವಾಗಿ ಆಡಳಿತ ನಡೆಸಿತ್ತು. ಮಾಜಿ ಕಾಂಗ್ರೆಸ್ ನಾಯಕ ಮತ್ತು ರಾಜವಂಶಸ್ಥ ಪ್ರದ್ಯೋತ್ ದೇಬ್ ಬರ್ಮನ್ ಅವರು ಸ್ಥಾಪಿಸಿದ ಪ್ರಾದೇಶಿಕ ಪಕ್ಷವಾದ TIPRA ನೊಂದಿಗೆ ಬಿಜೆಪಿಯ ಉನ್ನತ ನಾಯಕರು ಚುನಾವಣಾ ಪೂರ್ವ ಮೈತ್ರಿಗಾಗಿ ಮಾತುಕತೆ ನಡೆಸುತ್ತಿದ್ದರು. ಅದನ್ನು ಈಗ ತಳ್ಳಿಹಾಕಲಾಗಿದೆ. ಸಿಪಿಐ(ಎಂ) ಈ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.












Click it and Unblock the Notifications