ರೈಲು ದುರಂತ: ಮಂಗಳೂರು ವಿದ್ಯಾರ್ಥಿಗಳು ಬಚಾವ್

ನಾಸಿಕ್, ನ.15: ಇಂದು ಬೆಳಗ್ಗೆ ಹಳಿ ತಪ್ಪಿ ಅಪಘಾತಕ್ಕೀಡಾದ Nizamuddin-Ernakulam Mangala Express train ನಲ್ಲಿ ಸಂಚಾರಿಸುತ್ತಿದ್ದ ಮಂಗಳೂರಿನ 13 ವಿದ್ಯಾರ್ಥಿಗಳು ಮತ್ತು ಒಬ್ಬ ಲೆಕ್ಚರರ್ ಸುರಕ್ಷಿತವಾಗಿದ್ದಾರೆ. ಅಪಘಾತದಲ್ಲಿ ಒಟ್ಟು ಮೂರು AC coach ಮತ್ತು ಎಂಟು Non-AC coachಗಳು ಹಳಿತಪ್ಪಿವೆ.

ಅಂದಹಾಗೆ ಈ ವಿದ್ಯಾರ್ಥಿಗಳು ಉತ್ತರಾಕಾಂಡದ ಕೇದಾರನಾಥದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಾಗಾರದಲ್ಲೊ ಪಾಲ್ಗೊಂಡು ದೆಹಲಿಯಿಂದ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಇವರೆಲ್ಲ ರೋಶಿನಿ ನಿಲಯದ ಸಾಮಾಜಿಕ ಸೇವಾ ಶಾಲೆಯ ಸ್ನಾತಕೋತ್ತರ ವಿದ್ಯಾರ್ಥಿಗಳು.

Train accident Ernakulam-bound Mangala express derailed at Nashik 5 dead

ಬೆಳಗಿನ ವರದಿ: ಹಾವೇರಿ ವೋಲ್ವೋ ಬಸ್ ಅಗ್ನಿ ದುರಂತದ ಕಾವು ಆರುವ ಮುನ್ನ ಮತ್ತೊಂದು ದುರಂತ ಘಟಿಸಿದೆ. ದೆಹಲಿಯಿಂದ (ನಿಜಾಮುದ್ದಿನ್) ಎರ್ನಾಕುಲಂಗೆ ಹೊರಟಿದ್ದ ಮಂಗಳ ಎಕ್ಸ್ ಪ್ರೆಸ್ ಇಂದು ಬೆಳಗ್ಗೆ 6.30ರಲ್ಲಿ ಅಪಘಾತಕ್ಕೀಡಾಗಿದೆ.

ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ತುರ್ತು ದೂರವಾಣಿ ಸಂಖ್ಯೆಗಳು ಹೀಗಿವೆ:
Palakkad Station: 0491 2556198;
Mangalore Junction: 0824 2437824;
Mangalore Central: 0824 2423137;
Kannur: 0497 2705555;
Kozhikode: 0495 2701234;
Shoranur: 0466 2222913.

* ಮಹಾರಾಷ್ಟ್ರದ ಘೋಟಿ (Ghoti-Igatpuri section) ಬಳಿ ಹಳಿ ತಪ್ಪಿದ ಮಧ್ಯ ರೈಲ್ವೆಯ ಮಂಗಳ ಎಕ್ಸ್ ಪ್ರೆಸ್.
* ದುರಂತದಲ್ಲಿ 5 ಪ್ರಯಾಣಿಕರ ಸಾವು.
* 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳು.
* ಟ್ರೈನ್ ಅವಶೇಷಗಳಡಿ ಇನ್ನೂ 25 ಪ್ರಯಾಣಿಕರು.
* ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
* ನಾಲ್ಕು ಬೋಗಿಗಳು ಹಳಿ ತಪ್ಪಿವೆ.
* ಮಂಗಳೂರು ಮೂಲಕ ಸಂಚರಿಸುವ ಟ್ರೈನ್ ಇದಾಗಿದ್ದು, ಕರ್ನಾಟಕದವರೂ ಸಾವಿಗೀಡಾಗಿರುವ ಸಾಧ್ಯತೆಯಿದೆ.
* ರೈಲು ಹಳಿ ತಪ್ಪಿದ್ದಕ್ಕೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
* ಕೆಳಗಿನ ರೈಲುಗಳ ಸಂಚಾರ ವ್ಯತ್ಯವಾಗಿದೆ:
* Manmad-Kurla-Godavari Express, Manmad-Mumbai Panchavati Express
* Sevagram Express, Rajya Rani Express.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+