Hyderabad: ಬಿರಿಯಾನಿಗೆ ಹೆಚ್ಚು ಮೊಸರು ಕೇಳಿದ್ದಕ್ಕೆ ಗ್ರಾಹಕನನ್ನೇ ಕೊಂದ ಹೋಟೆಲ್ ಕೆಲಸಗಾರ
ಹೈದರಾಬಾದ್‌ನಲ್ಲಿ ಬಿರಿಯಾನಿಗೆ ಹೆಚ್ಚು ಮೊಸರು ಕೇಳಿದ್ದಕ್ಕೆ ಗ್ರಾಹಕನೊಬ್ಬನನ್ನು ಹೋಟೆಲ್ ಕಾರ್ಮಿಕ ಹೊಡೆದು ಕೊಂದ ಘಟನೆ ನಡೆದಿದೆ. ಬಿರಿಯಾನಿಗೆ ಹೆಚ್ಚುವರಿ ಮೊಸರು ಕೊಡುವ ವಿಚಾರದಲ್ಲಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.
ಐಎಎನ್‌ಎಸ್ ವರದಿ ಪ್ರಕಾರ ಹೈದರಾಬಾದ್‌ನ ಹೃದಯ ಭಾಗದಲ್ಲಿರುವ ಪುಂಜಗುಟ್ಟದಲ್ಲಿರುವ ಮೆರಿಡಿಯನ್ ರೆಸ್ಟೋರೆಂಟ್‌ನಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಧ್ಯರಾತ್ರಿಯ ಸುಮಾರಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದ ಲಿಯಾಕತ್ ಬಿರಿಯಾನಿಯೊಂದಿಗೆ ಹೆಚ್ಚುವರಿ ಮೊಸರು ನೀಡುವಂತೆ ಕೇಳಿದ ನಂತರ ತೀವ್ರ ವಾಗ್ವಾದದ ಸಂದರ್ಭದಲ್ಲಿ ಹೋಟೆಲ್‌ನ ನೌಕರರು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಗ್ರಾಹಕರು ದೂರು ನೀಡಲು ಪಂಜಗುಟ್ಟ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಪೊಲೀಸರೊಂದಿಗೆ ಮಾತನಾಡುವಾಗ, ಲಿಕಾಯತ್ ಕುಸಿದುಬಿದ್ದರು, ನಂತರ ಪೊಲೀಸರು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ, ಆಸ್ಪತ್ರೆಯಲ್ಲಿ ಲಿಕಾಯತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.
ನ್ಯಾಯ ಒದಗಿಸಲು ಒತ್ತಾಯ
ಘಟನೆಯ ನಂತರ, ಮಜ್ಲಿಸ್ - ಎ - ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಎಂಎಲ್ಸಿ ಮಿರ್ಜಾ ರಹಮತ್ ಬೇಗ್ ಕ್ವಾದ್ರಿ ಅವರು ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಹಲವರು ಪ್ರತಿಕ್ರಿಯೆ ನಡೆಸಿದ್ದು, ಇದು ಹೈದರಾಬಾದ್‌ನಲ್ಲಿ ಬಿರಿಯಾನಿಗೆ ಪ್ರಸಿದ್ಧವಾದ ಹೋಟೆಲ್ ಇನ್ನು ಮುಂದೆ ಇಲ್ಲಿಗೆ ಹೋಗಲ್ಲ, ಹೋದರೂ ಅಪ್ಪಿ ತಪ್ಪಿಯೂ ಮೊಸರು ಕೇಳಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೂ ಹಲವರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವರು ಈ ರೀತಿಯ ಸಣ್ಣ ವಿಚಾರಗಳಿಗೆ ಕೊಲೆ ಮಾಡುವುದು ಹೀನಾಯ ಕೃತ್ಯ ಎಂದು ಹೇಳಿದ್ದಾರೆ.
ಸಣ್ಣ ವಿಚಾರಗಳಿಗೂ ಕೊಲೆ, ಹಲ್ಲೆ
ಕಳೆದ ತಿಂಗಳು ನಗರದ ಜಗದ್ಗಿರಿಗುಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್ ಗೃಹ ಕಲ್ಪದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿ ಒಂಬತ್ತು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ಆದಿತ್ಯ ಎಂದು ಗುರುತಿಸಲಾದ ಅಪ್ರಾಪ್ತ ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆರೋಪಿಗಳು ಆತನ ಬಳಿಗೆ ಬಂದು ಚಾಕುವಿನಿಂದ ಹಲ್ಲೆ ನಡೆಸಿದ್ದರು.












Click it and Unblock the Notifications