ಹಿಜ್ಬುಲ್ ಉಗ್ರನ ಹತ್ಯೆಗೆ ಸಂತಾಪ ಸೂಚಿಸಿದ ಮೆಹಬೂಬಾ ಮುಫ್ತಿ!

ಶ್ರೀನಗರ, ಅಕ್ಟೋಬರ್ 11: ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ.

ಈ ಇಬ್ಬರಲ್ಲಿ ಒಬ್ಬ ಉಗ್ರ ಪಿಎಚ್ ಡಿ ಪದವೀಧರನೂ ಹೌದು! ಮನನ್ ಬಶಿರ್ ವಾನಿ ಎಂಬ ಪಿಎಚ್ ಡಿ ಪದವೀಧರ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ಸೇರಿ, ಭಯೋತ್ಪಾದಕ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ. 27 ವರ್ಷದ ವಾನಿಯನ್ನು ಹತ್ಯೆಗೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಂತಾಪ ವ್ಯಕ್ತಪಡಿಸಿದ್ದು, ಹಲವರ ಹುಬ್ಬೇರುವಂತೆ ಮಾಡಿದೆ.

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಗುರುವಾರ ನಡೆದ ಎನ್ ಕೌಂಟರ್ ದಾಳಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭಾರತೀಯ ಸೇನೆ ಸಫಲವಾಗಿತ್ತು.

Top Hizbul terrorist killed, Mehbooba Mufti regrets!

ಆದರೆ ಈ ಘಟನೆಯನ್ನು ಖಂಡಿಸಿರುವ ಮೆಹಬೂಬಾ ಮುಫ್ತಿ, 'ಇಂದು ಪಿಎಸ್ ಡಿ ಪದವೀಧರನೊಬ್ಬ ಹತ್ಯೆಗೊಳಗಾಗಿದ್ದಾನೆ. ಅವನ ಸಾವು ನಮಗೆ ನಿಜಕ್ಕೂ ನಷ್ಟ ಇಂಥ ಸಂದರ್ಭಗಳಲ್ಲಿ ಹಿಂಸೆಗಿಂತ, ಶಾಂತಿಯುತ ದಾರಿಯಲ್ಲಿ ಸಂಧಾನ ನಡೆಸಲು ರಾಜಕೀಯ ಪಕ್ಷಗಳು ಒಂದಾಗಬೇಕು. ಇಲ್ಲವೆಂದರೆ ಪ್ರತಿದಿನವೂ ಭಾರತ ಯುವ, ಸುಶಿಕ್ಷಿತರನ್ನು ಕಳೆದುಕೊಳ್ಳುವಂತಾಗುತ್ತದೆ' ಎಂದು ಮುಫ್ತಿ ವಿಷಾದ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+