ದೆಹಲಿ, ಯುಪಿ, ಬಿಹಾರದಲ್ಲಿ ಕೆಜಿಗೆ 80 ರೂ. ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟಕ್ಕೆ ಕೇಂದ್ರದ ನಿರ್ಧಾರ
ನವದೆಹಲಿ, ಜುಲೈ. 16: ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರವು ಹೊಸ ನಿರ್ಧಾರ ತೆಗೆದುಕೊಳ್ಳುತ್ತಿದೆ. ಭಾನುವಾರದಿಂದ ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರದಾದ್ಯಂತ ಅದರ ಸಗಟು ದರವನ್ನು ಕೆಜಿಗೆ 80 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಟೊಮೆಟೊ ದರ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶದ ನಂತರವೇ ಪರಿಹಾರವನ್ನು ಕಂಡು ಹಿಡಿಯಲಾಗಿದೆ ಎಂದು ಒತ್ತಿಹೇಳಿರುವ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಟೊಮೆಟೊ ಬೆಲೆಗಳು ಇಂದಿನಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.

"ದೇಶದ ಹಲವಾರು ಸ್ಥಳಗಳಲ್ಲಿ ಬೆಲೆಗಳು ಅಸಾಧಾರಣವಾಗಿ ಹೆಚ್ಚಾಗಿರುವ ದೇಶದ ಹಲವಾರು ಸ್ಥಳಗಳಲ್ಲಿ ಪ್ರತಿ ಕೆಜಿಗೆ 90 ರೂಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸರ್ಕಾರ ಮಧ್ಯಸ್ಥಿಕೆ ವಹಿಸಿದೆ. ಈ ಕಾರಣದಿಂದಾಗಿ ಟೊಮೆಟೊಗಳ ಸಗಟು ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ದೇಶದ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಪರಿಸ್ಥಿತಿಯ ಮರು ಮೌಲ್ಯಮಾಪನದ ನಂತರ, ಇಂದು ಭಾನುವಾರ ಜುಲೈ 16, 2023 ರಿಂದ ಕೆಜಿಗೆ ಎಂಭತ್ತು (80) ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ.
ದೆಹಲಿ, ಉತ್ತರ ಪ್ರದೇಶ ಮತ್ತು ಪಾಟ್ನಾದಲ್ಲಿ ಹಲವಾರು ಸ್ಥಳಗಳಲ್ಲಿ ಅಗ್ಗದ ದರದಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ನ್ಯಾಷನಲ್ ಕನ್ಸ್ಯೂಮರ್ಸ್ ಕೋಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್) ಮತ್ತು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (ನಾಫೆಡ್) ಸಹಕಾರಿಯಾಗಲಿದೆ ಎಂದು ಸರ್ಕಾರ ಸೂಚಿಸಿದೆ.
"ನಾಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ ದೆಹಲಿ, ನೋಯ್ಡಾ, ಲಕ್ನೋ, ಕಾನ್ಪುರ, ವಾರಣಾಸಿ, ಪಾಟ್ನಾ, ಮುಜಾಫರ್‌ಪುರ ಮತ್ತು ಅರ್ರಾದಲ್ಲಿ ಇಂದು ಹಲವಾರು ಕೇಂದ್ರಗಳಲ್ಲಿ ಮಾರಾಟ ಪ್ರಾರಂಭವಾಗಿದೆ. ಅಂತಹ ಸ್ಥಳಗಳಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳನ್ನು ಅವಲಂಬಿಸಿ ನಾಳೆಯಿಂದ ಹೆಚ್ಚಿನ ನಗರಗಳಿಗೆ ಇದನ್ನು ವಿಸ್ತರಿಸಲಾಗುವುದು" ಎಂದು ಮೂಲಗಳು ತಿಳಿಸಿವೆ.

ಎನ್‌ಸಿಸಿಎಫ್ ಮತ್ತು ನಾಫೆಡ್ ಗೆ ಈಗಾಗಲೇ ಜುಲೈ 12 ರಂದು ಸರ್ಕಾರವು ಉತ್ಪಾದಕ ರಾಜ್ಯಗಳಿಂದ ತರಕಾರಿಗಳನ್ನು ಖರೀದಿಸಲು ಮತ್ತು ಅವುಗಳನ್ನು ಬೆಲೆ ಏರಿಕೆಯಾಗಿರುವ ಕೇಂದ್ರಗಳಿಗೆ ಸಮಂಜಸವಾದ ಬೆಲೆಯಲ್ಲಿ ವಿತರಿಸಲು ಸೂಚಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಟೊಮ್ಯಾಟೊ ಮತ್ತು ಇತರ ಕೆಲವು ತರಕಾರಿಗಳ ಬೆಲೆಗಳು ಕನಿಷ್ಠ ಒಂದು ತಿಂಗಳಿನಿಂದ ದರಗಳು ಗಗನಕ್ಕೇರಿವೆ.
ತಡವಾದ ಮಾನ್ಸೂನ್ ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಬೆಲೆ ಏರಿಕೆಗೆ ಕಾತಣವಾಗಿದೆ. ತರಕಾರಿ ಮಾರಾಟಗಾರರು ಮತ್ತು ಸಗಟು ವ್ಯಾಪಾರಿಗಳು ಮಳೆಯಿಂದ ಟೊಮೆಟೊ ಬೆಳೆಗಳಿಗೆ ಹಾನಿಯುಂಟಾಗಿದೆ. ಇದು ಬೇಡಿಕೆಯಿದ್ದರೂ ಪೂರೈಕೆಯಿಲ್ಲದೇ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅದೇ ಅವಧಿಯಲ್ಲಿ ಟೊಮ್ಯಾಟೊ ಕೆಜಿಗೆ 80 ರಿಂದ 200 ರ ರೂಪಾಯಿವರೆಗೆ ಮಾರಾಟವಾಗಿದೆ.












Click it and Unblock the Notifications