ಒಂದು ಹಂತಕ್ಕೆ ಬಂದ ಜಯಾ ಆರೋಗ್ಯ, ತಾಯಿ ಚಾಮುಂಡೇಶ್ವರಿ ಕೃಪೆ!

Written By:
Subscribe to Oneindia Kannada

ಚೆನ್ನೈ, ನ 5: ತಮಿಳರ ' ಅಮ್ಮ' ಮುಖ್ಯಮಂತ್ರಿ ಜಯಲಲಿತಾ ಆರೋಗ್ಯ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದು, ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಅಪೋಲೋ ಆಸ್ಪತ್ರೆಯ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ರೆಡ್ಡಿ, ತನಗೆ ಏನು ಬೇಕೋ ಅದನ್ನು ಡಿಮಾಂಡ್ ಮಾಡಿ ಜಯಾ ಪಡೆದುಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ. (3 ವಾರದಲ್ಲಿ ಮನೆಗೆ ಮರಳುತ್ತಾರಾ ಮುಖ್ಯಮಂತ್ರಿ ಜಯಾ)

ಆಸ್ಪತೆಯಿಂದ ಅವರನ್ನು ಯಾವಾಗ ಅವರನ್ನು ಡಿಸ್ಚಾರ್ಜ್ ಮಾಡಬೇಕು ಎನ್ನುವುದು ದೊಡ್ಡ ವಿಚಾರವಲ್ಲ, ಅದನ್ನು ಜಯಲಲಿತಾ ಅವರೇ ನಿರ್ಧರಿಸಬೇಕೆಂದು ಪ್ರತಾಪ್ ರೆಡ್ಡಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಜಯಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅತಿ ತುರ್ತಾಗಿ ಏನು ಚಿಕಿತ್ಸೆ ನೀಡಬೇಕಾಗಿತ್ತೋ ಅದನ್ನು ನೀಡಿದ್ದೇವೆ ಮತ್ತು ನಮ್ಮ ಚಿಕಿತ್ಸೆ ಫಲಕಾರಿಯಾಗಿದೆ ಎಂದು ಪ್ರತಾಪ್ ರೆಡ್ಡಿ ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳುನಾಡು ಸಿಎಂ ಜಯಲಲಿತಾ ಸೆ.22ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ಇಂದಿನವರೆಗೂ ಜಯಾ ಆಸ್ಪತ್ರೆಯಲ್ಲಿರುವ ಯಾವುದೇ ಫೋಟೋ ಅಥವಾ ವಿಡಿಯೋ ಫುಟೇಜ್ ಬಹಿರಂಗವಾಗಿಲ್ಲ. (ಮುಖ್ಯಮಂತ್ರಿ ಜಯಲಲಿತಾ ಮೇಲೆ ವಾಮಾಚಾರ)

ಚಾಮುಂಡೇಶ್ವರಿ ಕೃಪೆಯಿಂದ ಜಯಾ ಪಾರಾದರೇ, ಮುಂದೆ ಓದಿ..

ಜಯಾ ಆರೋಗ್ಯ

ಜಯಾ ಆರೋಗ್ಯ

ಜಯಾ ದಾಖಲಾಗಿರುವ ಅಪೋಲೋ ಆಸ್ಪತ್ರೆಯಿಂದಾಗಲಿ, ಎಐಎಡಿಎಂಕೆ ಪಕ್ಷದಿಂದಾಗಲಿ ಯಾವುದೇ ಸರಿಯಾದ ಮಾಹಿತಿ ಸಿಗದೇ ಇದ್ದಾಗ, ಜಯಾ ಆರೋಗ್ಯದ ಊರೆಲ್ಲಾ ಸುದ್ದಿಯಾಗಿತ್ತು. ರಾಹುಲ್, ಜೇಟ್ಲಿ, ಅಮಿತ್ ಶಾ ಸೇರಿದಂತೆ ಗಣ್ಯರ ದಂಡೇ ಆಸ್ಪತ್ರೆಗೆ ಹೋಗಿದ್ದರೂ, ಜಯಾ ಅವರನ್ನು ನೋಡಲು ಅವಕಾಶ ಸಿಕ್ಕಿರಲಿಲ್ಲ.ಜಯಾ ದಾಖಲಾಗಿರುವ ಅಪೋಲೋ ಆಸ್ಪತ್ರೆಯಿಂದಾಗಲಿ, ಎಐಎಡಿಎಂಕೆ ಪಕ್ಷದಿಂದಾಗಲಿ ಯಾವುದೇ ಸರಿಯಾದ ಮಾಹಿತಿ ಸಿಗದೇ ಇದ್ದಾಗ, ಜಯಾ ಆರೋಗ್ಯದ ಬಗ್ಗೆ ನೆಗೆಟಿವ್ ಸುದ್ದಿ ಊರೆಲ್ಲಾ ಹರಡಿತ್ತು. ರಾಹುಲ್, ಜೇಟ್ಲಿ, ಅಮಿತ್ ಶಾ, ವೆಂಕಯ್ಯ ನಾಯ್ಡು ಸೇರಿದಂತೆ ಗಣ್ಯರ ದಂಡೇ ಆಸ್ಪತ್ರೆಗೆ ಹೋಗಿದ್ದರೂ, ಜಯಾ ಅವರನ್ನು ನೋಡಲು ಅವಕಾಶ ಸಿಕ್ಕಿರಲಿಲ್ಲ.

ಬೈಎಲೆಕ್ಷನಿಗೆ ಜಯಾ ಹೆಬ್ಬೆಟ್ಟು

ಬೈಎಲೆಕ್ಷನಿಗೆ ಜಯಾ ಹೆಬ್ಬೆಟ್ಟು

ತಮಿಳುನಾಡಿನ ಮೂರು ಅಸೆಂಬ್ಲಿ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಬಿಫಾರಂಗೆ ಜಯಾ ಹೆಬ್ಬೆಟ್ಟು ತೆಗೆದುಕೊಂಡಿರುವುದು, ಅವರ ಆರೋಗ್ಯದ ಬಗ್ಗೆ ಸಾರ್ವಜನಿಕರು ಮತ್ತೆ ಗುಸುಗುಸು ಮಾತನಾಡುವಂತಾಗಿತ್ತು.

ನಾಡಿನ ಅಧಿದೇವತೆ

ನಾಡಿನ ಅಧಿದೇವತೆ

ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಪರಮಭಕ್ತೆಯಾಗಿರುವ ಜಯಲಲಿತಾ, ದೇವಾಲಯಕ್ಕೆ ಆನೆ ಮತ್ತು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯಾಗಿ ನೀಡಿದ್ದರು. ತಾಯಿಯ ಮೇಲೆ ಆಕೆಗಿರುವ ಭಕ್ತಿ ಮತ್ತು ನಂಬಿಕೆಯಿಂದ ಅವರು ಪಾರಾದರು ಎಂದು ಇಲ್ಲಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ತಾಯಿಗೆ ಭಾರೀ ಉಡುಗೊರೆ

ತಾಯಿಗೆ ಭಾರೀ ಉಡುಗೊರೆ

ಜಯಾ ಆರೋಗ್ಯ ಸುಧಾರಿಸಲು ತಮಿಳುನಾಡಿನಿಂದ ಬಂದ ಅವರ ಅಭಿಮಾನಿಗಳು/ಕಾರ್ಯಕರ್ತರು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬಂದು 1.61 ಕೋಟಿ ರೂಪಾಯಿ ಬೆಲೆಬಾಳುವ ಗಣೇಶ ಮತ್ತು ಆಂಜನೇಯನ ವಿಗ್ರಹವನ್ನು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ್ದರು.

ವಿಶೇಷ ಪೂಜೆ

ವಿಶೇಷ ಪೂಜೆ

ಜಯಾ ಆರೋಗ್ಯ ಸುಧಾರಿಸಲು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಅಭಿಷೇಕ ನಡೆಯುತ್ತಲೇ ಇದೆ. 2011ರಲ್ಲಿ ಜಯಾ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil Nadu chief minister Jayalalithaa has completely recovered and she understands what is going on around her, said Apollo Hospitals chairman Dr Prathap C Reddy on Friday (Nov 4).
Please Wait while comments are loading...