ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಪ್ಪು ದಕ್ಷಿಣದ ಔರಂಗಜೇಬ್, ಸಿದ್ದರಾಮಯ್ಯ ದಕ್ಷಿಣದ ಲಾಲೂ ಪ್ರಸಾದ್: RSS

|
Google Oneindia Kannada News

ನವದೆಹಲಿ, ನ 25: ಮೈಸೂರು ಹುಲಿ ಟಿಪ್ಪು ಜಯಂತಿ ಆಚರಿಸಿ ಧಿಕ್ಕಾರ, ಜೈಕಾರ ಎದುರಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೋಲಿಸಿದೆ.

ಸಿದ್ದರಾಮಯ್ಯ ಸರಕಾರ ಕೇವಲ ಅಲ್ಪಸಂಖ್ಯಾತರನ್ನು ಓಲೈಸಲು ಟಿಪ್ಪು ಜಯಂತಿ ಆಚರಿಸಿದೆ, ಟಿಪ್ಪು ದಕ್ಷಿಣದ ಔರಂಗಜೇಬ್, ಹಾಗೆಯೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣದ ಲಾಲೂ ಪ್ರಸಾದ್ ಎಂದು ಆರ್ ಎಸ್ ಎಸ್ ಕಿಡಿಕಾರಿದೆ.(ತಮಿಳುನಾಡಿಗೂ ಹಬ್ಬಿದ ಟಿಪ್ಪು ಜಯಂತಿ ಜ್ವರ)

ಔರಂಗಜೇಬ್ ತನ್ನ ಆಡಳಿತದಲ್ಲಿ ಲಕ್ಷಾಂತರ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದ. ಇದೇ ರೀತಿ ದಕ್ಷಿಣ ಭಾರತದಲ್ಲಿ ದುರಾಡಳಿತ ನಡೆಸಿದ್ದ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಿಸುವ ಹಿಂದೆ ಕಾಂಗ್ರೆಸ್ಸಿನ ಮತಬ್ಯಾಂಕಿನ ಲಾಲಸೆಯಿದೆ ಎಂದು ಸಂಘಟನೆಯ ಮುಖವಾಣಿ 'ಪಾಂಚಜನ್ಯ'ದಲ್ಲಿ ಸಂಪಾದಕೀಯ ಪ್ರಕಟವಾಗಿದೆ.

ಕರ್ನಾಟಕ ಸರಕಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್, ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್, ನಮ್ಮ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರಂತಹ ಮಹಾನ್ ಪುರುಷರ ಜಯಂತಿಗಳನ್ನು ಆಚರಿಸುವುದು ಬಿಟ್ಟು, ಟಿಪ್ಪುನಂತಹ ಧರ್ಮಾಂಧನ ಜಯಂತಿ ಆಚರಣೆಗೆ ಮುಂದಾಗಿರುವುದು ದುರಂತ ಎಂದು ಆರೆಸ್ಸೆಸ್ ಮುಖವಾಣಿಯಲ್ಲಿ ಪ್ರಕಟವಾಗಿದೆ.

ಟಿಪ್ಪು ಯಾವ ರೀತಿ ತನ್ನ ದರ್ಬಾರಿನಲ್ಲಿ ಅಧಿಕಾರ ನಡೆಸಿದ್ದ ಎನ್ನುವುದನ್ನು ಇತಿಹಾಸದ ಪುಟ ತಿರುವಿದರೆ ತಿಳಿಯುತ್ತದೆ, ಇಂತಹ ಧರ್ಮಾಂಧನ ಜಯಂತಿ ಆಚರಿಸುವ ಮೂಲಕ ಸಿದ್ದರಾಮಯ್ಯ ದಕ್ಷಿಣದ ಲಾಲೂ ಪ್ರಸಾದ್ ಯಾದವ್ ಆಗಿದ್ದಾರೆಂದು ಮುಖವಾಣಿಯಲ್ಲಿ ಹೇಳಲಾಗಿದೆ.

ಸಂಸತ್ತಿನ ಮುಂದೆ ಟಿಪ್ಪು ಪ್ರತಿಮೆ, ವಾಟಾಳ್ ಮನವಿ, ಮುಂದೆ ಓದಿ..

ದ್ವೇಷದ ವಾತಾವರಣ

ದ್ವೇಷದ ವಾತಾವರಣ

ಟಿಪ್ಪು ಜಯಂತಿ ಆಚರಿಸುತ್ತಿರುವುದು ಮುಸ್ಲಿಮರನ್ನು ಓಲೈಸಲು, ಇದರಿಂದ ಅನಾವಶ್ಯಕವಾಗಿ ಜಯಂತಿ ಪರ ಮತ್ತು ವಿರೋಧಿಗಳ ಮಧ್ಯೆ ದ್ವೇಷದ ವಾತಾವರಣ ಉಂಟಾಗಿದೆ. ಇದಕ್ಕೆಲ್ಲಾ ಸಿದ್ದರಾಮಯ್ಯ ಸರಕಾರ ಕಾರಣ - ಆರ್ ಎಸ್ ಎಸ್.

ದೆಹಲಿಯಲ್ಲಿ ಟಿಪ್ಪು ಪ್ರತಿಮೆ

ದೆಹಲಿಯಲ್ಲಿ ಟಿಪ್ಪು ಪ್ರತಿಮೆ

ದೇಶ ಪ್ರೇಮಿ, ಬ್ರಿಟಿಷರ ವಿರುದ್ದ ಜೀವನದ ಅಂತ್ಯದವರೆಗೂ ಹೋರಾಟ ನಡೆಸಿದ ಟಿಪ್ಪು ಸುಲ್ತಾನ್ ಅವರ ಪ್ರತಿಮೆಯನ್ನು ಸಂಸತ್ ಭವನದ ಮುಂದೆ ಸ್ಥಾಪಿಸಬೇಕು ಎಂದು ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಟಿಪ್ಪು ಧೀಮಂತ ಯೋಧ

ಟಿಪ್ಪು ಧೀಮಂತ ಯೋಧ

ಕರೀಂಖಾನ್ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ವಾಟಾಳ್, ಬ್ರಿಟಿಷರ ವಿರುದ್ಧ ಮೊದಲ ಯುದ್ಧ ಸಾರಿದ್ದ ಧೀಮಂತ ದೊರೆ ಟಿಪ್ಪು ಸುಲ್ತಾನ್ ಅವರ ಪ್ರತಿಮೆಯನ್ನು ಸದನದ ಮುಂದೆ ಪ್ರತಿಷ್ಠಾಪಿಸಬೇಕು. ಇದಕ್ಕೆ ಸಿದ್ದರಾಮಯ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ವಾಟಾಳ್ ಮನವಿ ಮಾಡಿದ್ದಾರೆ.

ದೇವಾಲಯ ಸಮಗೊಳಿಸಿದ್ದ ಟಿಪ್ಪು

ದೇವಾಲಯ ಸಮಗೊಳಿಸಿದ್ದ ಟಿಪ್ಪು

ಟಿಪ್ಪು ಭಾರಿ ಸಂಖ್ಯೆಯಲ್ಲಿ ದೇವಾಲಯಗಳನ್ನು ನೆಲಸಮಗೊಳಿಸಿ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದ. ಆತ ದಕ್ಷಿಣ ಭಾರತದ ಔರಂಗಜೇಬ್‌ಎಂದು RSS ಮುಖವಾಣಿ ಪಾಂಚಜನ್ಯ ಸಂಪಾದಕೀಯದಲ್ಲಿ ಪ್ರಕಟವಾಗಿದೆ.

ಅಹಿಂದ ಹೆಸರು ಹೇಳಿ ಬಂದ ಸಿದ್ದರಾಮಯ್ಯ

ಅಹಿಂದ ಹೆಸರು ಹೇಳಿ ಬಂದ ಸಿದ್ದರಾಮಯ್ಯ

ಅಹಿಂದ ಮತಬ್ಯಾಂಕಿನಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ, ಸರ್ವಾಧಿಕಾರಿಯಂತೆ ವರ್ತಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಂತೆ ವರ್ತಿಸುತ್ತಿದ್ದಾರೆಂದು ಸಂಘಟನೆಯ ಮುಖವಾಣಿ ಪಾಂಚಜನ್ಯದಲ್ಲಿ ಲೇಖನ ಪ್ರಕಟವಾಗಿದೆ.

English summary
Karnataka government's decision to celebrate Tipu Jayanti: Tipu is Aurangzeb of South and Siddaramaiah is like Lalu Prasad Yadav of South, RSS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X