ಜಲಪಾತದ ಸುಳಿಗೆ ಸಿಕ್ಕಿ ಟಿಸಿಎಸ್ ಟೆಕ್ಕಿ ಸಾವು
ತಿರುವನಂತಪುರ, ಅ.4: ವಯನಾಡಿನ ಮೀನ್ಮುಟ್ಟಿ ಜಲಪಾತದ ಬಳಿ ಕಲ್ಲರ ಹೊಳೆಯಲ್ಲಿ ಹರ್ಯಾಣದ ಯುವ ಸಾಫ್ಟ್ ವೇರ್ ಇಂಜಿನಿಯರ್ ಬುಧವಾರ ನೀರು ಪಾಲಾಗಿದ್ದಾನೆ. ಜತೆಗೆ ಆತನ ಸ್ನೇಹಿತನೂ ಮುಳುಗಿದ್ದು, ಅವನ ಮೃತದೇಹ ಸಿಕ್ಕಿಲ್ಲ.

ತಿರುವನಂತಪುರದ ಟೆಕ್ನೊಪಾರ್ಕ್ನಲ್ಲಿರುವ Tata Consultancy Services- TCS ಸಾಫ್ಟ್ ವೇರ್ ಕಂಪನಿಯಲ್ಲಿ ತರಬೇತಿಗಾಗಿ ಬಂದಿದ್ದ ಅವರು ಕಲ್ಲರ ಹೊಳೆಗೆ ಪಿಕ್ ನಿಕ್ ಗೆಂದು ಹೋಗಿದ್ದರು. ಮೃತ ಟೆಕ್ಕಿಯನ್ನು ಹರ್ಯಾಣದ ಮಹೇಶ್ ಕುಮಾರ್ (39) ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ರಾಜಸ್ಥಾನದ ಅತುಲ್ ಯಾದವ್ (24) ದೇಹ ಇನ್ನೂ ಪತ್ತೆಯಾಗಿಲ್ಲ.
TCS ಕಂಪನಿಯಿಂದ ಒಟ್ಟು ಒಂಬತ್ತು ಮಂದಿ ಗಾಂಧಿ ಜಯಂತಿಯಂದು ರಜಾ ದಿನ ಕಳೆಯಲು ಮೀನ್ಮುಟ್ಟಿ ಜಲಪಾತ ವೀಕ್ಷಣೆಗೆ ಬಂದಿದ್ದರು. 150 ಅಡಿ ಆಳದ ಜಲಪಾತದ ಸುಳಿಗೆ ಸಿಕ್ಕಿ ಒದ್ಲಾಡುತ್ತಿದ್ದ ಗೆಳೆಯ ಅತುಲ್ ಯಾದವನನ್ನು ಬಚಾವು ಮಾಡಲು ಟೆಕ್ಕಿ ಮಹೇಶ್ ಕುಮಾರ ದುರ್ಗಮ ಪ್ರದೇಶದತ್ತ ಸಾಗಿದ್ದಾನೆ. ಆದರೆ ನೀರಿನಲ್ಲಿ ಇಬ್ಬರೂ ಕೊಚ್ಚಿಹೋಗಿದ್ದಾರೆ. ಸ್ಥಳೀಯ ಗಾರ್ಡ್ ಗಳ ಎಚ್ಚರಿಕೆಯನ್ನು ಧಿಕ್ಕರಿಸಿ ಈ ಯುವ ತಂಡ ನೀರಿಗೆ ಇಳಿದಿತ್ತು.
ಪಶ್ಚಿಮ ಘಟ್ಟಗಳಲ್ಲಿ ಕಲ್ಲರ ಬಳಿಯಿರುವ Meenmutty ಹೊಳೆ ಬಹಳ ಅಪಾಯಕಾರಿ ಸ್ಥಳ. 1991ರಲ್ಲಿ ಇಲ್ಲಿನ ಸರಕಾರಿ ದಂತ ವೈದ್ಯಕೀಯ ಕಾಲೇಜಿನ 8 ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ. 2006ರಲ್ಲಿ ಸ್ನಾನ ಮಾಡುತ್ತಿದ್ದ ನಾಲ್ವರು ಯುವಕರು ನೀರು ಪಾಲಾಗಿದ್ದರು. ಕಳೆದ ವರ್ಷ ಒಬ್ಬ ಬಾಲಕ ಮುಳುಗಿದ್ದಾನೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications