ಬೀದಿಯಲ್ಲೇ ಹೆಂಡತಿಯನ್ನು ವಿವಸ್ತ್ರಗೊಳಿಸಿದ ಪತಿರಾಯǃ

ಹೈದ್ರಾಬಾದ್, ಅ. 23: ತನ್ನ ಕೃತ್ಯಗಳಿಗೆ ಸಹಕಾರ ನೀಡದ ಹೆಂಡತಿಯನ್ನು ವಿವಸ್ತ್ರಗೊಳಿಸಿದ ವಿಕೃತ ಪತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆಂಧ್ರ ಪ್ರದೇಶದ ತೆಲಂಗಾಣ ಜಿಲ್ಲೆಯಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ನಡೆದಿದೆ.

ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ನಿಜಾಮಾಬಾದ್ ಜಿಲ್ಲೆಯ ನಾಗಾರಾಂನ ನರಸಿಂಹಲು ಮಚ್ಚು ತೋರಿಸಿ ಹೆಂಡತಿಯನ್ನು ಬೆದರಿಸಿ, ಆಕೆಯ ಬಟ್ಟೆ ಹರಿದು ಸುಮಾರು ಒಂದು ಕಿಮೀ ದೂರ ಎಳೆದುಕೊಂಡು ಹೋಗಿದ್ದಾನೆ. ತಾನು ಕದ್ದು ತಂದ ವಸ್ತುಗಳನ್ನು ಮಾರಾಟ ಮಾಡಲು ಹೆಂಡತಿ ಒಪ್ಪದಿದ್ದಕ್ಕೆ ಆಕೆಗೆ ಈ ಶಿಕ್ಷೆ ವಿಧಿಸಿದ್ದಾನೆ.[ಆರ್ಕಿಡ್ಸ್ ಶಾಲೆಯಲ್ಲಿ ಅತ್ಯಾಚಾರ, ಆರೋಪಿ ಎಲ್ಲಿ?]

rape

ನರಸಿಂಹಲು ಕೃತ್ಯವನ್ನು ಕೆಲ ಯುವಕರು ತಡೆಯಲು ಮುಂದಾಗಿದ್ದಾರೆ. ಆದರೆ ತನ್ನ ಕೈಲಿದ್ದ ಮಚ್ಚಿನಿಂದ ಜನರನ್ನು ಹೆದರಿಸಿದ ಆತ ಹತ್ತಿರಕ್ಕೆ ಯಾರೂ ಬರದಂತೆ ನೋಡಿಕೊಂಡಿದ್ದಾನೆ. ಅವಮಾನ ತಾಳದ ಹೆಂಡತಿ ಲಕ್ಷ್ಮೀ ಕೆರೆಗೆ ಹಾರಿದ್ದಾಳೆ. ಆದರೂ ಬಿಡದ 'ಪತಿರಾಯ' ಹೆಂಡತಿಯನ್ನು ಅಲ್ಲಿಂದಲೂ ಎಳೆದು ತಂದಿದ್ದಾನೆ.

ಇತ್ತ ಪೊಲೀಸರಿಗೂ ಸುದ್ದಿ ಮಟ್ಟಿದ್ದು ಸ್ಥಳಕ್ಕೆ ಆಗಮಿಸುವುದರೊಳಗಾಗಿ ಸಾರ್ವಜನಿಕರು ನರಸಿಂಹಲುನನ್ನು ಹಿಡಿದು ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಕೊಲೆ ಪ್ರಯತ್ನದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಆರ್ಕಿಡ್ಸ್ ಶಾಲೆ ಪ್ರಕರಣದ ಬಗ್ಗೆ ಎಂಎನ್ ರೆಡ್ಡಿ ಹೇಳಿದ್ದೇನು?]

ಕಳ್ಳತನ ಮಾಡಿದ ವಸ್ತುಗಳನ್ನು ಹೆಂಡತಿಯರ ಕೈಯಲ್ಲಿ ಮಾರಾಟ ಮಾಡಿಸುವುದು ಇದು ಹೊಸದೇನಲ್ಲ. ಈ ಭಾಗದ ಜನರ ಕಾಯಕವೇ ಕಳ್ಳತನ ಎಂಬಂತಾಗಿದೆ. ಮಾರಾಟ ಮಾಡಲು ವಿರೋಧಿಸಿದ್ದಕ್ಕೆ ಮಹಿಳೆ ಶಿಕ್ಷಗೆ ಒಳಗಾಗಿದ್ದಾಳೆ ಎಂದು ಯೆಲ್ಲಾರೆಡ್ಡಿ ಟೌನ್ ಪೊಲೀಸ್ ಇನ್ಸ್ ಪೆಕ್ಟರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+