ದೇಶದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಸೆಕ್ಸ್ ಸ್ಕ್ಯಾಂಡಲ್‌ಗಳಿವು
ದೇಶದಲ್ಲಿ ಚುನಾವಣೆಗಳ ಬಿಸಿ ಏರುತ್ತಲೆ ಇದೆ. ಈ ಮಧ್ಯ ಇನ್ನೊಂದು ಸುದ್ದಿ ಚುನಾವಣೆಗಳಿಗಿಂತಲೂ ವೇಗವಾಗಿ ಹಬ್ಬುತ್ತಿದೆ. ಈ ಸುದ್ದಿ ರಾತ್ರೋ ರಾತ್ರಿ ಮಾಧ್ಯಮಗಳಿಗೆ ಆಹಾರವಾಗಿದೆ. ಹಾಸನದಿಂದ ಬಂದ ಒಂದಿಷ್ಟು ವಿಡಿಯೋ ದೇಶದ ರಾಜಕಾರಣದಲ್ಲೇ ಸಂಚಲವನ್ನು ಮುಡಿಸಿದೆ.
ಹಾಲಿ ಸಂಸದ ಹಾಗೂ ಸದ್ಯ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಾ ಸೆಕ್ಸ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ನಿಜಕ್ಕೂ ವಿರೋಧ ಪಕ್ಷಗಳಿಗೆ ಆಹಾರವಾಗುತ್ತಿದೆ. ಅಂದಹಾಗೆ ದೇಶದ ರಾಜಕಾರಣಗಳ ರಾಸಲಿಲೆಯಿಂದ ತಮ್ಮ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದು ಇದೇ ಮೊದಲೇನಲ್ಲ ಇದಕ್ಕೂ ಮೊದಲು ಇಂತಹ ಪ್ರಕರಣಗಳು ದೇಶದಲ್ಲಿ ಸಾಕಷ್ಟು ನಡೆದಿವೆ. ಹಾಗಿದ್ದರೆ, ರಾಸ ಲೀಲೆ ಪ್ರಕರಣದಿಂದ ತಮ್ಮ ಕುರ್ಚಿಗೆ ಕುತ್ತು ತಂದುಕೊಂಡ ಪ್ರಮುಖ ರಾಜಕಾರಣಿಗಳ ವಿವರ ಇಲ್ಲಿದೆ.

ಮಗನ ಕೆಲಸಕ್ಕೆ ತಂದೆಗೆ ಶಿಕ್ಷೆ
1978 ರಲ್ಲಿ ಭಾರತದ ಮೊದಲ ದಲಿತ ಪ್ರಧಾನಿ ಆಗುವ ಆಸೆಯನ್ನು ಕಾಣುತ್ತಿದ್ದ ಬಾಬು ಜಗಜೀವನ್ ರಾಮ್ ಗೆ ಅವರ ಮಗನ ರಾಸಲೀಲೆ ಮುಳವಾಯಿತು. ಅವರ ಮಗ ಸುರೇಶ್ ರಾಮ್ ಲೈಂಗಿಕ ಹಗರಣವು ಬೆಳಕಿಗೆ ಬಂದಿದ್ದರಿಂದ, ಬಾಬು ಜಗಜೀವನ್ ರಾಮ್ ಅವರ ರಾಜಕೀಯ ವೃತ್ತಿಜೀವನವನ್ನು ಕೊನೆಗೊಂಡಿತು.
ರಾಜ್ಯಪಾಲರ ರಾಸಲೀಲೆ
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಆಗಿನ ಆಂಧ್ರಪ್ರದೇಶದ ರಾಜ್ಯಪಾಲ ಎನ್‌ಡಿ ತಿವಾರಿ ಕೂಡ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದ ಹಿರಿಯ ರಾಜಕಾರಣಿ. ಇವರ ರಾಸಲಿಲೇ ವಿಡಿಯೋವನ್ನು ಟಿವಿ ಚಾನೆಲ್ ಪ್ರಸರಿಸಿತ್ತು. ಎನ್‌ಡಿ ತಿವಾರಿ ಲೈಂಗಿಕ ಹಗರಣದಲ್ಲಿ ಸಿಲುಕಿದ್ದರು. ಈ ಸುದ್ದಿ ಹರಡಿದ ನಂತರ, ಎನ್‌ಡಿ ತಿವಾರಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು.
ಸಿಡಿ ಬ್ಲ್ಯಾಕ್ ಮೇಲ್
ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಕೂಡ ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇವರು 2012ರಲ್ಲಿ ರಾಜ್ಯ ಸಭಾ ಸದಸ್ಯರೂ ಆಗಿದ್ದರು. ಮನು ಸಿಂಘ್ವಿ ರಾಸಲೀಲೆಯ ವಿಡಿಯೋದಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಮಹಿಳಾ ವಕೀಲರೊಂದಿಗಿನ ದೃಶ್ಯಗಳು ಕಂಡು ಬಂದಿದ್ದವು. ಅಲ್ಲದೆ ವಿಡಿಯೋವನ್ನು ಬಳಿಕ ಡಿಲಿಟ್ ಮಾಡಲಾಯಿತು. ಅಂದಹಾಗೆ ಈ ಸಿಡಿಯನ್ನು ಮಾಡಿದ್ದು ಸಿಂಘ್ವಿ ಮಾಜಿ ಕಾರು ಚಾಲಕ ಎಂದು ತಿಳಿದು ಬಂದಿದೆ. ಇದರಿಂದ ಅವರಿಗೆ ಆತ ಪದೇ ಪದೇ ಬ್ಲ್ಯಾಕ್ ಮೇಲ್ ಸಹ ಮಾಡುತ್ತಿದ್ದ ಎನ್ನಲಾಗಿದೆ.

ಹರಿಯಾಣದಲ್ಲಿ ಸದ್ದು ಮಾಡಿತ್ತು ಸ್ಕ್ಯಾಂಡಲ್
ಹರಿಯಾಣ ರಾಜಕೀಯದಲ್ಲಿ ಸೆಕ್ಸ್ ಸ್ಕ್ಯಾಂಡಲ್ ಸದ್ದು ಮಾಡಿತ್ತು. ಹರಿಯಾಣದ ಮಾಜಿ ಸಚಿವ ಗೋಪಾಲ್ ಕಾಂಡಾ ಅವರು ಲೈಂಗಿಕ ಹಗರಣದ ಆರೋಪವನ್ನು ಎದುರಿಸುತ್ತಿದ್ದಾರೆ. ಈತ ಗೀತಿಕಾ ಶರ್ಮಾ ಎಂಬ ಮಹಿಳೆಗೆ ವಂಚನೆ ಮಾಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಗೀತಿಕಾ ಅವರ ಆತ್ಮಹತ್ಯೆ ಪತ್ರವೂ ಬಹಿರಂಗವಾಗಿದ್ದು, ಅದರಲ್ಲಿ ಕಾಂಡ ಎಂಬುವರು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಬರೆದಿದ್ದರು.
ಆಪ್‌ಗು ಬಿಟ್ಟಿಲ್ಲ ಸಿಡಿ ಪ್ರಕರಣ
ಸೆಕ್ಸ್ ಸಿಡಿ ಪ್ರಕರಣ ಎಲ್ಲ ಪಕ್ಷಗಳಿಗೂ ಅಂಟಿಕೊಂಡಿದೆ. ದೆಹಲಿಯಲ್ಲಿ ಸರ್ಕಾರ ನಡೆಸುತ್ತಿದ್ದ ಆಪ್ ಸರ್ಕಾರದ ಮಂತ್ರಿಗೂ ರಾಸಲೀಲೆ ಪ್ರಕರಣ ಮುಳವಾಗಿದೆ. ಆಪ್ ಸರ್ಕಾರದ ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಂದೀಪ್ ಕುಮಾರ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಅಮಾನತ್ತು ಮಾಡಲಾಯಿತು. ಅಲ್ಲದೆ ನ್ಯಾಯಾಲಯದಲ್ಲಿ ಅವರು ವಿಚಾರಣೆಗೆ ಸಹ ಒಳಪಟ್ಟರು.












Click it and Unblock the Notifications