Tallest Railway Bridge: ಭಾರತದಲ್ಲಿದೆ ವಿಶ್ವದ ಅತೀ ಎತ್ತರದ 'ರೈಲ್ವೆ ಬ್ರೀಡ್ಜ್', ಉದ್ಘಾಟನೆ ಶೀಘ್ರ: ವಿಡಿಯೋ
ಜಮ್ಮು, ಜೂನ್ 17: ವಿಶ್ವದ ಅತೀ ಎತ್ತರದ 'ಚೆನಾಬ್ ರೈಲ್ವೆ ಬ್ರಿಡ್ಜ್' ಮೇಲೆ ಭಾನುವಾರ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತ ಮಾಹಿತಿ ನೀಡಿದ್ದಾರೆ. ಪ್ರಾಯೋಗಿಕ ರೈಲು ಚಲನೆಯ ಸುರಂದ ವಿಡಿಯೋ ಅನ್ನು ಅವರು ಹಂಚಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಂಗಲ್ಡಾನ್‌ನಿಂದ ರಿಯಾಸಿಗೆ ಮೊದಲ ಪ್ರಾಯೋಗಿಕ ರೈಲು ಭಾನುವಾರ ಯಶಸ್ವಿಯಾಗಿ ಓಡಿತು. ಕಣಿವೆ ಪ್ರದೇಶದಲ್ಲಿ ನದಿಯ ಚೆನಾಬ್ ನದಿಯ ಮೇಲೆ ಈ ರೈಲ್ವೆ ಬ್ರಿಡ್ಜ್ ಅನ್ನು ನಿರ್ಮಿಸಲಾಗಿದೆ. ಈ ಮೂಲಕ ಎರಡು ಬದಿಯ ಸಂಪರ್ಕ ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ವ್ಯಾಗನ್ ಟವರ್ ಓಡಿಸಿ ಪರಿಶೀಲನೆ
ಭಾನುವಾರ ರೈಲ್ವೆ ಉನ್ನತಾಧಿಕಾರಿಗಳು ಸೇತುವೆ ಇತರ ತಾಂತ್ರಿಕ ಕೆಲಸಗಳನ್ನು ಪರಿಶೀಲನೆ ನಡೆಸಿದರು. ಇದೇ ವೇಳೆ ಪ್ರಾಯೋಗಿಕವಾಗಿ ವ್ಯಾಗನ್ ಟವರ್ ಓಡಿಸಿ ಪರಿಶೀಲಿಸಲಾಯಿತು ಎಂದು ಎಎನ್‌ಐ ವರದಿ ಮಾಡಿದೆ.
ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಎಲ್ಲಾ ನಿರ್ಮಾಣ ಕಾರ್ಯ ಮುಗಿದಿವೆ. ಸುರಂಗ-1 ಪೂರ್ಣಗೊಳ್ಳಬೇಕಿದೆ. ಅದು ಪೂರ್ಣಗೊಂಡ ಬಳಿಕ USBRL ಕಾರ್ಯಗತಗೊಳ್ಳಲಿದೆ. ಆಗ ಕಣಿವೆಯಿಂದ ದೇಶದ ಇತರ ಭಾಗಗಳಿಗೆ ರೈಲು ಸಂಪರ್ಕ ಹೊಂದಿದಂತಾಗುತ್ತದೆ. ಈ ಮೂಲಕ ಬಹುವರ್ಷಗಳ ಕನಸು ನನಸಾಗುತ್ತದೆ.

ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಡ್ಜ್ ಹೆಗ್ಗಳಿಕೆ
ಇದೇ ವರ್ಷ ಫೆಬ್ರವರಿ 20 ರಂದು ಪ್ರಧಾನಿ ನರೇಂದ್ರ ಮೋದಿ ಅವರು USBRL ಒಟ್ಟು 48.1-ಕಿಮೀ ಉದ್ದದ ಬನಿಹಾಲ್-ಸಂಗಲ್ದನ್ ವಿಭಾಗ ಉದ್ಘಾಟಿಸಿದರು. ಚೆನಾಬ್ ನದಿ ಮೇಲೆ ಕಟ್ಟಲಾಗಿರುವ ಈ ಬ್ರಿಡ್ ಬರೋಬ್ಬರಿ 359 ಮೀಟರ್ (1,178 ಅಡಿ) ಎತ್ತರದಲ್ಲಿದೆ. ಇದುವರೆಗೆ ಪ್ಯಾರಿಸ್‌ನಲ್ಲಿರುವ 'ಐಫೆಲ್ ಟವರ್' ವಿಶ್ವದ ಎತ್ತರದ ಟವರ್ ಆಗಿತ್ತು. ಇದೀಗ ಅದರ ಎತ್ತರವನ್ನು ಮೀರಿಸಿದ್ದು ಚೆನಾಬ್ ರೈಲ್ವೆ ಬ್ರಿಡ್ಜ್. ಇದು ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1st trial train between Sangaldan to Reasi. pic.twitter.com/nPozXzz8HM
— Ashwini Vaishnaw (@AshwiniVaishnaw) June 16, 2024
ಯೋಜನೆಯ ಒಟ್ಟು ಅಂದಾಜು ವೆಚ್ಚ, ಮಾಹಿತಿ
1.3 ಕಿಲೋ ಮೀಟರ್ ಉದ್ದದ ಸೇತುವೆ ಇದಾಗಿದೆ. USBRL ಕಣಿವೆಯಿಂದ ದೇಶದ ಇತರ ಭಾಗಗಳಿಗೆ ಎಲ್ಲಾ ಹವಾಮಾನದಲ್ಲೂ ಸಂಪರ್ಕ ಒದಗಿಸಲು ಶಕ್ತವಾಗಿದೆ. 2022 ರಲ್ಲಿ ಯೋಜನೆ ಆರಂಭಿಸಲಾಗಿದ್ದು, ಅಂದಾಜು ವೆಚ್ಚ 28,000 ಕೋಟಿ ರೂ. ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.
ಕಾಶ್ಮೀರದ ಸೇಬು, ಪೇರಳೆ, ಚೆರ್ರಿ, ವಾಲ್‌ನಟ್ಸ್, ಬಾದಾಮಿ ಸೇರಿದಂತೆ ತೋಟಗಾರಿಕಾ ಉತ್ಪನ್ನಗಳಿಗೆ ಸಾಗಾಟಕ್ಕೆ, ಸರಕು ಸೇವೆಗಳನ್ನು ಸರಬರಾಜಿಗೆ ಕಡಿಮೆ ಬೆಲೆಗೆ ಸಾರಿಗೆ ಸೌಲಭ್ಯ ಈ ಭಾಗದಲ್ಲಿ ಸಿಕ್ಕಂತಾಗಿದೆ. ಕಚ್ಚಾ ವಸ್ತುಗಳ ಆಮದಿಗೆ, ಕೈಗಾರಿಕೆಗೆ ಸಂಬಂಧಿಸಿದಂತೆ ಉತ್ಪನ್ನಗಳನ್ನು ಈ ರೈಲ್ವೆ ಮಾರ್ಗದ ಮೂಲಕ ಸುಲಭವಾಗಿ ತರಬಹುದಾಗಿದೆ.
ಇಲ್ಲಿ ರೈಲ್ವೆ ಬ್ರಿಡ್ಜ್ ನಿರ್ಮಿಸುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಇದನ್ನು ಪೂರ್ಣಗೊಳಿಸಿದ ರೈಲ್ವೆ ಇಲಾಖೆಗೆ, ಭಾರತ ಸರ್ಕಾರದ ಪರ ಚೆನಾಬ್ ನದಿ ದಂಡ ಮೇಲೆ ಭಾನುವಾರ ಜೈಕಾರದ ಘೊಷಣೆಗಳು ಕೇಳಿ ಬಂದವು. ಕಾಶ್ಮೀರದ ಜನರು ಹರ್ಷ ವ್ಯಕ್ತಪಡಿಸಿದರು.












Click it and Unblock the Notifications