ಗಂಡ ಬೆಳ್ಳಗಿಲ್ಲ..ಅಂದವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಹೆಂಡತಿ
ಉತ್ತರ ಪ್ರದೇಶ, ಅಕ್ಟೋಬರ್ 26: ಇತ್ತೀಚಿಗೆ ಆತ್ಮಹತ್ಯೆ ಎನ್ನುವುದು ಎಲ್ಲಾ ಸಮಸ್ಯೆಗಳಿಗೆ ಸುಲಭ ಪರಿಹಾರ ಎನ್ನುವಂತೆ ಕೆಲವರು ವರ್ತಿಸುತ್ತಿದ್ದಾರೆ. ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲಾಗದೇ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಸಾಲ, ಸಾವು, ನೋವು ಇವುಗಳಿಂದ ಬೇಸತ್ತು ಜೀವನ ಸಾಕು ಎನಿಸಿ ಕೆಲವರು ಆತ್ಮಹತ್ಯೆ ಶರಣಾಗುತ್ತಾರೆ. ಆದರೆ ಇಲ್ಲೊಬ್ಬಳ್ಳು ಯುವತಿ ಗಂಡನ ಅಂದದ ಬಗ್ಗೆ ನೊಂದು ಮದುವೆಯಾದ ನಾಲ್ಕೇ ತಿಂಗಳಿಗೆ ಜೀವನ ಅಂತ್ಯಗೊಳಿಸಿಕೊಂಡಿದ್ದಾಳೆ.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಿಯಾಲ್ ಖೇಡಾ ಮೊಹಲ್ಲಾದಲ್ಲಿ ನೆಲೆಸಿರುವ 25 ವರ್ಷದ ತೌಫಿಕ್ ಎನ್ನುವಾತನ ಪತ್ನಿ ಸಿಮ್ರಾನ್ ಸಾವಿಗೆ ಶರಣಾದ ಮಹಿಳೆಯಾಗಿದ್ದಾಳೆ. ತೌಫಿಕ್, ಸಿಯಾಲ್ ಖೇಡಾ ಮೊಹಲ್ಲಾದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಬರೌಲಾದ ಅಲಿಗಢದ ಜಫರಾಬಾದ್ ಸಿಮ್ರಾನ್ ತವರು ಮನೆಯಾಗಿದ್ದು, ಮದುವೆ ಬಳಿಕ ತೌಫಿಕ್ ಊರು ಸಿಯಾಲ್ ಖೇಡಾ ಮೊಹಲ್ಲಾಗೆ ಬಂದು ಜೀವನ ನಡೆಸುತ್ತಿದ್ದರು.

ಸಿಮ್ರಾನ್‌ಗೆ ತೌಫಿಕ್ನನ್ನು ಮದುವೆಯಾಗಲು ಇಷ್ಟ ಇರಲಿಲ್ಲವಂತೆ. ಆತ ನೋಡಲು ಅಂದವಾಗಿಲ್ಲ, ನೋಡಲು ಕಪ್ಪಗಿದ್ದಾನೆ ಎನ್ನುವುದು ಪೋಷಕರಿಗೆ ಆಕೆಯ ದೂರಾಗಿತ್ತು. ಆದರೆ ತೌಫಿಕ್ ಒಳ್ಳೆಯ ಹುಡುಗ ಎಂದು ಮನೆಯವರು ಮದುವೆ ಮಾಡಿಕೊಟ್ಟಿದ್ದರು. ತನ್ನ ಗಂಡ ಕಪ್ಪಗಿದ್ದಾನೆ ಎಂದೇ ಆಕೆ ಪ್ರತಿ ದಿನ ಕೊರಗುತ್ತಿದ್ದಳಂತೆ. ಮದುವೆಯಾಗಿ 4 ತಿಂಗಳಾದರೂ ಆಕೆ ಸಂತೋಷವಾಗಿರಲಿಲ್ಲ. ಗಂಡನ ಅಂದದ ಬಗ್ಗೆಯೇ ಕೊರಗುತ್ತಿದ್ದಳು ಎನ್ನಲಾಗಿದೆ.
ನಾಲ್ಕು ತಿಂಗಳು ಹೇಗೋ ಇಷ್ಟ ವಿಲ್ಲದ, ಅಂದವಿಲ್ಲದ ಗಂಡನ ಜೊತೆ ಜೀವನ ಸಾಗಿಸಿದ್ದ ಸಿಮ್ರಾನ್, ಪತಿ ತೌಫಿಕ್ ಕೆಲಸಕ್ಕೆ ತೆರಳಿದ ಬಳಿಕ ಜೀವನವನ್ನೇ ಕೊನೆಗೊಳಿಸಿಕೊಳ್ಳುವ ನಿರ್ಧಾರ ಮಾಡಿದ್ದಾಳೆ. ಮನೆಯಲ್ಲಿ ಇಬ್ಬರೇ ಇದ್ದ ಕಾರಣ ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಪತ್ನಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎನ್ನುವ ಮಾಹಿತಿ ಇದೆ.
ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದ ಸಿಮ್ರಾನ್‌ನನ್ನು ನೋಡಿದ ಅಕ್ಕಪಕ್ಕದ ಕೆಲವರು ಆಕೆಯ ಪತಿ ತೌಫಿಕ್‌ಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ಸಿಮ್ರಾನ್ ತವರು ಮನೆಯವರು ಕೂಡ ಘಟನಾ ಸ್ಥಳಕ್ಕೆ ಬಂದಿದ್ದು, ಗಂಡನ ಬಣ್ಣದ ಬಗ್ಗೆ ಆಗಾಗ ದೂರುತ್ತಿದ್ದಳು. ಅದೇ ಅವಳ ಸಾವಿಗೆ ಕಾರಣ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications