ಬೆಲೆ ಏರಿಕೆ ನಿಯಂತ್ರಿಸಲು ರಿಯಾಯಿತಿ ದರದಲ್ಲಿ ಟೊಮೇಟೊ ಮಾರಾಟ ಆರಂಭಿಸಿದ ಕೇಂದ್ರ ಸರ್ಕಾರ
ಬೆಂಗಳೂರು, ಜುಲೈ 14: ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ನೆರವಾಗುವ ಕ್ರಮದ ಭಾಗವಾಗಿ ಕೇಂದ್ರ ಸರ್ಕಾರವು ಇಂದು ದೆಹಲಿ-ಎನ್‌ಸಿಆರ್, ಲಕ್ನೋ, ಪಾಟ್ನಾ ಮತ್ತು ದೇಶಾದ್ಯಂತದ ಇತರ ಆಯ್ದ ದೊಡ್ಡ ನಗರಗಳಲ್ಲಿ ಪ್ರತಿ ಕೆಜಿಗೆ ₹ 90 ಕ್ಕೆ ಟೊಮೆಟೊ ಮಾರಾಟವನ್ನು ಪ್ರಾರಂಭಿಸಿದೆ.
ಗಗನಕ್ಕೇರುತ್ತಿರುವ ಟೊಮೇಟೊ ಬೆಲೆಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಪ್ರತಿ ವ್ಯಕ್ತಿ ತಲಾ 2 ಕೆಜಿ ಟೊಮೇಟೊವನ್ನು ಸಬ್ಸಿಡಿ ದರದಲ್ಲಿ ಖರೀದಿಸಬಹುದು. ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬೆಳೆದಿರುವ ಮಂಡಿಗಳಿಂದ ಹೊಸದಾಗಿ ಸಂಗ್ರಹಿಸಲಾದ ಟೊಮೇಟೊಗಳು ರಾತ್ರೋರಾತ್ರಿ ನವದೆಹಲಿಗೆ ಬಂದು ಇಳಿದಿವೆ.

ಶುಕ್ರವಾರದಿಂದ ದೆಹಲಿ ಎನ್‌ಸಿಆರ್ ಪ್ರದೇಶದ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಚಿಲ್ಲರೆ ಮಳಿಗೆಗಳ ಮೂಲಕ ಟೊಮೇಟೊ ದಾಸ್ತಾನುಗಳನ್ನು ವಿತರಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ಬುಧವಾರ ತಿಳಿಸಿತ್ತು. ಅದರಂತೆ ಈಗ ಟೊಮೇಟೊವನ್ನು ವಿತರಿಸಲಾಗುತ್ತಿದೆ. ನೋಯ್ಡಾದಲ್ಲಿ, ರಜನಿಗಂಧ ಚೌಕ್‌ನಲ್ಲಿರುವ ಎನ್‌ಸಿಸಿಎಫ್ ಕಚೇರಿಯಲ್ಲಿ ಮತ್ತು ಗ್ರೇಟರ್ ನೋಯ್ಡಾ ಮತ್ತು ಇತರ ಸ್ಥಳಗಳಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ಟೊಮೆಟೊಗಳನ್ನು ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
NCCF (ನ್ಯಾಶನಲ್ ಕೋ ಆಪರೇಟಿವ್ ಕಸ್ಟಮರ್ ಫೆಡರೇಶನ್) ವಾರಾಂತ್ಯದಲ್ಲಿ ಲಕ್ನೋ, ಕಾನ್ಪುರ ಮತ್ತು ಜೈಪುರದಂತಹ ಇತರ ನಗರಗಳಲ್ಲಿ ಮಾರಾಟವನ್ನು ಪ್ರಾರಂಭಿಸುತ್ತದೆ. ದೆಹಲಿಯಲ್ಲಿ ಎನ್‌ಸಿಸಿಎಫ್ ಶುಕ್ರವಾರ ಎಲ್ಲಾ 11 ಜಿಲ್ಲೆಗಳಲ್ಲಿ 20 ಮೊಬೈಲ್ ವ್ಯಾನ್‌ಗಳು ಮತ್ತು ಐದು ಕೇಂದ್ರಗಳ ಮೂಲಕ ಮಾರಾಟವನ್ನು ಪ್ರಾರಂಭಿಸಿದೆ. ಮೊದಲ ದಿನ ಸುಮಾರು 17,000 ಕೆಜಿ ಟೊಮ್ಯಾಟೊ ಮಾರಾಟವಾಗಲಿದೆ. ಸಬ್ಸಿಡಿ ದರವನ್ನು ಪ್ರತಿ ಗ್ರಾಹಕರಿಗೆ 2 ಕೆಜಿಗೆ ಸೀಮಿತಗೊಳಿಸಲಾಗುವುದು ಎಂದು ಎನ್‌ಸಿಸಿಎಫ್ ಅಧ್ಯಕ್ಷ ವಿಶಾಲ್ ಸಿಂಗ್ ತಿಳಿಸಿದ್ದಾರೆ.
ಶನಿವಾರ ಎನ್‌ಸಿಸಿಎಫ್ ಸುಮಾರು 20,000 ಕೆಜಿ ಟೊಮೆಟೊಗಳನ್ನು ಮಾರಾಟ ಮಾಡಲು ಯೋಜಿಸಿದೆ ಮತ್ತು ಮಾರಾಟವು ಹೆಚ್ಚಾದಂತೆ ಪ್ರಮಾಣವನ್ನು ದಿನಕ್ಕೆ 40,000 ಕ್ಕೆ ಹೆಚ್ಚಿಸಲಾಗುವುದು. ಕೇಂದ್ರವು ತನ್ನ ಕೃಷಿ ಮಾರುಕಟ್ಟೆ ಏಜೆನ್ಸಿಗಳಿಗೆ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF)ಟೊಮೇಟೊ ಖರೀದಿಯನ್ನು ತಕ್ಷಣವೇ ಪ್ರಾರಂಭಿಸಲು ಸೂಚಿಸಿದೆ.
ಕಳೆದ ತಿಂಗಳು ಟೊಮೇಟೊ ಕೆಜಿಗೆ ₹ 150 ರಿಂದ 160 ರಂತೆ ಖರೀದಿಸಲು ಮುಂದಾಗಿತ್ತು. ದೇಶದ ಹಲವಾರು ಭಾಗಗಳಲ್ಲಿ ಟೊಮೇಟೊ ಪ್ರತಿ ಕೆಜಿಗೆ ₹ 224 ಕ್ಕೆ ಏರಿತ್ತು. ಎನ್‌ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕ ಅನೀಸ್ ಜೋಸೆಫ್ ಚಂದ್ರ ಮಾತನಾಡಿ, ನಾವು ಪ್ರತಿ ಕೆಜಿಗೆ ₹ 90 ದರವನ್ನು ನಿಗದಿಪಡಿಸಿದ್ದೇವೆ, ಖರೀದಿ ದರವು ಕೆಜಿಗೆ ₹ 120-130 ಆಗಿದೆ, ನಷ್ಟವನ್ನು ಕೇಂದ್ರ ಸರ್ಕಾರ ಭರಿಸುತ್ತದೆ ಎಂದರು.
ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಅವಧಿಗಳು ಸಾಮಾನ್ಯವಾಗಿ ಟೊಮ್ಯಾಟೊಗೆ ಕಡಿಮೆ ಉತ್ಪಾದನೆಯ ತಿಂಗಳುಗಳಾಗಿವೆ. ಭಾರತದ ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ದೇಶದ ಒಟ್ಟು ಟೊಮೇಟೊ ಉತ್ಪಾದನೆಯ 56-58 ಪ್ರತಿಶತವನ್ನು ಹೊಂದಿವೆ. ದಕ್ಷಿಣ ಮತ್ತು ಪಾಶ್ಚಿಮಾತ್ಯ ಪ್ರದೇಶಗಳು ಹೆಚ್ಚುವರಿ ಟೊಮೇಟೊ ಬೆಳೆಯುವ ರಾಜ್ಯಗಳಾಗಿರುವುದರಿಂದ ಉತ್ಪಾದನಾ ಋತುಗಳ ಆಧಾರದ ಮೇಲೆ ಇತರ ಮಾರುಕಟ್ಟೆಗಳಿಗೆ ನೆರವು ನೀಡುತ್ತವೆ. ಉತ್ಪಾದನಾ ಋತುಗಳು ಪ್ರದೇಶಗಳಲ್ಲಿ ವಿಭಿನ್ನವಾಗಿವೆ ಎಂದು ಆಹಾರ ಸಚಿವಾಲಯ ಹೇಳಿದೆ.












Click it and Unblock the Notifications