ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ದಾಳಿ: ಮೂವರು ಉಗ್ರರ ಹತ್ಯೆ

ಕಾಶ್ಮೀರ, ಅಕ್ಟೋಬರ್ 6: ಜಮ್ಮು ಕಾಶ್ಮೀರ ಹಂದ್ವಾರದ ಲಂಗೇಟ್ ನ ರಾಷ್ಟ್ರೀಯ ರೈಫಲ್ಸ್ ಸೇನಾ ಕ್ಯಾಂಪ್ ಮೇಲೆ ಗುರುವಾರ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಡೆದ ಗುಂಡಿನ ದಾಳಿ ಬೆಳಗ್ಗೆ 5 ಗಂಟೆಗೆ ಶುರುವಾಯಿತು. ಭಾರತೀಯ ಯೋಧರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಮೂವರು ಉಗ್ರಗಾಮಿಗಳನ್ನು ಯೋಧರು ಹೊಡೆದುರುಳಿಸಿದ್ದಾರೆ.

ಉಗ್ರಗಾಮಿಗಳ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ ಯೋಧರು, ದೊಡ್ಡ ಅನಾಹುತ ನಡೆಯದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹದಿನೈದು ನಿಮಿಷಗಳ ಬಿಡುವಿನ ನಂತರ ಉಗ್ರರು ಮತ್ತೆ ಗುಂಡಿನ ದಾಳಿ ಮುಂದುವರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.[ರಾಷ್ಟ್ರೀಯ ರೈಫಲ್ ಕ್ಯಾಂಪ್ ಮೇಲೆ ಉಗ್ರರ ದಾಳಿ: ಯೋಧ ಸಾವು]

Army

ಕಳೆದ ಮೂರು ವಾರಗಳಲ್ಲಿ ಇದು ಉಗ್ರರ ಮೂರನೇ ದಾಳಿ. ಉರಿ ಸೇನಾ ಕ್ಯಾಂಪ್ ಮೇಲ್ ಉಗ್ರರು ನಡೆಸಿದ ದಾಳಿಯಲ್ಲಿ ಹತ್ತೊಂಬತ್ತು ಸೈನಿಕರು ಹುತಾತ್ಮರಾಗಿದ್ದರು. ನಾಲ್ವರು ಉಗ್ರಗಾಮಿಗಳನ್ನು ಕೊಲ್ಲಲಾಗಿತ್ತು.[ಹಬ್ಬದ ಸಮಯ ದೇಶಾದ್ಯಂತ ಕಟ್ಟೆಚ್ಚರದಿಂದಿರುವಂತೆ ಸೂಚನೆ]

ಇನ್ನು ಕಳೆದ ಭಾನುವಾರ ಬಾರಾಮುಲ್ಲಾದ ಸೇನಾ ಕ್ಯಾಂಪ್ ಹೊರ ಭಾಗದಲ್ಲಿ ದಾಳಿ ಮಾಡಿದ್ದ ಉಗ್ರರಿಂದ ಒಬ್ಬ ಭಾರತೀಯ ಯೋಧ ಹುತಾತ್ಮನಾಗಿದ್ದ, ಉಗ್ರರು ತಪ್ಪಿಸಿಕೊಂಡು ಹೋಗಿದ್ದರು. ಉರಿ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಆಕ್ರಮಣ ನಡೆಸಿತ್ತು. ಆ ನಂತರ ಉಗ್ರರಿಂದ ಸೇನಾ ಕ್ಯಾಂಪ್, ಚೆಕ್ ಪೋಸ್ಟ್ ಗಳ ಮೇಲೆ ದಾಳಿಗಳಾಗಬುಹುದು ಎಂದು ಗುಪ್ತಚರ ದಳ ಎಚ್ಚರಿಕೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+