ಇಶ್ಫಕ್ ಪದ್ದರ್ ಎನ್ ಕೌಂಟರ್: ಟ್ವಿಟ್ಟಿಗರಿಂದ ವಿಜಯೋತ್ಸವ
ಕುಲ್ಗಾಂ, ಸೆಪ್ಟೆಂಬರ್ 2: ಜಮ್ಮು ಕಾಶ್ಮೀರದ ಕುಲ್ಗಾಂ ನಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಇಶ್ಫಕ್ ಪದ್ದರ್ ನನ್ನು ಭಾರತೀಯ ಸೇನೆ ಹೊಡೆದುರುಳಿಸುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ ವಿಜಯೋತ್ಸವ ಮೊಳಗಿದೆ.
ಕಳೆದ ಮೇ 10 ತಿಂಗಳಿನಲ್ಲಿ ಕುಲ್ಗಾಂನಲ್ಲಿ ಭಾರತೀಯ ಸೇನೆಯ 22 ವರ್ಷದ ಲೆಫ್ಟಿನೆಂಟ್ ಉಮ್ಮರ್ ಫಯಾಜ್ ಅವರನ್ನು ಹತ್ಯೆಗೈದ ಘಟನೆಯಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆಯ ಇಶ್ಫಕ್ ಕೈವಾಡವೂ ಇತ್ತು. ಇದೀಗ ಭಾರತೀಯ ಸೇನೆ ನಡೆಸಿದ ಎನ್ ಕೌಂಟರ್ ನಲ್ಲಿ ಈ ಉಗ್ರ ಬಲಿಯಾಗಿದ್ದು, ಭಾರತೀಯರು ಸೇನೆಯ ಶೌರ್ಯವನ್ನು ಟ್ವಿಟ್ಟರ್ ನಲ್ಲಿ ಕೊಂಡಾಡಿದ್ದಾರೆ.
#IshfaqPadder, #BakraChopped , #Kulgam ಎಂಬಿತ್ಯಾದಿ ಹ್ಯಾಶ್ ಟ್ಯಾಗ್ ನಲ್ಲಿ ಇಶ್ಫಕ್ ಪದ್ದರ್ ಎಂಬ ಭಯೋತ್ಪಾದಕನ ಸಾವನ್ನು ಟ್ವಿಟ್ಟಿಗರು ಸಂಭ್ರಮಿಸಿದ್ದಾರೆ.
|
ಬಕ್ರೀದ್ ಟ್ರೀಟ್!
ನಮ್ಮ ಸೇನೆಯ ಬಕ್ರೀದ್ ಟ್ರೀಟ್ ಇದು! ಲಷ್ಕರ್ ಇ ತೋಯ್ಬಾ ಸಂಘಟನೆಯ ಇಶ್ಪಕ್ ಪದ್ದರ್ ನನ್ನು ಎನ್ ಕೌಂಟರ್ ಮೂಲಕ ಬಲಿಹಾಕಿ ಭಯೋತ್ಪಾದಕರಿಗೊಂದು ಪಾಠ ಹೇಳಿದೆ ಭಾರತೀಯ ಸೇನೆ ಎಂದು ಕಾರ್ತಿಕ್ ಶ್ರೀಧರನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಹಬ್ಬದ ದಿನ ನರಕಕ್ಕೆ!
ಬಕ್ರೀದ್ ಹಬ್ಬದ ದಿನ ಇಶ್ಫಕ್ ಪದ್ದರ್ ನನ್ನು ನರಕಕ್ಕೆ ಕಳಿಸಲಾಗಿದೆ ಎಂದು ರೋಹಿತ್ ಕುಮಾರ್ ಗುಪ್ತಾ ಎನ್ನುವವರು ಟೀಟ್ ಮಾಡಿದ್ದಾರೆ.
|
ಶುಭೋದಯ!
ನಾವು ಚಹಾ ಹೀರುತ್ತಿದ್ದ ಸಮಯದಲ್ಲಿ ನಮ್ಮ ಸಹೋದರರು ಗಡಿಯಲ್ಲಿ ಭಯೋತ್ಪಾದಕನನ್ನು ನೆಲಕ್ಕುರುಳಿಸಿದ್ದರು. ಶುಭೋದಯ ಎಂದು ಮೇಜರ್ ಸುರೇಂದ್ರ ಪೂನಿಯ ಅವರು ಟ್ವೀಟ್ ಮಾಡಿದ್ದಾರೆ.
|
ಉಮ್ಮರ್ ಫಯಾಜ್ ಹಂತಕನ ಹತ್ಯೆ
ನಾವೆಲ್ಲ ಇಲ್ಲಿ ಶನಿವಾರವನ್ನು ಸಮಭ್ರಮಿಸುತ್ತಿದ್ದರೆ, ಯೂನಿಫಾರ್ಮ್ ನಲ್ಲಿರುವ ನಮ್ಮ ಸಹೋದರರು ಭಯೋತ್ಪಾದಕನ ಹುಟ್ಟಡಗಿಸುತ್ತಿದ್ದರು ಎಂದು ಅಪೊಲಿನಾ ಡೆ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಫರಾ ಖಾನ್
ಲೆ.ಉಮ್ಮರ್ ಫಯಾಜ್ ಸಾವಿಗೆ ಕಾರಣನಾದ ಭಯೋತ್ಪಾದಕನ್ನು ಇಂದು ಬಲಿಹಾಕಲಾಗಿದೆ. ಬಹುಶಃ ಇಂದು ಫಯಾಜ್ ಅವರ ಆತ್ಮ ಶಾಂತಿ ಪಡೆದಿರಬಹುದು ಎಂದು ಫರಾ ಖಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications