ಮನಸ್ಸಿನ ಆಸೆ ಈಡೇರಬೇಕೇ, ಈ ದೇವಸ್ಥಾನಗಳಿಗೆ ಭೇಟಿ ನೀಡಿದರೆ ಅದೃಷ್ಟ ಬದಲಾಗುತ್ತೆ!
ಭಾರತದಲ್ಲಿನ ಹಲವಾರು ದೇವಾಲಯಗಳಿವೆ. ಅವಗಳಲ್ಲಿ ಕೆಲವು ದೇವಸ್ಥಾನಗಳಿಗೆ ವಿಶೇಷ ಮಾನ್ಯತೆ ಇದೆ. ಆ ಸ್ಥಳಗಳು ಕೇವಲ ದೇವಸ್ಥಾನಗಳಾಗಿ ಉಳಿದಿಲ್ಲ. ಅವು ಭಕ್ತರ ನಂಬಿಕೆಯ ಕೇಂದ್ರಗಳಾಗಿವೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ತಮ್ಮ ಜೀವನವೇ ಬದಲಾಗುತ್ತದೆ ಎನ್ನುತ್ತಾರೆ ಭಕ್ತರು.
ಇಲ್ಲಿಗೆ ಬಂದು ದೇವರ ದರ್ಶನ ಮಾಡಿದರೆ ಕಾಯಿಲೆಗಳು ಗುಣವಾಗುವುದರಿಂದ ಹಿಡಿದು ಬಹುನಿರೀಕ್ಷಿತ ಆಸೆಗಳನ್ನು ಪೂರೈಸುವವರೆಗೆ ಪಾಸಿಟಿವಿಟಿ ಸಿಗುತ್ತದೆ ಎನ್ನುವುದು ಭಕ್ತರ ಮಾತು. ಇಲ್ಲಿಯ ದೇವರ ದರ್ಶನ ಪಡೆದ ಅದೆಷ್ಟೋ ಮಂದಿ ಒಂದೇ ಭೇಟಿಯು ತಮ್ಮ ಅದೃಷ್ಟವನ್ನು ಶಾಶ್ವತವಾಗಿ ಬದಲಾಯಿಸಿತು ಎನ್ನುತ್ತಾರೆ. ಜೀವನದಲ್ಲಿ ಪವಾಡಗಳೇ ನಡೆಯಿತು ಎನ್ನುವವರು ಮತ್ತೊಂದಿಷ್ಟು ಮಂದಿ.

ಕಾಲಭೈರವ ದೇವಾಲಯ ಉಜ್ಜೈನಿ
ಇಲ್ಲಿ ಕಾಲ ಭೈರವನಿಗೆ ಸಲ್ಲಿಸುವ ಪ್ರಾರ್ಥನೆ ಸ್ವಲ್ಪ ಭಿನ್ನವಾಗಿದೆ. ಇಲ್ಲಿ ಭಕ್ತರು ದೇವರಿಗೆ ನೈವೇದ್ಯವಾಗಿ ಮದ್ಯವನ್ನು ಅರ್ಪಿಸುತ್ತಾರೆ. ಈ ಅಸಾಮಾನ್ಯ ಆಚರಣೆಗೆ ಕಾಲಭೈರವ ದೇವಸ್ಥಾನ ಹೆಸರುವಾಸಿಯಾಗಿದೆ. ಇಲ್ಲಿ ಭಕ್ತರು ಸಲ್ಲಿಸುವ ನೈವೇದ್ಯವನ್ನು ಭೈರವನು ತಕ್ಷಣವೇ ಸೇವಿಸುತ್ತಾನೆ ಎನ್ನುವುದು ನಂಬಿಕೆ. ಕಾಲಭೈರವನ ದರ್ಶನಕ್ಕೆ ದೇಶದ ನಾನಾ ಭಾಗಗಳಿಂದ ಜನ ಆಗಮಿಸುತ್ತಾರೆ.
ಇಲ್ಲಿಗೆ ಬಂದು ದೇವರ ದರ್ಶನ ಪಡೆದು ನೈವೇದ್ಯ ಅರ್ಪಿಸಿದ ನಂತರ ಜೀವನದಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಇಲ್ಲಿ ಭಕ್ತರು ತಮ್ಮ ಮನಸ್ಸಿನ ಮಾತುಗಳನ್ನು ದೇವರ ಬಳಿ ಹೇಳುತ್ತಾರೆ. ಕಷ್ಟ ನಷ್ಟ, ನೋವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸೊಷ್ಟವಾದ ಉತ್ತರ ಇಲ್ಲಿ ಸಿಗುತ್ತದೆ ಎನ್ನುತ್ತಾರೆ.
ತಿರುಪತಿ ಬಾಲಾಜಿ
ತಿರುಪತಿ ದೇವಸ್ಥಾನದಲ್ಲಿ ದಿನಕ್ಕೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ವಿಶ್ವದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ದೇವರ ದರ್ಶನ ಪಡೆಯಬೇಕಾದರೆ ಗಂಟೆ ಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು. ಕೆಲವರು ಕಾಲ್ನಡಿಗೆಯಲ್ಲಿಯೇ ಏಳು ಬೆಟ್ಟ ಹತ್ತಿಕೊಂಡು ಹೋಗಿ ದೇವರ ದರ್ಶನ ಪಡೆಯುತ್ತಾರೆ.
ಶ್ರದ್ಧಾಭಕ್ತಿಯಿಂದ ಇಲ್ಲಿ ದೇವರ ಬಳಿ ಭಕ್ತರು ಇಡುವ ಕೋರಿಕೆಗೆ ತಿಮ್ಮಪ್ಪ ಕಿವಿಯಾಗುತ್ತಾನೆ ಎನ್ನುವುದು ನಂಬಿಕೆ. ಅಲ್ಲದೆ ನಾನಿದ್ದೇನೆ ಎನ್ನುವ ಸೂಕ್ಷ ಸಂಕೇತವನ್ನು ಕೂಡಾ ಭಕ್ತರಿಗೆ ನೀಡುತ್ತಾನೆಯಂತೆ.ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ, ತಮ್ಮ ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ ಹೊಂದಿದ ಬಗೆ, ವೃತ್ತಿಪರ ಪ್ರಗತಿ ಮತ್ತು ಆರ್ಥಿಕ ಸಮೃದ್ಧಿಯ ಕಥೆಗಳನ್ನು ಭಕ್ತರು ಹೇಳುತ್ತಾರೆ. ಇಲ್ಲಿಗೆ ಮುಡಿ ಅರ್ಪಿಸುವುದು ಭಕ್ತರು ನೀಡುವ ಸೇವೆಯ ಒಂದು ರೂಪ. ಇದು ಅಹಂಕಾರದ ಶರಣಾಗತಿಯನ್ನು ಪ್ರತಿನಿಧಿಸುವ ಒಂದು ಪದ್ಧತಿಯಾಗಿದೆ.
ಶನಿ ಶಿಂಗ್ಣಾಪುರ
ಶನಿ ಶಿಂಗ್ಣಾಪುರ ಇದು ಶನಿ ದೇವರಿಗೆ ಸಮರ್ಪಿತವಾದ ವಿಶಿಷ್ಟವಾದ ದೇವಾಲಯ. ಶನಿ ಶಿಂಗ್ಣಾಪುರವು ತನ್ನ ದೇವಾಲಯ ಮತ್ತು ಇಡೀ ಪಟ್ಟಣವನ್ನು ಅಪರಾಧ ಚಟುವಟಿಕೆಗಳಿಂದ ಮುಕ್ತವಾಗಿಟ್ಟಿದೆಯಂತೆ. ಇಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ನಡೆಯದಂತೆ ಶನಿ ದೇವರು ಸುರಕ್ಷಿತವಾಗಿರಿಸುತ್ತಾನೆ ಎನ್ನುವುದು ಇಲ್ಲಿನ ಸ್ಥಳೀಯರ ಮತ್ತು ಇಲ್ಲಿಗೆ ಬರುವ ಭಕ್ತರ ನಂಬಿಕೆ. ಸಾಂಪ್ರದಾಯಿಕವಾಗಿ, ಈ ಪ್ರದೇಶದಲ್ಲಿ ಮನೆಗಳಿಗೆ ಬಾಗಿಲುಗಳಿಲ್ಲ.
ಇದು ದೈವಿಕ ನ್ಯಾಯದಲ್ಲಿ ಭಕ್ತರು ಇಟ್ಟಿರುವ ದೃಢ ನಂಬಿಕೆಯನ್ನು ತೋರಿಸುತ್ತದೆ. ಕಷ್ಟಗಳನ್ನು ಕಳೆಯಲು ಅದರಲ್ಲಿಯೂ ಗ್ರಹಗಳ ಪರಿಣಾಮವಾಗಿ ಎದುರಾಗಿರುವ ಕಷ್ಟ, ನಷ್ಟ ನೋವುಗಳಿಗೆ ಪರಿಹಾರ ಕಂಡುಕೊಳ್ಳಲು ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿ ಪೂಜೆ ಮಾಡಿದ ನಂತರ, ತಮ್ಮ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಯಿತು ಎನ್ನುತ್ತಾರೆ ಇಲ್ಲಿನ ಭಕ್ತರು.
ಮೆಹಂದಿಪುರ ಬಾಲಾಜಿ ದೇವಾಲಯ
ಮೆಹಂದಿಪುರ ಬಾಲಾಜಿ ದೇವಾಲಯವು ನಕಾರಾತ್ಮಕ ಶಕ್ತಿಯನ್ನು ನಿವಾರಿಸುವ ತಾಣವಾಗಿದೆ. ನಿಗೂಢ ಸಮಸ್ಯೆಗಳಿಂದ ಪರಿಹಾರವನ್ನು ಬಯಸುವ ಜನರು ಇಲ್ಲಿಗೆ ಬರುತ್ತಾರೆ. ಈ ದೇವಾಲಯದ ಕಟ್ಟುನಿಟ್ಟಾದ ಮತ್ತು ಆಳವಾದ ಧಾರ್ಮಿಕ ವಿಧಿಗಳನ್ನು ಅನುಸರಿಸುತ್ತಾರೆ. ಅನೇಕ ಭಕ್ತರು ಇಲ್ಲಿಗೆ ಭೇಟಿ ನೀಡಿದ ನಂತರ ಮನಸ್ಸಿನ ಶಾಂತಿಯನ್ನು ಮರಳಿ ಪಡೆದಿದ್ದಾರೆಯಂತೆ. ಇಲ್ಲಿನ ದೈವಿಕ ಶಕ್ತಿ ಎಷ್ಟಿದೆಯೆಂದರೆ ಅತ್ಯಂತ ಕಷ್ಟಕರ ಪರಿಸ್ಥಿತಿ ಕೂಡಾ ಸುಲಭವಾಗಿ ಕಳೆದುಹೋಗುವುದಂತೆ.
ವಿಧಿಯನ್ನೇ ಬದಲಿಸುತ್ತದೆ ಎನ್ನುವ ನಂಬಿಕೆ
ಮೊದಲೇ ಹೇಳಿದ ಹಾಗೆ ಈ ದೇವಾಲಯಗಳು ಬರೀ ದೇವರಿಗೆ ಪೂಜೆ ಮಾಡುವ ಸ್ಥಳವಾಗಿ ಉಳಿದಿಲ್ಲ. ಅವು ರೂಪಾಂತರ, ಭರವಸೆ ಮತ್ತು ನಂಬಿಕೆಯ ಪ್ರತಿರೂಪವಾಗಿ ಬಿಟ್ಟಿದೆ. ಇಲ್ಲಿಗೆ ಭೇಟಿ ನೀಡಿದ ನಂತರ ತಮ್ಮ ಜೀವನದಲ್ಲಿ ಆದ ಬದಲಾವಣೆಗಳು, ಎದುರಿಸುತ್ತಿದ್ದ ಕಷ್ಟಗಳಿಂದ ಮುಕ್ತಿ ಸಿಕ್ಕಿರುವುದು, ಸರಿ ಹೋಗುವುದೇ ಇಲ್ಲ ಎನ್ನುವಂಥಹ ಸಮಸ್ಯೆಗಳು ಕೂಡಾ ನಿವಾರಣೆಯಾಗಿರುವುದು ಇಂಥಹ ಅನೇಕ ಕತೆಗಳನ್ನು ತಮ್ಮ ಅನುಭವಗಳನ್ನು ಭಕ್ತರು ಹೇಳುತಲೇ ಇರುತ್ತಾರೆ. ಈ ದೇವಾಲಯಗಳ ಸುತ್ತಲಿನ ಕಥೆಗಳು ನಂಬಿಕೆ ಮತ್ತು ಜೀವನದ ಪ್ರಮುಖ ಕ್ಷಣಗಳ ನಡುವಿನ ನಿಕಟ ಸಂಬಂಧವನ್ನು ನೆನಪಿಸುತ್ತವೆ.


Click it and Unblock the Notifications
