ತಮಿಳುನಾಡು ಬಜೆಟ್‌ ಸರ್ಪ್ರೈಸ್: ಹಳೆಯ ಯೋಜನೆಗೆ ಹೊಸ ಹೆಸರು; ವಿರೋಧ ಪಕ್ಷ ಆಕ್ರೋಶ!

ಚೆನ್ನೈ: ತಮಿಳುನಾಡಿನ ಟಿವಿಕೆ ಸರ್ಕಾರ ಮಂಡಿಸಿದ 2026ರ ಬಜೆಟ್‌ನಲ್ಲಿ ಹಲವು ಪ್ರಮುಖ ಕಲ್ಯಾಣ ಯೋಜನೆಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಕೆಲವು ಜನಪ್ರಿಯ ಯೋಜನೆಗಳಿಗೆ ಹೊಸ ಹೆಸರುಗಳನ್ನು ನೀಡಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಉಚಿತ ಲ್ಯಾಪ್‌ಟಾಪ್ ಯೋಜನೆಗೆ 'ವೆಟ್ರಿ ಮಡಿಕ್ಕಣಿನಿ ತಿಟ್ಟಂ' ಹೆಸರು

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಯೋಜನೆಯನ್ನು 2011ರಲ್ಲಿ ಅಂದಿನ ಎಐಎಡಿಎಂಕೆ ಸರ್ಕಾರ ಆರಂಭಿಸಿತ್ತು. ಮೊದಲ ಹಂತದಲ್ಲಿ 10 ಲಕ್ಷ ವಿದ್ಯಾರ್ಥಿಗಳಿಗೆ ಹಾಗೂ ಒಟ್ಟಾರೆ 20 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ನಂತರದ ಡಿಎಂಕೆ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿತು.

Tamil Nadu Budget 2026 TVK Government Renames Major Schemes Including Laptop Bicycle Schemes

ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಲ್ಯಾಪ್‌ಟಾಪ್‌ಗಳು ಸಾಮಾನ್ಯ ಸಾಧನಗಳಾಗಿರದೆ, 8 ಜಿಬಿ RAM ಸೇರಿದಂತೆ ಆಧುನಿಕ ತಂತ್ರಜ್ಞಾನ ಹೊಂದಿದ ಹೈ-ಎಂಡ್ ಲ್ಯಾಪ್‌ಟಾಪ್‌ಗಳಾಗಿದ್ದವು. ಇಂತಹ ಲ್ಯಾಪ್‌ಟಾಪ್‌ಗಳ ಮಾರುಕಟ್ಟೆ ಬೆಲೆ ಪ್ರಸ್ತುತ ಕನಿಷ್ಠ 50 ಸಾವಿರ ರೂಪಾಯಿಗಳಷ್ಟಿದೆ ಎಂದು ಹೇಳಲಾಗಿದೆ.ಈ ಯೋಜನೆಗೆ ಇದೀಗ "ವೆಟ್ರಿ ಮಡಿಕ್ಕಣಿನಿ ತಿಟ್ಟಂ"ಎಂಬ ಹೊಸ ಹೆಸರನ್ನು ನೀಡಲಾಗಿದೆ.

'ಮುಧಲ್ವರ್ ಪಡೈಪ್ಪಗಂ'ಗೆ 'ಡಿಜಿಟಲ್ ನೂಲಾಗಂ' ಹೆಸರು

ಹಿಂದಿನ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ನಿರ್ವಹಣೆಯ ಕಡಿಮೆ ವೆಚ್ಚದ ಸಹ-ಕೆಲಸದ ಸ್ಥಳಗಳ (Co-working Spaces) ಯೋಜನೆಯನ್ನು"ಮುಧಲ್ವರ್ ಪಡೈಪ್ಪಗಂ"ಹೆಸರಿನಲ್ಲಿ ಆರಂಭಿಸಿತ್ತು.
ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಗಿದ್ದ ಈ ಕೇಂದ್ರಗಳು ಕೇವಲ ಕೆಲಸ ಮಾಡುವ ಸ್ಥಳಗಳಾಗಿರದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದವು. ಈ ಯೋಜನೆಗೆ ಇದೀಗ "ಡಿಜಿಟಲ್ ನೂಲಾಗಂ" ಎಂಬ ಹೆಸರು ನೀಡಲಾಗಿದೆ ಎಂದು ಡಿಎಂಕೆ ನಾಯಕರು ಆರೋಪಿಸಿದ್ದಾರೆ.

ಉಚಿತ ಸೈಕಲ್ ಯೋಜನೆಗೆ 'ನವೀನ ಮಿಥಿವಂಡಿ ತಿಟ್ಟಂ'

ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸುವ ಯೋಜನೆಯ ಹೆಸರನ್ನು "ನವೀನ ಮಿಥಿವಂಡಿ ತಿಟ್ಟಂ" ಎಂದು ಬದಲಾಯಿಸಲಾಗಿದೆ. ಹೆಸರು ಬದಲಾವಣೆಯ ಜೊತೆಗೆ, ವಿದ್ಯಾರ್ಥಿಗಳಿಗೆ ನೀಡುವ ಸೈಕಲ್‌ಗಳಲ್ಲಿ ಹೆಲ್ಮೆಟ್ ಇಡುವ ವ್ಯವಸ್ಥೆ ಹಾಗೂ ನೀರಿನ ಬಾಟಲ್ ಹೋಲ್ಡರ್‌ಗಳನ್ನು ಅಳವಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಲ್ಲದೆ, ಅರಸು ಮಾದಿರಿ ಪಳ್ಳಿಗಳು ಮತ್ತು ತಗೈಸಲ್ ಪಳ್ಳಿಗಳು ಎಂಬ ಹೆಸರಿನ ಶಾಲೆಗಳನ್ನು ಇದೀಗ "ಕಾಮರಾಜರ್ ಸಿರಪ್ಪು ಪಳ್ಳಿಗಳು" ಎಂದು ಮರುನಾಮಕರಣ ಮಾಡಲಾಗಿದೆ.

ನಾನ್ ಮುದಲ್ವನ್ ತಿಟ್ಟಂ ಗೆ ಹೊಸ ಹೆಸರು

ಹಿಂದಿನ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದ "ನಾನ್ ಮುದಲ್ವನ್ ತಿಟ್ಟಂ" ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಬೆಳೆಯಲು ಸಹಾಯ ಮಾಡುವ ಉದ್ದೇಶ ಹೊಂದಿತ್ತು. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗ (UPSC) ಪರೀಕ್ಷೆಗೆ ತರಬೇತಿಯನ್ನೂ ನೀಡಲಾಗುತ್ತಿತ್ತು. ಈಗ ಈ ಯೋಜನೆಗೆ "ವೆಟ್ರಿ ತಿರನ್ ಪಯಿರ್ಚಿ ತಿಟ್ಟಂ" ಎಂಬ ಹೊಸ ಹೆಸರು ನೀಡಲಾಗಿದೆ.

ಹಳೆಯ ಯೋಜನೆಗೆ ಹೊಸ ಹೆಸರು: ವಿರೋಧ ಪಕ್ಷ ಕಿಡಿ

ಹಳೆಯ ಯೋಜನೆಗಳ ಹೆಸರು ಬದಲಾವಣೆ ವಿಚಾರವನ್ನು ಡಿಎಂಕೆ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ವಿಧಾನಸಭೆಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಸಮಯವನ್ನು ಕೇವಲ 10 ಯೋಜನೆಗಳ ಹೆಸರು ಬದಲಾವಣೆಗೆ ಮೀಸಲಿಡಲಾಗಿದೆಯೇ ಎಂದು ವಿರೋಧ ಪಕ್ಷ ಪ್ರಶ್ನಿಸಿದ್ದಾರೆ.

ಬಜೆಟ್‌ನಲ್ಲಿ ರಾಜ್ಯದ ಪ್ರಮುಖ ಸಮಸ್ಯೆಗಳಾದ ಪಳನಿ ದೇವಸ್ಥಾನದ ಭೂ ಹಗರಣ ಆರೋಪ, ವಿದ್ಯುತ್ ಕಡಿತ, ವಿದ್ಯುತ್ ಬಿಲ್ ಸಮಸ್ಯೆಗಳು, ಸರ್ಕಾರಿ ಶಾಲೆಗಳಲ್ಲಿನ ರಾಜಕೀಯ ಪ್ರಭಾವದ ಆರೋಪಗಳು, ನೀಟ್ ವಿಚಾರದಲ್ಲಿ ಸರ್ಕಾರದ ನಿಲುವು ಹಾಗೂ ಕಾವೇರಿ ನೀರಿನ ವಿವಾದಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು ಎಂದು ವಿರೋಧ ಪಕ್ಷ ಆರೋಪಿಸಿದೆ. ಹಳೆಯ ಯೋಜನೆಗಳಿಗೆ ಹೊಸ ಹೆಸರು ನೀಡುವುದಕ್ಕಿಂತ ಜನರ ನೈಜ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಹೆಚ್ಚಿನ ಗಮನ ನೀಡಬೇಕಿತ್ತು ಎಂದು ಡಿಎಂಕೆ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+