ಒಡಿಶಾ: ಕಾಲಿಗೆ ಕ್ಯಾಮೆರಾ ಕಟ್ಟಿದ ಪತ್ತೇದಾರಿ ಪಾರಿವಾಳ ಪತ್ತೆ

ಒಡಿಶಾದ ಕರಾವಳಿಯಲ್ಲಿ ಪತ್ತೆದಾರಿ ಪಾರಿವಾಳವೊಂದು ಕಂಡುಬಂದಿದೆ. ಈ ಪಾರಿವಾಳ ಕ್ಯಾಮೆರಾ ಮತ್ತು ಮೈಕ್ರೊಚಿಪ್‌ ಸೇರಿದಂತೆ ಇತರ ಸಾಧನಗಳನ್ನು ಹೊಂದಿದೆ.

ಭುವನೇಶ್ವರ ಮಾರ್ಚ್ 9: ಒಡಿಶಾದ ಕರಾವಳಿಯಲ್ಲಿ ಪತ್ತೆದಾರಿ ಪಾರಿವಾಳವೊಂದು ಕಂಡುಬಂದಿದೆ. ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್‌ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯಿಂದ ಕ್ಯಾಮೆರಾ ಮತ್ತು ಮೈಕ್ರೊಚಿಪ್‌ ಸೇರಿದಂತೆ ಸಾಧನಗಳನ್ನು ಹೊಂದಿದ್ದ ಪತ್ತೇದಾರಿ ಪಾರಿವಾಳವೊಂದು ಸೆರೆ ಸಿಕ್ಕಿದೆ. ಈ ಪಾರಿವಾಳವನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ಜಗತ್‌ಸಿಂಗ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಅವರು, "ಪಾರಿವಾಳದ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು ಪರೀಕ್ಷಿಸಲು ನಾವು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯವನ್ನು ಪಡೆಯುತ್ತೇವೆ. ಸಾಧನಗಳು ಕ್ಯಾಮೆರಾ ಮತ್ತು ಮೈಕ್ರೋಚಿಪ್ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪ್ರಯೋಗಾಲಯದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ" ಎಂದು ಹೇಳಿದರು.

Suspected ‘Spy Pigeon’ Detection in Odisha

ಸ್ಥಳೀಯ ಪೊಲೀಸರಿಗೆ ತಿಳಿಯದ ಭಾಷೆಯಲ್ಲಿ ಹಕ್ಕಿಯ ರೆಕ್ಕೆಗಳ ಮೇಲೆ ಏನೋ ಗೀಚಿದಂತಿದೆ. "ಏನು ಬರೆಯಲಾಗಿದೆ ಎಂಬುದನ್ನು ಕಂಡುಹಿಡಿಯಲು ತಜ್ಞರ ಸಹಾಯವನ್ನು ಸಹ ಪಡೆಯಲಾಗುವುದು" ಎಂದು ಎಸ್ಪಿ ಹೇಳಿದರು.

'ಸಾರಥಿ' ಎಂಬ ಮೀನುಗಾರಿಕಾ ಟ್ರಾಲರ್‌ನ ಉದ್ಯೋಗಿ ಪಿತಾಂಬರ ಬೆಹೆರಾ ಅವರು ಪಾರಿವಾಳವನ್ನು ದೋಣಿಯ ಮೇಲೆ ಕುಳಿತಿರುವುದನ್ನು ನೋಡಿರುವುದಾಗಿ ಹೇಳಿದರು. ಬೆಹೆರಾ ಅವರು ಕಳೆದ ಹಲವು ದಿನಗಳಿಂದ ಹಕ್ಕಿಗೆ ಆಹಾರವನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

"ಹಕ್ಕಿಯ ಕಾಲುಗಳಿಗೆ ಕೆಲವು ವಸ್ತುಗಳನ್ನು ಹಾಕಿರುವುದನ್ನು ನಾನು ಇದ್ದಕ್ಕಿದ್ದಂತೆ ಗಮನಿಸಿದೆ. ಅದರ ರೆಕ್ಕೆಗಳ ಮೇಲೆ ಏನೋ ಬರೆದಿರುವುದನ್ನು ನಾನು ಕಂಡುಕೊಂಡೆ. ಅದು ಒಡಿಯಾದಲ್ಲಿ ಇಲ್ಲದ ಕಾರಣ ನನಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ'' ಎಂದು ಬೆಹೆರಾ ಮಾಧ್ಯಮದವರಿಗೆ ತಿಳಿಸಿದರು.

Suspected ‘Spy Pigeon’ Detection in Odisha

ಹತ್ತಿರ ಬರುತ್ತಿದ್ದಂತೆ ಅವರು ಹಕ್ಕಿಯನ್ನು ಹಿಡಿದಿದ್ದಾರೆ. ಅದಕ್ಕೆ ಏನೋ ಆಗಿದೆ ಎನ್ನುವ ಅನುಮಾನದಲ್ಲಿ ಅವರು ಅದನ್ನು ಪಶುವೈದ್ಯರ ಬಳಿ ಪರೀಕ್ಷಿಸಲು ಕರೆದುಕೊಂಡು ಹೋಗಿದ್ದಾರೆ. ಬಳಿಕ ಅನುಮಾನ ಹೆಚ್ಚಾದಲ್ಲಿ ಪೊಲೀಸರಿಗೆ ಮಾಃಇತಿ ನೀಡಿದ್ದಾರೆ. ಸದ್ಯ ಪೊಲೀಸರು ಪಾರಿವಾಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಸುಮಾರು 10 ದಿನಗಳ ಹಿಂದೆ ಕೋನಾರ್ಕ್ ಕರಾವಳಿಯಿಂದ 35 ಕಿಮೀ ದೂರದಲ್ಲಿ ಟ್ರಾಲರ್‌ನಲ್ಲಿ ಶಂಕಿತ ಪಾರಿವಾಳ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+