ಉತ್ತರಪ್ರದೇಶದಲ್ಲಿ ಶಂಕಿತ ಐಎಸ್ಐ ಏಜೆಂಟ್ ಬಂಧನ
ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದ ಪೊಲೀಸರು ಮತ್ತು ಸೇನೆಯ ಗುಪ್ತಚರ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಐಎಸ್ಐ ಏಜೆಂಟ್ನನ್ನು ಗಾಜಿಯಾಬಾದ್ನಿಂದ ಸುಮಾರು 120 ಕಿ.ಮೀ. ದೂರವಿರುವ ಫೈಜಾಬಾದ್ನಲ್ಲಿ ಬಂಧಿಸಿದ್ದಾರೆ.
ಲಕ್ನೋ, ಮೇ 04: ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದ ಪೊಲೀಸರು ಮತ್ತು ಸೇನೆಯ ಗುಪ್ತಚರ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಐಎಸ್ಐ ಏಜೆಂಟ್ನನ್ನು ಗಾಜಿಯಾಬಾದ್ನಿಂದ ಸುಮಾರು 120 ಕಿ.ಮೀ. ದೂರವಿರುವ ಫೈಜಾಬಾದ್ನಲ್ಲಿ ಬಂಧಿಸಿದ್ದಾರೆ.
ಪಾಕಿಸ್ತಾನದ ಐಎಸ್ಐ ನಿಂದ ತರಬೇತಿ ಪಡೆದಿದ್ದ ಅಫ್ತಾಬ್ ಅಲಿಯನ್ನು ಭಾರತದಲ್ಲಿ ನೆಲೆಸಿ, ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ. ಆಫ್ತಾಬ್ ಚಟುವಟಿಕೆಗಳನ್ನು ಸಾಕಷ್ಟು ಕಾಲ ಗಮನಿಸಿ, ಅತನ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳನ್ನು ಕಲೆ ಹಾಕಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಎಟಿಎಸ್ನ ಐಜಿ ಅಸೀಮ್ ಅರುಣ್ ತಿಳಿಸಿದ್ದಾರೆ.

ಅಫ್ತಾಬ್ ಅಲಿ ಬ್ಯಾಂಕ್ ಖಾತೆಗೆ ಅಕ್ರಮವಾಗಿ ಹಣ್ ಜಮೆಯಾಗಿರುವುದನ್ನು ಪತ್ತೆ ಹಚ್ಚಲು ತನಿಖೆ ಕೈಗೊಳ್ಳಲಾಗಿದೆ. ಎಟಿಎಸ್ ಸಿಬ್ಬಂದಿಯ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಡಿಜಿಪಿ ಸುಲ್ಖಾನ್ ಸಿಂಗ್ ಅವರು, ಈ ಕಾರ್ಯಾಚರಣಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಇನಾಮು ಘೋಷಿಸಿದ್ದಾರೆ. (ಐಎಎನ್ಎಸ್)











Click it and Unblock the Notifications