ಎಷ್ಟು ಉಗ್ರರ ಕ್ಯಾಂಪ್ ಧ್ವಂಸ, ಎಷ್ಟು ಜನ ಉಗ್ರರು ಬಲಿ?

Posted By:
Subscribe to Oneindia Kannada

ನವದೆಹಲಿ, ಸೆ. 29: ಗಡಿ ನಿಯಂತ್ರಣ ರೇಖೆ ಬಳಿ ಬುಧವಾರ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಎಷ್ಟು ಉಗ್ರರನ್ನು ಭಾರತೀಯ ಸೇನೆ ಬಲಿ ಪಡೆದುಕೊಂಡಿದೆ ಎಂಬ ಕುತೂಹಲ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸರಿ ಸುಮಾರು 7 ಕ್ಯಾಂಪಿನ ಮೇಲೆ ದಾಳಿ ನಡೆಸಲಾಗಿದ್ದು, 38ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಗಡಿ ನಿಯಂತ್ರಣ ರೇಖೆ ಬಳಿಯ ಕೇಲ್ ಮತ್ತು ಭೀಮ್ ಬರ್ ಪ್ರದೇಶದಲ್ಲಿ ಸೀಮಿತ ದಾಳಿ ನಡೆಸಿದೆ. ಈ ವೇಳೆ ಸುಮಾರು 6 ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ಮಾಡಲಾಗಿದ್ದು, ಕ್ಯಾಂಪ್ ಸಂಪೂರ್ಣ ಧ್ವಂಸಗೊಂಡಿದೆ ಎಂದು ಭಾರತೀಯ ಸೇನೆ ಹೇಳಿದೆ. ಬುಧವಾರ ರಾತ್ರಿ 12.30 ಹಾಗೂ 4.30 ರ ಸುಮಾರಿಗೆ ದಾಳಿ ನಡೆದಿದೆ ಎಂದು ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಹೇಳಿದರು.[ಉಗ್ರರ ಮೇಲೆ ಸೇನೆ ದಾಳಿ, ಸರ್ವ ಪಕ್ಷ ಸಭೆ ಕರೆದ ಮೋದಿ]

Surgical strikes on Pak- Several Terror launch pads were destroyed

ಬಾರಾಮುಲ್ಲಾ, ರಜೌರಿ ಹಾಗೂ ಕುಪ್ವಾರಾದ 19, 25 ಹಾಗೂ 28ನೇ ಘಟಕದ ಯೋಧರು ಈ ಕಾರ್ಯಾಚರಣೆ ನಡೆಸಿದ್ದಾರೆ, ಗಡಿ ನಿಯಂತ್ರಣ ರೇಖೆ ಅಲ್ಲದೆ, ಪಾಕ್ ಆಕ್ರಮಿತ ಕಾಶ್ಮೀರದ ಕೆಲ ಭಾಗಗಳ ಮೇಲೂ ಗುಂಡಿನ ದಾಳಿ ನಡೆಸಲಾಯಿತು.[ಗುಂಡಿನ ಚಕಮಕಿಯನ್ನೇ ಸರ್ಜಿಕಲ್ ಸ್ಟ್ರೈಕ್ ಅಂತಿದೆ ಭಾರತ!]

ಉಗ್ರರು ಅಲ್ಲಿ ಮಾಡಿಕೊಂಡಿದ್ದ ಸಂಪೂರ್ಣ ಮೂಲಸೌಕರ್ಯಗಳು, ಬೇಸ್ ಕ್ಯಾಂಪ್ ಎಲ್ಲವೂ ಧ್ವಂಸವಾಗಿದೆ. ಗಡಿ ನಿಯಂತ್ರಣ ರೇಖೆ ಭಾಗದ 500 ಮೀಟರ್ ನಿಂದ 2 ಕಿ.ಮೀ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ. [ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ]


ನಿಗದಿತ ಪ್ರದೇಶದ ಮೇಲೆ ನಾಜೂಕಾಗಿ ಲೆಕ್ಕಾಚಾರ ಹಾಕಿ ದಾಳಿ ಮಾಡಲಾಗಿದೆ. ಎಂದು ಮಿಲಿಟರಿ ಆಪರೇಷನ್ ಗಳ ಪ್ರಧಾನ ನಿರ್ದೇಶಕರ ಕಚೇರಿ ಸ್ಪಷ್ಪಪಡಿಸಿದೆ.['ಸರ್ಜಿಕಲ್ ಆಪರೇಷನ್' ಅಂದರೆ ಏನು?]

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟ ಸಭೆ ನಡೆಸಿ ಸುರಕ್ಷತೆ ಬಗ್ಗೆ ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸಿದರು. ಎಷ್ಟು ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the surgical strike carried out by the special forces, Seven terror launch pads were destroyed. The Indian army upon receiving concrete information about terrorists infiltration and their camps carried out an operation between 12.30 and 4.30 AM
Please Wait while comments are loading...