ಉಗ್ರರ ಮೇಲೆ ಸೇನೆ ದಾಳಿ, ಸರ್ವ ಪಕ್ಷ ಸಭೆ ಕರೆದ ಮೋದಿ

Posted By:
Subscribe to Oneindia Kannada

ನವದೆಹಲಿ, ಸೆ. 29: ಉರಿ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪ್ರತಿದಾಳಿಯನ್ನು ಆರಂಭಿಸಿದೆ. ಬುಧವಾರ ರಾತ್ರಿಯಿಂದಲೇ ಉಗ್ರರ ಕ್ಯಾಂಪ್ ಗಳ ಮೇಲೆ ಸೇನೆ ದಾಳಿ ನಡೆಸಿದ್ದು, ಅನೇಕ ಕ್ಯಾಂಪ್ ಗಳು ಧ್ವಂಸವಾಗಿವೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಇಂದು ಸಂಜೆ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ.

ಬುಧವಾರ ಮಧ್ಯರಾತ್ರಿ 12.30 ರಿಂದ 4.30 ರ ಸುಮಾರಿಗೆ ಭಾರತೀಯ ಸೇನೆಯ ವಿಶೇಷ ತಂಡ ಈ ದಾಳಿ ನಡೆಸಿದೆ. ಗಡಿ ನಿಯಂತ್ರಣ ರೇಖೆ(LoC) ಬಳಿ ಇರುವ ಉಗ್ರರ ಕ್ಯಾಂಪ್ ಗಳನ್ನು ಗುರಿಯನ್ನಾಗಿಸಿ ದಾಳಿ ನಡೆಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ. [ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ]

Surgical Strikes Across LoC, Government calls an all party meeting

ಸುಮಾರು 500 ಮೀಟರ್ ನಿಂದ 2 ಕಿ.ಮೀ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ. ಈ ಕುರಿತು ಪಾಕಿಸ್ತಾನಕ್ಕೂ ಮಾಹಿತಿ ನೀಡಲಾಗಿದೆ. ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪಾಕಿಸ್ತಾನ ಕೂಡಾ ನೆರವಾಗಬೇಕಿದೆ ಎಂದು ರಣಬೀರ್ ಸಿಂಗ್ ಹೇಳಿದರು.

ಈ ಬಗ್ಗೆ ಮುಂದಿನ ಕಾರ್ಯಾಚರಣೆ ಹೇಗೆ ನಡೆಯಬೇಕು ಎಂಬುದನ್ನು ಚರ್ಚಿಸಲು ಗುರುವಾರ ಸಂಜೆ 4 ಗಂಟೆಗೆ ಸರ್ವ ಪಕ್ಷಗಳ ಸಭೆ ನಡೆಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Surgical Strikes Across LoC, Government calls an all party meeting at 4pm today(September 29) after Indian Army conducts surgical strikes in Pak territory.
Please Wait while comments are loading...