'ಲೋಕಸಭಾ ಚುನಾವಣೆ ಮುಗಿದ ಮೇಲೆ ಬಿಜೆಪಿಯಲ್ಲಿ ಎಎಪಿ ವಿಲೀನ'
ಸದ್ಯ ಭಾರತದಲ್ಲಿ ಲೋಕಸಭಾ ಚುನಾವಣೆಗಳ ಬಿಸಿ ಜೊರಾಗಿದೆ. ಈಗಾಗಲೇ ದೇಶದಲ್ಲಿ ನಾಲ್ಕು ಹಂತದ ಚುನಾವಣೆಗಳು ಮುಗಿದಿದ್ದು, ಇನ್ನು ಮೂರು ಹಂತದ ಚುನಾವಣೆ ಬಾಕಿ ಇದೆ. ಚುನಾವಣಾ ಸಮಯದಲ್ಲಿ ರಾಜಕೀಯ ವ್ಯಕ್ತಿಗಳ ಮಾತಿನ ಚಕಮಕಿ ಸಹ ಭರ್ಜರಿಯಾಗಿದೆ. ಇದೇ ವೇಳೆ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಹೊಸ ಬಾಂಬ್ ಹಾಕಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಹಾಗೂ ಸ್ಥಳೀಯ ಪಕ್ಷಗಳು ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ ಮಾಡಿಕೊಂಡಿವೆ. ದೆಹಲಿಯಲ್ಲಿ ಆಪ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಪಂಜಾಬ್‌ನಲ್ಲಿ ಪ್ರತೇಕವಾಗಿ ಸ್ಪರ್ಧಿಸಲಿವೆ. ಇನ್ನು ಬಹುಕಾಲ ಬಿಜೆಪಿ ಜೊತೆಗಿದ್ದ ಶಿರೋಮಣಿ ಅಕಾಲಿದಳ ಸಹ ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಧುಮ್ಮುಕ್ಕಿದೆ.

ಚುನಾವಣಾ ಪ್ರಚಾರದ ವೇಳೆ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ನೀಡಿರುವ ಹೇಳಿಕೆ ಸದ್ಯ ರಾಜಕೀಯ ರಂಗದಲ್ಲಿ ಸಂಚಲವನ್ನು ಮೂಡಿಸಿದೆ.
ಸುಖಬೀರ್ ಸಿಂಗ್ ಹೇಳಿದ್ದೇನು?
ಚುನಾವಣಾ ಪ್ರಚಾರದ ವೇಳೆ ಸುಖಬೀರ್ ಸಿಂಗ್, ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶೀಘ್ರದಲ್ಲೇ ಬಿಜೆಪಿಗೆ ಸೇರಬಹುದು ಎಂದು ಅವರು ಹೇಳಿದ್ದಾರೆ. ಈಗ ಪ್ರಚಾರ ತಂಡ ಒಂದು ದಿನವೂ ಉಳಿದಿಲ್ಲ ಎಂದರು. ಚುನಾವಣೆಯ ನಂತರ ಯಾವಾಗ ಬೇಕಾದರೂ ಬಿಜೆಪಿ ಸೇರಬಹುದು ಎಂದು ಸುಖ್ಬೀರ್ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷ ಮತ್ತು ಶಿರೋಮಣಿ ಅಕಾಲಿದಳ ಪರವಾಗಿ ಮತ ಚಲಾಯಿಸುವುದು ಎಂದರೆ ಅವರು ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡಿದಂತೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಈ ಎರಡೂ ಪಕ್ಷಗಳು ಬಿಜಿಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಈ ಎರಡೂ ಪಕ್ಷಗಳು ಬಿಜೆಪಿ ವಿರೋಧಿಗಳ ಮತವನ್ನು ಸೆಳೆಯಬಹುದು ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾಡಿಂಗ್ ಹೇಳಿದ್ದಾರೆ. ಬಿಜೆಪಿಯನ್ನು ಸೋಲಿಸಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕುವುದೊಂದೇ ನಿಮ್ಮ ಆಯ್ಕೆಯಾಗಿದೆ ಎಂದರು.
ಪಂಜಾಬ್‌ನಲ್ಲಿ ಚುನಾವಣೆ ಯಾವಾಗ?
ಭಾರತದಲ್ಲಿ ಚುನಾವಣೆಗಳ ಬಿಸಿ ಆರಂಭವಾಗಿದೆ. ಕರ್ನಾಟಕದಲ್ಲೂ ಎರಡೂ ಹಂತದ ಚುನಾವಣೆಗಳು ಮುಗಿದಿವೆ. ಒಟ್ಟಾರೆ ದೇಶದಲ್ಲಿ ಈಗಾಗಲೇ ನಾಲ್ಕು ಹಂತದ ಚುನಾವಣೆಗಳು ಮುಗಿದಿವೆ. ಇನ್ನು ಮೂರು ಹಂತದ ಚುನಾವಣೆ ಬಾಕಿ ಇದೆ. ಪಂಜಾಬ್‌ನಲ್ಲಿ ಜೂನ್ 1 ರಂದು, 13 ಲೋಕಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮಾತ್ರ ಇಲ್ಲಿ ಮತ ಎಣಿಕೆ ನಡೆಯಲಿದೆ.











Click it and Unblock the Notifications