ಬುರ್ಹಾನ್ ವನಿ ಸಾವಿನ ವರ್ಷಾಚರಣೆ ವೇಳೆ ದಾಳಿಗೆ ಉಗ್ರರ ಸಿದ್ಧತೆ
ಶ್ರೀನಗರ, ಜೂನ್ 26: ಜುಲೈ 8, 2016ರಂದು ಸಾವನ್ನಪ್ಪಿದ್ದ ಹಿಜ್ಬುಲ್ಲಾ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಸಾವಿಗೆ ವರ್ಷ ತುಂಬುತ್ತಿರುವಂತೆ ಶ್ರೀನಗರದಲ್ಲಿ ದಾಳಿಗೆ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ಹಲವು ಭಾಗಗಳಿಂದ ಉಗ್ರರು ಶ್ರೀನಗರಕ್ಕೆ ಬಂದಿದ್ದಾರೆ. ಸದ್ಯದಲ್ಲೇ ದೊಡ್ಡ ಮಟ್ಟದ ದಾಳಿ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಬುರ್ಹಾನ್ ವನಿ ಸಾವಿನ ದಿನ ಹತ್ತಿರ ಬರುತ್ತಿದ್ದಂತೆ ಭಾರೀ ದಾಳಿ ನಡೆಸಲು ಉಗ್ರರು ಯೋಜಿಸಿದ್ದಾರೆ. ಮುಖ್ಯವಾಗಿ ಶ್ರೀನಗರದ ಭೂಸೇನಾ ನೆಲೆ ಹಾಗೂ ಸರಕಾರಿ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
ಹಿಜ್ಬುಲ್ಲಾ ಉಜಾಹಿದ್ದೀನ್ ಗೆ ಸೇರಿದ ಐವರು ಉಗ್ರರು ಶ್ರೀನಗರಕ್ಕೆ ಬಂದಿದ್ದಾರೆ. ಇವರು ದಾಳಿ ಮಾಡುವ ಸಾಧ್ಯತೆಗಳಿವೆ. ಯಾವುದಕ್ಕೂ ಹುಷಾರಾಗಿರಿ ಎಂದು ಗುಪ್ತಚರ ಇಲಾಖೆ ಹೇಳಿದೆ.












Click it and Unblock the Notifications