'ಭ್ರಷ್ಟಾಚಾರದ ಆರೋಪ ಮಾಡಿದವರಿಗೆ ಬೂಟಿನೇಟು ನೀಡುವೆ'

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 13: ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಅಲ್ಲಗೆಳೆದಿದ್ದು, ಈ ರೀತಿ ಆರೋಪ ಮಾಡುವವರು ಕೈಗೆ ಸಿಕ್ಕರೆ ಬೂಟಿನೆಟು ಸಿಗಲಿದೆ ಎಂದು ಕಿಡಿಕಾರಿದ್ದಾರೆ.

ಅರುಣಾಚಲಪ್ರದೇಶದ ವಿದ್ಯುತ್ ಯೋಜನೆಯೊಂದನ್ನು ತಮ್ಮ ಸಂಬಂಧಿಕರಿಗೆ ಕೊಡಿಸಲು ಕೇಂದ್ರ ಸಚಿವ ಕಿರಣ್ ಅವರು ತಮ್ಮ ಅಧಿಕಾರದ ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು.

Stories against me planted, says Kiren Rijiju

ಈ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ ಕಿರಣ್, ಆರೋಪಗಳೆಲ್ಲವೂ ಕಟ್ಟುಕತೆ, ಸುಳ್ಳು ಸುದ್ದಿ ಹಬ್ಬಿಸುವವರಿಗೆ ಬೂಟಿನೇಟು ನೀಡಬೇಕು ಎಂದಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ 600 ಮೆ.ವ್ಯಾ ಕಾಮೆಂಗ್ ಜಲ ವಿದ್ಯುತ್ ಯೋಜನೆಗಾಗಿ ಎರಡು ಅಣೆಕಟ್ಟು ನಿರ್ಮಾಣ ಮಾಡಬೇಕಾಗಿದ್ದು, ಇದಕ್ಕಾಗಿ ಗುತ್ತಿಗೆದಾರರಿಗೆ ಬರಬೇಕಾದ ಭತ್ಯೆಯನ್ನು ನೀಡುವಂತೆ ಕೇಂದ್ರ ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಅವರಿಗೆ ಕಿರಣ್ ಅವರು ಪತ್ರ ಬರೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Minister Kiren Rijiju on Tuesday slammed a a daily newspaper for "planting" story about his alleged involvement in a power project and said if they visit Arunachal Pradesh they will be "thrashed with shoes".
Please Wait while comments are loading...