ಒಂದೇ ಸೂರಿನಡಿ 15 ದಿನಕ್ಕೊಮ್ಮೆ ಮಗ್ಗಲು ಬದಲಿಸು!

ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಕಾಲಾಂತರದಲ್ಲಿ ಹೆಂಡತಿಯಿಂದ ವಿಮುಖನಾಗಿ ಪ್ರೇಯಸಿ ಸಂಗಕ್ಕೆ ಹಾತೊರೆದಿದ್ದ. ಈ ಪ್ರಸಂಗವು ಲೋಕ ಅದಾಲತ್ ಕಟೆಕಟೆಗೆ ಬಂದು ನಿಂತಾಗ...
ವಿನೂತನ (ವಿಚಿತ್ರ? ) ಒಪ್ಪಂದ ನ್ಯಾಯ : ಬಾಳಸಂಗಾತಿ ಯಾನಿ ಧರ್ಮಪತ್ನಿಯ ಜತೆ 15 ದಿನ ಸಾಂಗತ್ಯ ಅದಾದನಂತರ Live-in ಸಂಗಾತಿ ಜತೆ 15 ದಿನ ಇದ್ದುಬಿಡು ಎಂದು ವ್ಯಕ್ತಿಯೊಬ್ಬರಿಗೆ ಲೋಕ್ ಅದಾಲತ್ ನ್ಯಾಯಾಧೀಶೆ Ganga Charan Dube ಉಚಿತ ಸಲಹೆ/ ಸೂಚನೆ ನೀಡುವ ಮೂಲಕ ಇಬ್ಬರೂ ಮಹಿಳೆಯರಿಗೂ ನ್ಯಾಯ ದಕ್ಕಿಸಿಕೊಟ್ಟಿದ್ದಾರೆ.
'ನನ್ನ ಪತಿ ತನ್ನ ಸಂಗಾತಿ ಜತೆಯೇ ಹೆಚ್ಚಿನ ಸಮಯ ಕಳೆಯುತ್ತಾರೆ. ಅಲ್ಲದೇ ಆಕೆ ಜತೆಯೇ 2 ವರ್ಷದಿಂದ ನೆಲೆಸಿದ್ದಾರೆ. ನನಗೆ ನ್ಯಾಯ ದಕ್ಕಿಸಿಕೊಡಿ' ಎಂದು ವಿದ್ಯುತ್ ಇಲಾಖೆಯ ನಿವೃತ್ತ ನೌಕರ ಓಂಕಾರೇಶ್ವರ್ ಎಂಬುವವರ ಪತ್ನಿ ದೂರು ನೀಡಿದ್ದರು.
ಒಂದೇ ಸೂರಿನಡಿ 15 ಆ ಮಗ್ಗಲು 15 ದಿನ ಈ ಮಗ್ಗಲು :
'ಓಂಕಾರೇಶ್ವರ್ ಅವರ ಮನೆಯಲ್ಲಿ ಮೂರು ಕೊಠಡಿಗಳಿದ್ದು, ಮಧ್ಯದ ಕೊಠಡಿಯಲ್ಲಿ ಓಂಕಾರೇಶ್ವರ್ ವಾಸಿಸಬೇಕು. ಉಳಿದ ಎರಡು ಕೊಠಡಿಗಳಲ್ಲಿ ಪತ್ನಿ ಮತ್ತು ಸಂಗಾತಿ ಇರಬೇಕು. ಈತನ ಪ್ರೀತಿ ಇಬ್ಬರಿಗೂ ಸಲ್ಲಬೇಕು. ಹೀಗಾಗಿ ಪತ್ನಿ ಜತೆ 15 ದಿನ ಮತ್ತು ಸಂಗಾತಿ ಜತೆ 15 ದಿನ ವಾಸ ಮಾಡಬೇಕು' ಎಂದು ನ್ಯಾಯಾಧೀಶೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ನೀವೇನಂತೀರಿ!?












Click it and Unblock the Notifications