Special marriage: ಆರೋಪಿ ವರನ ಮದುವೆಗೆ ಸಂಬಂಧಿಕರಂತೆ ಎಂಟ್ರಿ ಕೊಟ್ಟ ಪೊಲೀಸರು
ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ವಿಶೇಷ ವಿವಾಹವೊಂದು ನಡೆದಿದೆ. ಈ ವಿಶಿಷ್ಟ ವಿವಾಹದಲ್ಲಿ ಆರೋಪಿ ವರನಾಗಿದ್ದು, ಪೊಲೀಸರು ವರನ ಕುಟುಂಬಸ್ಥರಂತೆ ಆಗಮಿಸಿದ್ದು ಕಂಡು ಬಂದಿದೆ. ಪೊಲೀಸರ ವಶದಲ್ಲಿದ್ದ ವರನನ್ನು ಸಂಗೀತ ಮತ್ತು ಡಿಜೆ ಟ್ಯೂನ್‌ನೊಂದಿಗೆ ಸ್ವಾಗತಿಸಲಾಗಿದೆ.
ಸೆಕ್ಷನ್ 34 ಅಡಿ ಕೊಲ್ಗಾವಾ ಪೊಲೀಸರು ಮೇ 14 ರಂದು ವ್ಯಕ್ತಿಯೊಂಬ್ಬರನ್ನು ಬಂಧಿಸಿದ್ದರು. ಆತನ ಹೆಸರು ಸತ್ನಾ ಜಿಲ್ಲೆಯ ಸತ್ನಾ ವಿಕ್ರಮ್ ಚೌಧರಿ. ಈತನೊಂದಿಗೆ ಈತನ ತಂದೆಯನ್ನು ಬಂಧಿಸಲಾಗಿತು. ಬಳಿಕ ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿಂದ ತಂದೆ ಮತ್ತು ಮಗನನ್ನು ಜೈಲಿಗೆ ಕಳುಹಿಸಲಾಯಿತು. ವಿಕ್ರಮ್ ಚೌಧರಿ ಮದ್ಯದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದನು. ಅದೂ ಅಲ್ಲದೆ ವಿಕ್ರಮ್ ಚೌಧರಿಗೆ ಈಗಾಗಲೇ ಮೇ 16 ರಂದು ಮದುವೆ ನಿಶ್ಚಯವಾಗಿತ್ತು.

ಕರುವಾ ನಿವಾಸಿ ರಾಮನರೇಶ್ ಎಂಬುವವರ ಪುತ್ರಿಯೊಂದಿಗೆ ವಿಕ್ರಮ್ ಚೌಧರಿ ಅವರ ವಿವಾಹ ನಿಶ್ಚಯವಾಗಿತ್ತು. ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದಾಗ ನ್ಯಾಯಾಲಯ ಮದುವೆಗೆ ಆರೋಪಿ ವರನನ್ನು ಕರೆದೊಯ್ಯಬಹುದು ಎಂದು ಸೂಚನೆ ನೀಡಿದೆ. ಇದರಿಂದಾಗಿ ಆರೋಪಿ ವರನ್ನೊಂದಿಗೆ ಪೊಲೀಸರು ಮದುವೆ ಸ್ಥಳಕ್ಕೆ ಬರಬೇಕಾಯಿತು.
ವಿಕ್ರಮ್ ಚೌಧರಿ ಮದುವೆಗಾಗಿ ಮೇ 16 ರಂದು ಮೈಹಾರ್‌ನ ಕರುವಾ ಗ್ರಾಮಕ್ಕೆ ಬರಬೇಕಿತ್ತು. ಎಸ್‌ಐ, ಎಎಸ್‌ಐ ಮುನ್ಷಿ ಮತ್ತು 4 ಪೊಲೀಸರು ಸೇರಿದಂತೆ 8 ಜನರ ತಂಡದೊಂದಿಗೆ ವಿಕ್ರಮ್ ಮೆರವಣಿಗೆಯೊಂದಿಗೆ ಮೈಹರ್‌ಗೆ ಬಂದಿಳಿದಿದ್ದಾರೆ.
ಡಿಜೆ ಸಂಗೀತದೊಂದಿಗೆ ವಿಕ್ರಮ್ ಮದುವೆ ಮೆರವಣಿಗೆ ಮಾಡುತ್ತಾ ಕುಟುಂಬಸ್ಥರು ಅದ್ಧೂರಿಯಾಗಿ ನೃತ್ಯ ಮಾಡಿ ವಧುವನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿ ವರ ಕೂಡ ಸಂತೋಷದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದಾನೆ.

ವಿಕ್ರಮ್ ಚೌಧರಿ ಅವರ ಮದುವೆಯು ಒಂದು ವಿಶೇಷ ರೀತಿಯಲ್ಲಿ ನಡೆದ ಮದುವೆಯಾಗಿದೆ. ಅವರ ಮದುವೆ ಮೆರವಣಿಗೆಯಲ್ಲಿ 8 ಪೊಲೀಸ್ ಅಧಿಕಾರಿಗಳು ನಿಯೋಜನೆ ಮಾಡಲಾಗಿತ್ತು. ಇದರಿಂದಾಗಿ ಗೌರವಾನ್ವಿತ ನ್ಯಾಯಾಲಯ ಮತ್ತು ಪೊಲೀಸರಿಗೆ ವಿಕ್ರಮ್ ಕೃತಜ್ಞತೆ ಸಲ್ಲಿಸಿದರು.
ಕೂಡಿ ಬಾಳಲು ಸಮಾಜದ 'ಲೈಸೆನ್ಸ್' ಪಡೆಯುವ, 'ಅಗ್ನಿಸಾಕ್ಷಿ'ಯಾಗಿ ಸಪ್ತಪದಿ ತುಳಿದು ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ (ಧರ್ಮ, ಅರ್ಥ, ಕಾಮದಲ್ಲಿ ನಿನ್ನನ್ನು ಬಿಟ್ಟು ನಡೆಯಲಾರೆ) ಎಂಬ ಶಪಥ ಮಾಡಲು ಸಂಪ್ರದಾಯವಾಗಿ ರೂಢಿಗೆ ಬಂದಿದ್ದ 'ಮದುವೆ' ವಜ್ರ ವೈಢೂರ‌್ಯ, ಸಂಪತ್ತಿನ ಪ್ರದರ್ಶನಕ್ಕೆ ದಾರಿ ಮಾಡಿಕೊಟ್ಟಿದ್ದು, ಸರಳತೆ ಎಂಬುದು ಕಣ್ಮರೆಯಾಗಿ ಹೋಗಿದೆ.
ವರ-ವಧು ಹೇಗೇ ಇರಲಿ ಲಕ್ಷ ಲಕ್ಷ ಬಾಡಿಗೆಯ ಕಲ್ಯಾಣ ಮಂಟಪ, ವೈವಿಧ್ಯಮಯ ಭಕ್ಷ್ಯಭೋಜ್ಯ, ಮದುವೆ ಅಂಗಳಕ್ಕೆ ಕಣ್ಣುಕೋರೈಸುವ ಅಲಂಕಾರ, ಹೋದಬಂದವರಿಗೆ ಬಹುಬೆಲೆಯ ಉಡುಗೊರೆ, ಏಳೆಂಟು ಆಹ್ವಾನ ಪತ್ರಿಕೆಗಳು ಹೀಗೆ ಶ್ರೀಮಂತಿಕೆಯ ದರ್ಪ ಹಾಗೂ ಪ್ರತಿಷ್ಠೆಯನ್ನು ಪಣಕ್ಕಿಡುವ ವೇದಿಕೆಯಾಗಿ ಮದುವೆ ಬದಲಾಗಿದೆ. ಇದಕ್ಕೆ ಈ ಮದುವೆ ಮತ್ತೊಂದು ರೀತಿ ಸಾಕ್ಷಿಯಾಗಿದೆ.












Click it and Unblock the Notifications