ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ದಕ್ಷಿಣ ಕೊರಿಯಾದ ರಾಯಭಾರ ಕಚೇರಿ ಸಿಬ್ಬಂದಿ; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಿಂದ ರೀಟ್ವಿಟ್ ಮಾಡಿದ್ದು, ಉತ್ಸಾಹಭರಿತ ಮತ್ತು ತಂಡದ ಉತ್ತಮ ಪ್ರಯತ್ನ ಎಂದು ಕರೆದಿದ್ದಾರೆ.
ನವದೆಹಲಿ, ಫೆಬ್ರವರಿ. 26: ಖ್ಯಾತ ಚಿತ್ರ ಆರ್‌ಆರ್‌ಆರ್‌ನ 'ನಾಟು ನಾಟು' ಹಾಡು ತನ್ನ ಮ್ಯಾಜಿಕ್ ಇನ್ನು ಕಡಿಮೆಯಾದಂತಿಲ್ಲ. ಪ್ರಶಸ್ತಿಗಳನ್ನು ಎರಡು ಕೈಗಳಲ್ಲಿ ಬಾಚಿಕೊಂಡಿರುವ ಈ ಹಾಡು ಮತ್ತೆ ತನ್ನ ಮೋಡಿ ಮಾಡಿದೆ. ನವದೆಹಲಿಯಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರ ಕಚೇರಿಯು ತನ್ನ ಸಿಬ್ಬಂದಿ ಈ ವೈರಲ್ ಹಾಡಿಗೆ ನೃತ್ಯ ಮಾಡುವ ವಿಡಿಯೋ ಹಂಚಿಕೊಂಡಿದೆ.
Lively and adorable team effort. 👍 https://t.co/K2YqN2obJ2
— Narendra Modi (@narendramodi) February 26, 2023
ದಕ್ಷಿಣ ಕೊರಿಯಾದ ರಾಯಭಾರ ಕಚೇರಿಯು ಇದನ್ನು 'ನಾಟು ನಾಟು ರ್‌ಆರ್‌ಆರ್ ಡ್ಯಾನ್ಸ್ ಕವರ್, ಭಾರತದ ಕೊರಿಯನ್ ರಾಯಭಾರ ಕಚೇರಿ' ಎಂದು ಶೀರ್ಷಿಕೆ ನೀಡಿದ್ದು, ಸಿಬ್ಬಂದಿಯ ನೃತ್ಯವನ್ನು ಹಂಚಿಕೊಂಡಿದೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಿಂದ ರೀಟ್ವಿಟ್ ಮಾಡಿದ್ದು, ಉತ್ಸಾಹಭರಿತ ಮತ್ತು ತಂಡದ ಉತ್ತಮ ಪ್ರಯತ್ನ ಎಂದು ಕರೆದಿದ್ದಾರೆ.

ದಕ್ಷಿಣ ಕೊರಿಯಾದ ರಾಯಭಾರ ಕಚೇರಿ ಹಂಚಿಕೊಂಡಿರುವ ವಿಡಿಯೋಗೆ "ನಿನಗೆ ನಾಟು ಗೊತ್ತಾ..? ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಜೊತೆಗೆ ರಾಯಭಾರ ಕಚೇರಿಯ ಸಿಬ್ಬಂದಿಯ ನಾಟು ನಾಟುವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ" ಎಂದು ಶನಿವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಐವತ್ಮೂರು ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಕೊರಿಯನ್ ಮತ್ತು ಭಾರತೀಯ ಸಿಬ್ಬಂದಿ ಹಾಡಿಗೆ ನೃತ್ಯ ಮಾಡಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ ಅನೇಕರು ಈ ನೃತ್ಯವನ್ನು ಶ್ಲಾಘಿಸಿದ್ದಾರೆ. ಇಷ್ಟವಾಯಿತು! ಕೊರಿಯನ್ ರಾಯಭಾರ ಕಚೇರಿಗೆ ಕೃತಜ್ಞರಾಗಿರಬೇಕು ಎಂದಿರುವ ಹಲವರು ಸಿನಿಮಾದಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದ ಜೂನಿಯರ್ ಎನ್‌ಟಿಆರ್ ಮತ್ತು ರಾಮಚರಣ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ನಾಟು ನಾಟು ಹಾಡಿಗೆ ಎಂಎಂ ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರು ಧ್ವನಿ ನೀಡಿದ್ದಾರೆ. ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಜನವರಿಯಲ್ಲಿ, ಈ ಹಾಡಿಗೆ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ನೀಡಲಾಗಿದೆ. ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಗೀತೆ ಇದಾಗಿದೆ. ಜೊತೆಗೆ ಮುಂಬರುವ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ (ಆಸ್ಕರ್‌ಗಳು) ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.












Click it and Unblock the Notifications