ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೀಟ್' ಪರೀಕ್ಷೆಯಲ್ಲಿ ಗೆದ್ದ ತರಕಾರಿ, ದಿನಗೂಲಿ ಕಾರ್ಮಿಕರ ಮಕ್ಕಳು!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ವಿದ್ಯೆಗೆ ಬಡತನದ ಅಡ್ಡಿಯಿಲ್ಲ ಎಂಬುದನ್ನು ಒಡಿಶಾದ ವಿದ್ಯಾರ್ಥಿಗಳು ಪ್ರೂವ್ ಮಾಡಿದ್ದಾರೆ. ಒಬ್ಬರ ತಂದೆ ದಿನಗೂಲಿ ಕಾರ್ಮಿಕ, ಇನ್ನೊಬ್ಬ ವಿದ್ಯಾರ್ಥಿನಿ ತಂದೆ ತರಕಾರಿ ಮಾರುವವರು. ಇಂಥ ಕುಟುಂಬದಲ್ಲಿ ಬೆಳೆದ ವಿದ್ಯಾರ್ಥಿಗಳು ಇಂದು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಅನ್ನು ಪಾಸ್ ಮಾಡಿದ್ದಾರೆ.

ಗಂಜಾಂ ಜಿಲ್ಲೆಯ ಪೊಲಸರ ಬ್ಲಾಕ್‌ನ ನಿವಾಸಿ ಸಂತಾನು ದಲೈ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಅಖಿಲ ಭಾರತ 19,678 ರಾಂಕ್ ಗಳಿಸಿದ್ದಾರೆ.

NEET UG 2022 Result: ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನNEET UG 2022 Result: ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನ

ಅದೇ ರೀತಿ ಗಜಪತಿ ಜಿಲ್ಲೆಯ ಅದಾವ್ ಗ್ರಾಮದ ಮತ್ತೋರ್ವ ವಿದ್ಯಾರ್ಥಿನಿ ಇಸ್ರಿತಾ ಪಾಂಡಾ 720 ಅಂಕಗಳಲ್ಲಿ 622 ಅಂಕಗಳನ್ನು ಪಡೆದುಕೊಂಡಿದ್ದಾರೆ. ಆ ಮೂಲಕ 11,895ರ ರಾಂಕ್ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿನಿಯ ತಂದೆ ಅದಾವ್ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ವ್ಯಾಪಾರಿ ಆಗಿದ್ದರು ಎಂದು ತಿಳಿದು ಬಂದಿದೆ.

ನೀಟ್ ಪರೀಕ್ಷೆ ಎರಡನೇ ಬಾರಿ ಪಾಸ್

ನೀಟ್ ಪರೀಕ್ಷೆ ಎರಡನೇ ಬಾರಿ ಪಾಸ್

ಕಲಿಕೆಗೆ ನನ್ನ ಬಡತನವಾಗಲಿ, ಆರ್ಥಿಕ ಸಮಸ್ಯೆಗಳಾಗಲಿ ಯಾವುದೂ ಅಡ್ಡಿಯಾಗಲಿಲ್ಲ. ಬಡತನವು ನನ್ನ ಜೀವನದಲ್ಲಿನ ಯಶಸ್ಸನ್ನು ತಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಕಳೆದ ವರ್ಷ ಮೊದಲ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಆಗುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಎರಡನೇ ಅವಕಾಶದಲ್ಲಿ ಇಬ್ಬರೂ ವಿದ್ಯಾರ್ಥಿಗಳು ತಾವು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ಹೇಳಿದರು.

ಇಸ್ರಿತಾ ಪಾಂಡಾ ಯಶಸ್ಸಿನ ಕಥೆ

ಇಸ್ರಿತಾ ಪಾಂಡಾ ಯಶಸ್ಸಿನ ಕಥೆ

ತಮ್ಮ ಶೈಕ್ಷಣಿಕ ಹಾದಿ ಮತ್ತು ಗೆಲುವಿನ ಬಗ್ಗೆ ಇಸ್ರಿತಾ ಪಾಂಡಾ ಸಂತಸ ವ್ಯಕ್ತಪಡಿಸಿದರು. ಇದಕ್ಕಾಗಿ ತಾನು ಶ್ರಮಿಸಿದ್ದೇನೆ ಮತ್ತು ತನ್ನ ಅಂಕಗಳಿಂದ ಸಂತೋಷವಾಗಿದೆ. ಕಟಕ್ ಅಥವಾ ಬರ್ಹಾಂಪುರದ ಪ್ರಧಾನ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಸೀಟು ಪಡೆಯುವ ಭರವಸೆ ಇದೆ ಎಂದು ಇಶ್ರಿತಾ ಪಾಂಡಾ ಹೇಳಿದ್ದಾರೆ.

ದಿನಗೂಲಿ ಕಾರ್ಮಿಕನ ಮಗ ಸಂತನು ದಲೈ ಗೆಲುವಿನ ಹಾದಿ

ದಿನಗೂಲಿ ಕಾರ್ಮಿಕನ ಮಗ ಸಂತನು ದಲೈ ಗೆಲುವಿನ ಹಾದಿ

ಗಂಜಾಂ ಜಿಲ್ಲೆಯ ಪೊಲಸರ ಬ್ಲಾಕ್‌ನ ನಿವಾಸಿ ಸಂತಾನು ದಲೈ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಅಖಿಲ ಭಾರತ 19,678 ರಾಂಕ್ ಗಳಿಸಿದ್ದಾರೆ. ದಲೈ ಕೂಡ ದಿನಗೂಲಿ ಕಾರ್ಮಿಕನ ಪುತ್ರನಾಗಿದ್ದು, ರಾಜ್ಯದ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಯಸುವುದಾಗಿ ಹೇಳಿದರು. ಶಿಕ್ಷಣ ತಜ್ಞ ಸುಧೀರ್ ರೌತ್ ನಡೆಸುತ್ತಿರುವ ಆರ್ಯಭಟ್ಟ ಎಂಬ ಖಾಸಗಿ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ಪಡೆಯುತ್ತಿದ್ದೇನೆ ಎಂದು ದಲೈ ಉಲ್ಲೇಖಿಸಿದರು.

ಮಗಳ ಶ್ರಮಕ್ಕೆ ಹೆಗಲಾದ ತಂದೆ

ಮಗಳ ಶ್ರಮಕ್ಕೆ ಹೆಗಲಾದ ತಂದೆ

ಕಳೆದ ಎರಡು ವರ್ಷಗಳಲ್ಲಿ ಕೊರೊನಾವರೈಸ್ ಸಾಂಕ್ರಾಮಿಕ ಪಿಡುಗಿನಿಂದ ಸರಿಯಾಗಿ ವ್ಯಾಪಾರವಿರಲಿಲ್ಲ. ಉತ್ತಮ ಆದಾಯವನ್ನೂ ಗಳಿಸುವುದಕ್ಕೆ ಸಾಧ್ಯವಾಗದ ತಂದೆಯು ಮಗಳ ಕನಸಿಗೆ ಮಾತ್ರ ಅಡ್ಡಿ ಆಗಿರಲಿಲ್ಲ. ತಮ್ಮ ವ್ಯಾಪಾರದಲ್ಲಿನ ನಷ್ಟದ ಮಧ್ಯೆಯೂ ತಂದೆ ತನ್ನ ಅಧ್ಯಯನವನ್ನು ನಿರ್ಲಕ್ಷಿಸಿರಲಿಲ್ಲ ಎಂದು ಇಸ್ರಿತಾ ಪಾಂಡಾ ಹೇಳಿದರು. "ನನ್ನ ಮಗಳು ವೈದ್ಯೆ ಆಗಬೇಕು ಎಂಬುದೊಂದೇ ನನ್ನ ಬಯಕೆ ಆಗಿದೆ. ಅದಕ್ಕೆ ಅನುಗುಣವಾಗಿ ನಾನು ಅವಳ ಶ್ರಮಕ್ಕೆ ಹೆಗಲು ನೀಡುತ್ತೇನೆ," ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.

English summary
Son of a daily-wage labourer and the daughter of a vegetable seller in Odisha have passed NEET Exam 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X