Get Updates
Get notified of breaking news, exclusive insights, and must-see stories!

ತಾಯಿಯನ್ನು ಕೊಂದು, ಆಕೆ ಹೃದಯಕ್ಕೆ ಚಟ್ನಿ, ಮೆಣಸುಪುಡಿ ಹಚ್ಚಿ ತಿಂದ ಮಗ

ಪುಣೆ, ಆಗಸ್ಟ್ 29: ಕುಡಿತ ಹಾಗೂ ಹಸಿವು ಜತೆಗೆ ಸೇರಿದರೆ ಮನುಷ್ಯತ್ವವನ್ನೇ ಕಸಿದು ಬಿಡುತ್ತದೆಯೇ ಎಂದು ಪ್ರಶ್ನೆ ಮೂಡಿಸುವಂಥ ಘಟನೆಯಿದು. ಕೊಲ್ಲಾಪುರದಲ್ಲಿ ಸೋಮವಾರ ಮಧ್ಯಾಹ್ನ ಪಾನಮತ್ತನಾದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕೊಂದು, ಆಕೆಯ ಹೃದಯವನ್ನು ಕತ್ತರಿಸಿ, ಚಟ್ನಿ ಹಾಗೂ ಮೆಣಸಿನ ಪುಡಿಯೊಂದಿಗೆ ಸ್ವಲ್ಪ ಭಾಗವನ್ನು ತಿಂದಿದ್ದಾನೆ.

ಆ ನಂತರ ಮನೆಯಿಂದ ಆಚೆ ಬಂದ ಆತನ ಕೈಗಳಿಂದ ರಕ್ತ ಸೋರುತ್ತಿರುವುದನ್ನು ಕಂಡು ಯಾರು ದೂರು ನೀಡಿದರೋ ಪೊಲೀಸರು ಬಂಧಿಸಿದ್ದಾರೆ. ಸುನೀಲ್ ಕುಂಚಕರ್ಣಿ ಬಂಧಿತ. ಈತ ತಾರಾರಾಣಿ ಚೌಕದ ಮಹಾವಾಲ ವಸತ್ ನ ನಿವಾಸಿ. ತನ್ನ ತಾಯಿ ಎಳವ ಎಂಬಾಕೆಯನ್ನು ಕೊಂದಿದ್ದಾನೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

Crime

Recommended Video

      Mysuru :Drunk Advocate Beats His Wife On Road | Oneindia Kannada

      ಸುನೀಲ್ ನಿರ್ಮಾಣ ಕಾರ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ. ಆತನಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿವೆ. ಆದರೆ ಪತ್ನಿಯು ಮಕ್ಕಳ ಜತೆಗೆ ಮುಂಬೈನ ತವರುಮನೆಯಲ್ಲಿ ಇದ್ದಾರೆ.

      ಕೊಲೆ ನಡೆದ ದಿನ ಸುನೀಲ್ ವಿಪರೀತ ಕುಡಿದಿದ್ದ. ಮೊದಲಿಗೆ ನೆರೆಮನೆಗೆ ಹೋಗಿ ಊಟ ಕೇಳಿದ್ದಾನೆ. ಅವರು ಕೊಡದಿದ್ದಾಗ ತನ್ನ ಮನೆಗೆ ಹೋಗಿದ್ದಾನೆ. ಹೋದಹೋದವನೇ ತನ್ನ ತಾಯಿ ಜತೆಗೆ ಹೊಡೆದಾಟ ನಡೆಸಿದ್ದಾನೆ. ಆ ನಂತರ ಆಕೆಯನ್ನು ತಿವಿದು ಕೊಂದಿದ್ದಾನೆ. ಹೃದಯವನ್ನು ಬಗೆದು ಅದಕ್ಕೆ ಚಟ್ನಿ ಹಚ್ಚಿ, ಮೆಣಸು ಪುಡಿ ಸವರಿ ಸ್ವಲ್ಪ ಭಾಗ ತಿಂದಿದ್ದಾನೆ.

      ಸದ್ಯಕ್ಕೆ ಸುನೀಲ್ ನನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+