4 Trillion Economy: 4 ಟ್ರಿಲಿಯನ್ ಡಾಲರ್ ದಾಟಿದ ಭಾರತದ ಆರ್ಥಿಕತೆ?
ಭಾರತದ ಆರ್ಥಿಕತೆ ವೇಗವಾಗಿ ಮುನ್ನುಗ್ಗುತ್ತಿದೆ, ಜಗತ್ತಿನ ಶಕ್ತಿಶಾಲಿ ದೇಶಗಳನ್ನ ಭಾರತವು ಹಿಂದಕ್ಕೆ ಹಾಕಿ ಮುಂದೆ ಬಂದಿದೆ. ಕೆಲ ತಿಂಗಳ ಹಿಂದಷ್ಟೇ, ಭಾರತ ಜಗತ್ತಿನ 'ಟಾಪ್-5' ಆರ್ಥಿಕತೆ ಎಂಬ ಹೆಗ್ಗಳಿಕೆ ಪಡೆದಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಟಾಪ್-4 ಸ್ಥಾನಕ್ಕೆ ಭಾರತ ಲಗ್ಗೆ ಇಟ್ಟಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿಗೆ, ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಎಂದು ವರದಿಯಾಗಿದೆ.
ಭಾರತವನ್ನ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಿ ಮಾಡುತ್ತೇವೆ ಅಂತಿದ್ದಾರೆ ಪ್ರಧಾನಿ ಮೋದಿ. ಹೀಗೆ ಭಾರತವನ್ನು ಜಗತ್ತಿನ ಟಾಪ್-3 ಎಕಾನಮಿ ಮಾಡಲು ಎಲ್ಲರೂ ಕೈಜೋಡಿಸಿ ಎಂದು ಪ್ರಧಾನಿ ಮನವಿ ಮಾಡಿದ್ದರು. ಈಗ ಭಾರತ 4 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದುವ ಮೂಲಕ 'ಟಾಪ್-4' ಆರ್ಥಿಕತೆಯಾಗಿದೆ ಎನ್ನಲಾಗಿದೆ. ಹಾಗಾದ್ರೆ ಈ ಬಗ್ಗೆ ವರದಿ ಹೊರಬಿದ್ದಿದ್ದು ಹೇಗೆ ಗೊತ್ತಾ? ಭಾರತಕ್ಕಿಂತ ಮುಂದೆ, ಯಾವೆಲ್ಲಾ ದೇಶಗಳು ಇವೆ? ಜಗತ್ತಿನ ಟಾಪ್ ಆರ್ಥಿಕತೆ ಹೊಂದಿರುವ ದೇಶಗಳ ಪೂರ್ಣ ಪಟ್ಟಿ ಇಲ್ಲಿದೆ, ಮುಂದೆ ಓದಿ.

ಭಾರತದ ಆರ್ಥಿಕ ಶಕ್ತಿ ಹೀಗಿದೆ!
ಇದೀಗ ಭಾರತದ ಆರ್ಥಿಕತೆಯು 4 ಟ್ರಿಲಿಯನ್ ಡಾಲರ್ ಗುರಿ ತಲುಪಿರುವ ಬಗ್ಗೆ ಕೇಂದ್ರದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಬಗ್ಗೆ ವರದಿಗಳು ಪ್ರಕಟವಾಗಿದ್ದು ಸಂಚಲನ ಸೃಷ್ಟಿಸಿದೆ. ಹೀಗಾಗಿ ಅಧಿಕೃತ ಮಾಹಿತಿಗಾಗಿ ಕಾಯಲಾಗುತ್ತಿದೆ ಇನ್ನೇನು ಅಧಿಕೃತ ಮಾಹಿತಿ ಹೊರಬಿದ್ದು ಭಾರತವು 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವುದು ಪಕ್ಕಾ ಆದರೆ ಇದು ಮಹತ್ವದ ಸಾಧನೆಯಾಗಲಿದೆ. ಯಾಕಂದ್ರೆ ಈಗ ಜಗತ್ತಿನ ಟಾಪ್ ಆರ್ಥಿಕತೆ ಸ್ಥಾನಕ್ಕೆ ಅಮೆರಿಕ ಗಟ್ಟಿಯಾಗಿ ಕೂತಿದ್ದು, ಅಮೆರಿಕ ಸುಮಾರು 25 ಟ್ರಿಲಿಯನ್‌ಗೂ ಹೆಚ್ಚು ದೊಡ್ಡ ಆರ್ಥಿಕತೆ ಹೊಂದಿದೆ. ಹಾಗೂ ಚೀನಾ 17.963 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಆಗಿದೆ.
ಅಮೆರಿಕ & ಚೀನಾ ಬಿಟ್ಟು ಇವರೇ ದೊಡ್ಡವರು!
ಚೀನಾ ಬಿಟ್ಟರೆ ಜಪಾನ್ 4.231 ಟ್ರಿಲಿಯನ್ ಮತ್ತೆ ಜರ್ಮನಿ 4.072 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದೆ. ಹೀಗೆ ಜಪಾನ್ ಮತ್ತು ಜರ್ಮನಿ ದೇಶಗಳು ಕ್ರಮವಾಗಿ 3 ಮತ್ತು 4 ನೇ ಸ್ಥಾನ ಪಡೆದಿವೆ. ಆದರೆ ಇದೀಗ ಜಪಾನ್ ಮತ್ತು ಜರ್ಮನಿ ದೇಶಗಳ ಆರ್ಥಿಕತೆ ತೀವ್ರ ಮಂದವಾಗಿದೆ. ಹೀಗಾಗಿ ಭಾರತ ಈಗ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಿದ್ದು 4ನೆಯ ಸ್ಥಾನ ಪಡೆದಿದೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಇನ್ನೂ ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಅಧಿಕೃತ ಮಾಹಿತಿಗೆ ಕಾಯಲಾಗುತ್ತಿದೆ.
ಶತಕೋಟಿ ಭಾರತೀಯರ ಆಶಯ!
ಒಟ್ನಲ್ಲಿ ಭಾರತ ಇನ್ನೇನು ಕೆಲವೇ ವರ್ಷದಲ್ಲಿ ಜಗತ್ತಿನ ಟಾಪ್-3 ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲು ಕಾಯುತ್ತಿದೆ. ಇದೇ ವೇಳೆ ಭಾರತವು 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಮುಟ್ಟಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದ್ರೂ ಈ ಮಾಹಿತಿ ಸತ್ಯವಾಗಲಿ, ಭಾರತ ಶೀಘ್ರದಲ್ಲೇ ಟಾಪರ್-3 ಆರ್ಥಿಕತೆಯಾಗಲಿ ಅಂತಿದ್ದಾರೆ ಶತಕೋಟಿ ಭಾರತೀಯರು.

ಭಾರತವೇ ಅತಿವೇಗದ ಆರ್ಥಿಕತೆ
ಜಗತ್ತಿನಲ್ಲಿ ಅಮೆರಿಕ ಮತ್ತು ಚೀನಾ ಬಿಟ್ಟರೆ ಭಾರತವೇ ಅತಿ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ಆರ್ಥಿಕತೆಯಾಗಿದೆ. ಅದರಲ್ಲೂ ಪ್ರತಿಯೊಂದು ವಿಭಾಗದಲ್ಲೂ ಭಾರತವು ಮುಂದೆ ಇದೆ. ಹೀಗೆ ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕತೆ ಮತ್ತಷ್ಟು ಬಲವಾಗಿ ಆರ್ಥಿಕವಾಗಿ ಮತ್ತಷ್ಟು ಮುನ್ನುಗ್ಗುವ ನಿರೀಕ್ಷೆ ಇದೆ. ಕೊರೊನಾ ಬಳಿಕ ಹಲವು ದೇಶಗಳ ಆರ್ಥಿಕತೆ ನಲುಗಿ ಹೋಗಿದ್ರು ಭಾರತವು ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಮತ್ತಷ್ಟು ಬಲಿಷ್ಠವಾಗಲಿದೆ ಅಂತಿದ್ದಾರೆ ತಜ್ಞರು.












Click it and Unblock the Notifications