3 ತಿಂಗಳು ವಿದ್ಯುತ್ ಇಲ್ಲದೆ ಕಾಲ ತಳ್ಳಿದ ಪ್ರದೇಶ ನೋಡಿ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,02: ಈಗತಾನೇ ಚಳಿಗಾಲ ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದೆ. ಬಿರು ಬಿರು ಬಿಸಿಲು ಜನರ ನೆತ್ತಿ ಸುಡುವಂತೆ ಮಾಡುತ್ತಿದೆ. ಬೇಸಿಗೆಗೆ ನದಿ, ಹಳ್ಳ-ಕೊಳ್ಳ, ಜಲಾಶಯಗಳ ನೀರು ಬತ್ತಿ ಹೋಗುತ್ತಿರುವ ಪರಿಣಾಮ ಕುಡಿಯುವ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯಬೇಕಾಗಿದೆ

ಇನ್ನೊಂದೆಡೆ ಪರೀಕ್ಷೆಗಳ ಕಾರುಬಾರು ಸದ್ಯದಲ್ಲೇ ಪ್ರಾರಂಭವಾಗಲಿದೆ. ಅಂದರೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವ ತಯಾರಿ ನಡೆಸುತ್ತಿದ್ದು, ಹೆಚ್ಚಿನ ಅಂಕ ಗಳಿಸಲು ಹಂಬಲಿಸುತ್ತಿದ್ದಾರೆ.

ಶ್ರೀನಗರ, ಜಮ್ಮು ಕಾಶ್ಮೀರ ಹೀಗೆ ಅನೇಕ ಹಿಮಚ್ಛಾದಿತ ಪ್ರದೇಶಗಳಲ್ಲಿ ಮಕ್ಕಳು ಮೂರು ತಿಂಗಳ ರಜೆಯನ್ನು ಮುಗಿಸಿ ಶಾಲೆ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಇತ್ತ ಕಡೆ ವಿದ್ಯಾರ್ಥಿಗಳು ಯಾವಾಗ ಪರೀಕ್ಷೆಗಳು ಮುಗಿಯುತ್ತವೋ, ಎಲ್ಲೆಲ್ಲಿ ಪ್ರವಾಸ ಹೋಗುತ್ತೇವೋ ಎಂದು ಯೋಜನೆ ಹಾಕಿಕೊಳ್ಳುತ್ತಿದ್ದಾರೆ.[ಎಸ್ಎಸ್ಎಲ್ ಸಿ ಪರೀಕ್ಷೆಗಾಗಿ ಸಹಾಯವಾಣಿ ಆರಂಭ]

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಕೇಂದ್ರ ಬಜೆಟ್ ನಂತರ ವಿರೋಧ ಪಕ್ಷಗಳಿಂದ ವಾದ ಪ್ರತಿವಾದಗಳ ಬಾಣಗಳು ಒಡಾಡುತ್ತಿವೆ. ಒಟ್ಟಿನಲ್ಲಿ ಈ ಹಣಕಾಸು ಯೋಜನೆ ಬಗ್ಗೆ ಸರ್ಕಾರ ಮಾತ್ರವಲ್ಲ ಜನತೆಯೂ ಸಹ ಎಚ್ಚರದಿಂದ ಹೆಜ್ಜೆ ಹಾಕಬೇಕಾಗಿದೆ. ಇವುಗಳಲ್ಲದೇ ಇನ್ನಷ್ಟು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸುದ್ದಿ ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ.

ಹಿಮಚ್ಛಾದಿತ ರಸ್ತೆಯಲ್ಲಿ ತಾಯಿ ಮಕ್ಕಳು

ಹಿಮಚ್ಛಾದಿತ ರಸ್ತೆಯಲ್ಲಿ ತಾಯಿ ಮಕ್ಕಳು

ಹಿಮಚ್ಚಾದಿತ ಪ್ರದೇಶವಾದ ಪೆಗ್ವೆಯ ಜನರಿಗೆ ಚಳಿಗಾಲ ನರಕಸದೃಶವಾಗಿತ್ತು. ಏಕೆಂದರೆ ಇಲ್ಲಿನ ಸಾವುರಾರು ಮಂದಿ ವಿದ್ಯುತ್ ಇಲ್ಲದೆ ಕಾಲತಳ್ಳಿದ್ದಾರೆ. ಇದಕ್ಕೆ ಕಾರಣ ಊಹಿಸಲು ಅಸಾಧ್ಯವಾದ ಹಿಮದ ಅಬ್ಬರ. ಹಿಮಚ್ಚಾದಿತ ರಸ್ತೆಯಲ್ಲಿ ಮಹಿಳೆ ಮತ್ತು ಮಕ್ಕಳು ನಡೆದುಕೊಂಡು ಹೋಗುತ್ತಿರುವುದು ಹೀಗೆ

ಅರುಂಧತಿ ಭಟ್ಟಾಚಾರ್ಯ ಮತ್ತು ರೀಟಾ ಟಯೋಟ

ಅರುಂಧತಿ ಭಟ್ಟಾಚಾರ್ಯ ಮತ್ತು ರೀಟಾ ಟಯೋಟ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಮತ್ತು ಕಾಮರ್ಸ್ ಸೆಕ್ರೆಟರಿ ರೀಟಾ ಟಯೋಟ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 40ನೇ ಸಿವಿಲ್ ಅಕೌಂಟ್ಸ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಗಾಢವಾದ ಚಿಂತೆನೆಯಲಿ ತೊಡಗಿದ ಕ್ಷಣ

ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆ

ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮಂಗಳವಾರ ಲಕ್ನೋದಲ್ಲಿ ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಿದರು. ಈ ಸಂದರ್ಭದಲ್ಲಿ ಈ ಕಾಯ್ದೆಯ ಲಾಭ ಪಡೆದ ಮಂದಿಗೆ ಈ ಕಾಯ್ದೆಯ ವಿವರ ಮಂಡಿಸಿದರು.

ಹುಲಿಗೆ ಮರಣೋತ್ತರ ಪರೀಕ್ಷೆ

ಹುಲಿಗೆ ಮರಣೋತ್ತರ ಪರೀಕ್ಷೆ

ನಾಗಲ್ಯಾಂಡಿನ ಮೆಡ್ ಜಿಫೆಮಾದ ಗ್ರಾಮಸ್ಥರು ಹುಲಿಯನ್ನು ಕೊಂದು ಹಾಕಿದ್ದಾರೆ. ಸಾವನ್ನಪ್ಪಿದ ಹುಲಿಯನ್ನು ನಾಗಾಲ್ಯಾಂಡಿನ ಅರಣ್ಯ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲಿ ಪಶುವೈದ್ಯರು ನಾಗಾಲ್ಯಾಂಡಿನ ದಿಮಾಪುರದಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ತೊಡಗಿರುವುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Some National and International stories in Pics: BI Chairman Arundhati Bhattacharya and Commerce Secretary Rita Teaotia at the 40th Civil Accounts Day function at Vigyan Bhavan in New Delhi. Uttar Pradesh Chief Minister Akhilesh Yadav with the beneficiary women during the launch of National Food Security Act, in Lucknow on Wednesday.
Please Wait while comments are loading...