ಶನಿವಾರದ ಚಿತ್ರ ಸಂತೆ: 'ಹುಣ್ಣಿಮೆ ಹಾಡಿ'ನಿಂದ ಸೌಂದರ್ಯ ಸ್ಪರ್ಧೆವರೆಗೆ

Subscribe to Oneindia Kannada

ಬೆಂಗಳೂರು, ನವೆಂಬರ್ 5: ಶನಿವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ 'ಹುಣ್ಣಿಮೆ ಹಾಡು' ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ದೂರದ ಫಿಲಿಪ್ಪೀನ್ಸ್ ರಾಜಧಾನಿ ಮನೀಲಾದಲ್ಲಿ 'ಮಿಸ್ ಅರ್ಥ್-2017' ಸೌಂದರ್ಯ ಸ್ಪರ್ಧೆ ನಡೆದು ಹೋಯಿತು.

ಬಿಜೆಪಿ ಯಾತ್ರೆಯ ಆರಂಭದ ವೈಫಲ್ಯಕ್ಕೆ ಹೊಣೆ ಯಾರು?

ಜತೆಗೆ ಗುಜರಾತ್ ಚುನಾವಣೆ ತಯಾರಿಯಲ್ಲಿರುವ ಅಮಿತ್ ಶಾ... ಬೆಂಗಳೂರಿಗೆ ಆಗಮಿಸಿದ ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ... ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದ ಸುಂದರಿಯ ಕಣ್ಣಿಂದ ಜಾರಿದ ಕಂಬನಿ.. ಗೋಲ್ಮಾಲ್ ಅಗೇನ್ ಸಿನಿಮಾ ನೋಡಿದ ಕ್ಯಾನ್ಸರ್ ಪೀಡಿತ ಮಕ್ಕಳು..

ಹೀಗೆ ಸಾಲು ಸಾಲು ಕಥೆ ಹೇಳುವ ಅದ್ಭುತ ಅಧ್ಭುತ ಚಿತ್ರಗಳು ಇಲ್ಲಿವೆ. ಇಲ್ಲಿನ ಒಂದೊಂದು ಚಿತ್ರಗಳೂ ಬೇರೇನನ್ನೋ ಹೇಳುತ್ತಿವೆ. ಅದರಲ್ಲೂ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಅಮಿತ್ ಶಾ ಮುಖಭಾವ ಕುತೂಹಲಕಾರಿಯಾಗಿದೆ.. ನೀವೂ ಒಮ್ಮೆ ಕಣ್ತುಂಬಿಕೊಳ್ಳಿ.

ಹುಣ್ಣಿಮೆ ಹಾಡು

ಹುಣ್ಣಿಮೆ ಹಾಡು

ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ 'ಹುಣ್ಣಿಮೆ ಹಾಡು' ಶತಕ ಸಂಭ್ರಮದಲ್ಲಿ ಸಿತಾರ್ ಮಾಂತ್ರಿಕ ಉಸ್ತಾದ್ ಹಫೀಜ್ ಬಲೇ ಖಾನ್ ಹಿಂದೂಸ್ಥಾನಿ ಸಂಗೀತದ ಸುಧೆ ಹರಿಸಿದರು. ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.

ಕ್ಯಾನ್ಸರ್ ಪೀಡಿತ ಮಕ್ಕಳ ಜತೆ 'ಗೋಲ್ಮಾಲ್ ಅಗೇನ್'

ಕ್ಯಾನ್ಸರ್ ಪೀಡಿತ ಮಕ್ಕಳ ಜತೆ 'ಗೋಲ್ಮಾಲ್ ಅಗೇನ್'

ಮುಂಬೈನಲ್ಲಿ ಬಾಲಿವುಟ್ ನಟ ಶ್ರೇಯಸ್ ತಲ್ಪಾಡೆ ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ತಮ್ಮ 'ಗೋಲ್ಮಾಲ್ ಅಗೇನ್' ಚಿತ್ರದ ವಿಶೇ಺ಷ ಪ್ರದರ್ಶನ ಏರ್ಪಡಿಸಿದ್ದರು. ಈ ಸಂದರ್ಭ ಮಕ್ಕಳೊಂದಿಗೆ ಶ್ರೇಯಸ್ ತಲ್ಪಾಡೆ ಕಾಣಿಸಿಕೊಂಡಿದ್ದು ಹೀಗೆ.

ಯಾಕೋ ಏನೋ ಸರಿ ಹೋಗ್ತಿಲ್ಲ

ಯಾಕೋ ಏನೋ ಸರಿ ಹೋಗ್ತಿಲ್ಲ

ಶನಿವಾರ ಅಹಮದಾಬಾದ್ ನ ಗುಜರಾತ್ ವಿವಿ ಕನ್ವೆನ್ಷನ್ ಮತ್ತು ಎಕ್ಸಿವಿಷನ್ ಕೇಂದ್ರದಲ್ಲಿ ಬಿಜೆಪಿ ಪಕ್ಷದ ನಾಯಕರ ಜತೆಗೆ ನಡೆದ ಸಭೆಯಲ್ಲಿ ಅಮಿತ್ ಶಾ ಕಾಣಿಸಿಕೊಂಡಿದ್ದು ಹೀಗೆ. ಗುಜರಾತ್ ನ ಮೂವರು ಯುವ ನಾಯಕರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿರುವ ಹಿನ್ನಲೆಯಲ್ಲಿ ಅಮಿತ್ ಶಾ ಗೆ ಯಾಕೋ ಏನೋ ಈ ಚುನಾವಣೆ ಸರಿ ಹೋಗ್ತಿಲ್ಲ ಅಂತ ಅನಿಸ್ತಿದೆಯೋ ಏನೋ.

ಸುಂದರಿಯರ ಕೆನ್ನೆತೊಯ್ದ ಆನಂದಭಾಷ್ಪ

ಸುಂದರಿಯರ ಕೆನ್ನೆತೊಯ್ದ ಆನಂದಭಾಷ್ಪ

ಬಲಭಾಗದಿಂದ ಎರಡನೇಯವರಾಗಿರುವ ಫಿಲಿಪ್ಪೀನ್ಸ್ ನ ಸೌಂದರ್ಯ ಸ್ಪರ್ಧಿ ಕ್ಯಾರೆನ್ ಇಬಾಸ್ಕೊ 'ಮಿಸ್ ಅರ್ಥ್ 2017'ರ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಫಿಲಿಪ್ಪೀನ್ಸ್ ರಾಜಧಾನಿ ಮನೀಲಾದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದ ಆನಂದ ಭಾಷ್ಪ ಆಕೆಯ ಕೆನ್ನೆ ತೋಯಿಸಿತು.

ರಾಣಿ ಮಾರಿಯಾ ಧರ್ಮಾಚರಣೆ

ರಾಣಿ ಮಾರಿಯಾ ಧರ್ಮಾಚರಣೆ

ವ್ಯಾಟಿಕನ್ ಸಿಟಿಯ ಕಾರ್ಡಿನಲ್ ಏಂಜೆಲೊ ಅಮಾಟೋ (ಸಿ) ಶನಿವಾರ ಇಂಧೋರ್ ನಲ್ಲಿ ರಾಣಿ ಮಾರಿಯಾ ಸೀನಿಯರ್ ಧರ್ಮಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸರಿಸುಮಾರು 50 ಬಿಷಪ್ಗಳು ಮತ್ತು ನೂರಾರು ಮಂದಿ ಅರ್ಚಕರು, ಸಿಸ್ಟರ್ಸ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸೀನಿಯರ್ ರಾಣಿ ಮಾರಿಯಾ ಆಶೀರ್ವದ ಪಡೆದರು.

ಜೋಜೋ ಲಾಲಿ

ಜೋಜೋ ಲಾಲಿ

ವಕೀಲರು ಮತ್ತು ಕೋರ್ಟ್ ಸಿಬ್ಬಂದಿಗಳ ಮಕ್ಕಳಿಗಾಗಿ ಮುಂಬೈನಲ್ಲಿ ತೆರೆಯಲಾದ ಶಿಶು ವಿಹಾರ ಕೇಂದ್ರದ ಉದ್ಘಾಟನೆಯಲ್ಲಿ ಸುಪ್ರಿಂ ಕೋರ್ಟ್ ನ್ಯಾ. ಅರ್ಜನ್ ಕುಮಾರ್ ಸಿಕ್ರಿ, ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಪಾಲ್ಗೊಂಡಿದ್ದರು.

ಒಂಟೆ ಗಾಡಿ ಮತ್ತು ಸಂಜೆಯ ಸೂರ್ಯ

ಒಂಟೆ ಗಾಡಿ ಮತ್ತು ಸಂಜೆಯ ಸೂರ್ಯ

ಒಂಟೆ ಗಾಡಿ ಮತ್ತು ಒಂಟೆ ಗಾಡಿ ನಡೆಸುವ ಸಾರಥಿ ಸಂಜೆಯ ಸೂರ್ಯನ ಬೆಳಕಲ್ಲಿ ಹಿನ್ನಲೆಯಲ್ಲಿ ಕ್ಯಾಮೆರಾದ ಫ್ರೇಮ್ ನಲ್ಲಿ ಸೆರೆಯಾದರು. ಪುಷ್ಕರದಲ್ಲಿ ಕಂಡ ಈ ದೃಶ್ಯ ಮನಮೋಹಕವಾಗಿದೆ.

 ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯೆಕ್ಷೆಗೆ ಸ್ವಾಗತ

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯೆಕ್ಷೆಗೆ ಸ್ವಾಗತ

ಬೆಂಗಳೂರಿಗೆ ಆಗಮಿಸಿದ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ರನ್ನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಸ್ವಾಗತಿಸಿದರು. ನಟಿ ಹಾಗೂ ರಾಜಕಾರಣಿ ಜಯಮಾಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sitar Maestro Ustaad Hafiz Bale Khan performs hindustani classic during Hunnime Haadu Centenary Celebrations at Kaadu Malleshwara Temple in Malleswaram in Bengaluru on Saturday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ