Indigo Flight: ಸಿಂಗಾಪುರದಿಂದ ಬೆಂಗಳೂರಿಗೆ ಬರಲು ಹಾರಿದ್ದ ಇಂಡಿಗೋ ವಿಮಾನ ಮತ್ತೆ ವಾಪಾಸ್ ಹೋಗಿದ್ಯಾಕೆ?
ನವದೆಹಲಿ, ಅಕ್ಟೋಬರ್ 19: ನಿತ್ಯ ಸಾವಿರಾರು ಪ್ರಯಾಣಿಕರು ಸಾಗಿಸುವ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಇತ್ತೀಚೆಗೆ ಇಸ್ತಾನ್‌ಬುಲ್‌ನಲ್ಲಿ ವೃದ್ಧ ದಂಪತಿಗಳನ್ನು ಬಿಟ್ಟು ಭಾರತಕ್ಕೆ ಹಾರಿ ಸುದ್ದಿಯಾಗಿತ್ತು. ಇದೀಗ ಅಂತದ್ದೆ ಮತ್ತೊಂದು ಯಡವಟ್ಟು ಮಾಡಿಕೊಂಡು ಸುದ್ದಿಯಲ್ಲಿದೆ. ಲಗೇಜುಗಳನ್ನು ಇಳಿಸದೆಯೆ ಹಾರಾಟ ಮಾಡಿದ ಘಟನೆ ನಡೆದಿದೆ. ಮುಂದೇನಾಯ್ತು ತಿಳಿಯಿರಿ.
ಸಿಂಗಾಪೂರ್ ನಿಂದ ಬೆಂಗಳೂರಿಗೆ ಬರಬೇಕಿದ್ದ ಇಂಡಿಗೋ ವಿಮಾನವು ಚಾಂಗಿ ಏರ್‌ಪೋರ್ಟ್‌ನಲ್ಲಿ ಲಗೇಜುಗಳನ್ನು ಪೂರ್ಣವಾಗಿ ಇಳಿಸದೇ (Offload) ನಭಕ್ಕೆ ಜಿಗಿದಿದೆ. ಇಂಡಿಯೋಗ ಸಿಬ್ಬಂದಿ ಮಾಡಿತ ತಪ್ಪು ತಿಳಿದ ತಕ್ಷಣವೇ ಮತ್ತೆ ಸಿಂಗಾಪುರನ ಚಾಂಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಸಿಂಗಾಪುರನಿಂದ ಬೆಂಗಳೂರಿಗೆ ಹೊರಡುವ ಇಂಡಿಗೋ (6E-1006) ಬುಧವಾರ ಬೆಳಗ್ಗೆ 5.35ಕ್ಕೆ (ಸ್ಥಳೀಯ ಕಾಲಮಾನ) ಚಾಂಗಿ ವಿಮಾನ ನಿಲ್ದಾಣದಿಂದ ಹೊರಟಿತು. ಆದರೆ ಹೊರಡುವ ಮುನ್ನ ಪೂರ್ಣ ಲಗೇಜುಗಳನ್ನು ಇಳಿಸದ ಕಾರಣ ಮತ್ತೆ 6.57 ಕ್ಕೆ ಅಲ್ಲಿಗೆ ಮರಳಿ ಚಾಂಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಈ ವೇಳೆ ಏರ್‌ಬಸ್ (A321neo) ನಂತರ 10.12 ಕ್ಕೆ ಹೊರಟು ನಾಲ್ಕು ಗಂಟೆಗಳ ಅಂದರೆ 11.44 ಕ್ಕೆ (ಭಾರತೀಯ ಕಾಲಮಾನ) ಬೆಂಗಳೂರು ತಲುಪಿತು.
ಘಟನೆಗೆ ವಿಷಾಧಿಸಿ ಇಂಡಿಗೋ ಹೇಳಿಕೆ ಬಿಡುಗಡೆ
ಆದ ತಪ್ಪನ್ನು ಒಪ್ಪಿಕೊಂಡಿರುವ ಇಂಡಿಗೋ ಸಂಸ್ಥೆ ವಿಷಾಧ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಮ್ಮ ಸೇವಾ ಪಾಲುದಾರರ ಕಡೆಯಿಂದ ಲಗೇಜುಗಳ ಇಳಿಕೆ ವಿಚಾರದಲ್ಲಿ ಲೋಪದೋಷ ಉಂಟಾಗಿದೆ. ಎಂದು ಒಪ್ಪಿಕೊಂಡಿದೆ. ಈ ಕಾರಣದಿಂದ ವಿಮಾನವು ಮತ್ತೆ ಚಾಂಗಿ ನಿಲ್ದಾಣಕ್ಕೆ ಆಗಮಿಸಿತು. ಇದರಿಂದ ಪ್ರಯಾಣಿಕರಿಗೆ ಸಂಚಾರ ತೊಂದರೆ, ವಿಳಂಬವಾಗಿಕ್ಕೆ ವಿಷಾಧಿಸುತ್ತೇವೆ. ಈ ವೇಳೆ ಪ್ರಯಾಣಿಕರಿಗೆ ಅಗತ್ಯವಾದ ಉಪಹಾರ ನೀಡುವ ಜೊತೆಗೆ ವಿಳಂಬ ಕುರಿತು ಮಾಹಿತಿ ನೀಡಲಾಯಿತು ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ.

ಇಂಡಿಗೋ ಸಂಸ್ಥೆ ವಿವಿಧ ವಿಮಾನಗಳ ಲಗೇಜುಗಳನ್ನು ಅದಲು ಬದಲು ಮಾಡಿ ಬೆರೆಸಿದ ಕಾರಣ ವಿಮಾನವು ಮರಳಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಯಿತು. ಇಂತಹ ಘಟನೆಗಳಿಂದ ಭಾರತದ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆಯು ಇಂಡಿಗೋ ಸಂಸ್ಥೆ ಮುಜುಗರಕ್ಕೆ ಈಡಾಗಬೇಕಾಗಿದೆ. ನಿತ್ಯ ನೂರಾರು ವಿಮಾನಗಳು ಕಾರ್ಯಾಚರಣೆ ನಡೆಯುತ್ತಿವೆ. ದೇಶಿಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ನೆಚ್ಚಿರುವ ಇಂಡಿಗೋ ಸಂಸ್ಥೆಯಿಂದ ಹೀಗಾದರೆ ಹೇಗೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ.












Click it and Unblock the Notifications