ನಟಿ ಪ್ರಿಯಾಂಕಾ ಚೋಪ್ರಾ 'ದತ್ತು ಪುತ್ರಿ' ಇನ್ನಿಲ್ಲ
ರಾಂಚಿ, ಡಿ.17: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ದತ್ತು ಪುತ್ರಿ ಕಳೆದುಕೊಂಡ ದುಃಖದಲ್ಲಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಆಕೆಯನ್ನು ನೋಡಲು ಹೋಗುತ್ತಿದ್ದರು, ಅದರೆ, ಈಗ ತಮ್ಮ ದತ್ತು ಪುತ್ರಿ ದುರ್ಗಾ ಸಾವಿನ ನೋವಿನಲ್ಲಿದ್ದಾರೆ. ಪ್ರಿಯಾಂಕಾ ಪುತ್ರಿ ಮರಣ ಭಾರತಕ್ಕೂ ಶೋಕದಾಯಕವಾಗಿದೆ.
ರಾಂಚಿಯ ಬಿರ್ಸಾ ಮುಂಡಾ ಮೃಗಾಲಯದಲ್ಲಿದ್ದ ಪ್ರಿಯಾಂಕಾ ಚೋಪ್ರಾ ಅವರು ದತ್ತು ಪಡೆದಿದ್ದ ದುರ್ಗಾ ಹೆಸರಿನ ಹೆಣ್ಣು ಅಕಾಲಿಕ ಮರಣ ಹೊಂದಿದೆ. ಹುಲಿ ಸಂತತಿ ಕಡಿಮೆಯಾಗುತ್ತಿರುವ ಆತಂಕದದ ನಡುವೆ ಈ ಹುಲಿ ನಂಜು ರೋಗ(Toxaemia)ದಿಂದ ಸಾವನ್ನಪ್ಪಿರುವುದು ಎಚ್ಚರಿಕೆ ಗಂಟೆಯಾಗಿದೆ ಎಂದು ಮೃಗಾಲಯದ ಪಾಲಕರು ಹೇಳಿದ್ದಾರೆ. [ಮೈಸೂರು ಮೃಗಾಲಯಕ್ಕೆ ಟ್ರಿಪ್ ಅಡ್ವೈಸರ್ ಪ್ರಶಸ್ತಿ]

ಕಳೆದ ಏಳು ವರ್ಷಗಳಲ್ಲಿ ಸುಮಾರು 8 ಹುಲಿಗಳು ಇಲ್ಲಿ ಸಾವನ್ನಪ್ಪಿವೆ. 2010 ಮೂರು ಹುಲಿ ಮರಿಗಳು ಸಾವನ್ನಪ್ಪಿದ್ದವು, ಸದ್ಯಕ್ಕೆ ಹೆಣ್ಣು ಹುಲಿ ದಿಕ್ಕಿಲ್ಲದ ಈ ಮೃಗಾಲಯದಲ್ಲಿ ಶಿವ, ಸುರ್ಗೀವ ಹಾಗೂ ತೇಜಸ್ವಿ ಮಾತ್ರವಿದೆ ಎಂದು ಬಿರ್ಸಾ ಜೈವಿಕ್ ಉದ್ಯಾನ್ ನಿರ್ದೇಶಕ ಪಿಕೆ ವರ್ಮ ಹೇಳಿದ್ದಾರೆ.
2007ರಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪ ಧಾಮದಲ್ಲಿದ್ದ 11 ವರ್ಷ ವಯಸ್ಸಿನ ಹೆಣ್ಣು ಹುಲಿ ದುರ್ಗಾಳನ್ನು ಪ್ರಿಯಾಂಕ ಚೋಪ್ರಾ ದತ್ತು ಪಡೆದಿದ್ದರು. ನಂತರ ಹುಲಿಯನ್ನು ಶಿವಮೊಗ್ಗದಿಂದ ರಾಂಚಿ ಮೃಗಾಲಯಕ್ಕೆ ರವಾನಿಸಲಾಗಿತ್ತು. [ಮೃಗಾಲಯದ ಟಿಕೆಟ್ ಸುಲಭವಾಗಿ ಪಡೆಯಿರಿ]
ದತ್ತು ಪಡೆದಿದ್ದಕ್ಕಾಗಿ ಆರಂಭಿಕ ಮೊತ್ತವಾಗಿ ಪ್ರಿಯಾಂಕಾ ಚೋಪ್ರಾ ಅವರು 2 ಲಕ್ಷ ರು ಚೆಕ್ ನೀಡಿದ್ದರು. ಅದರೆ, ಇತ್ತೀಚೆಗೆ ಇದೇ ಹುಲಿಯನ್ನು ಕೇಂದ್ರ ಕಲ್ಲಿದ್ದಲು ನಿಗಮ ದತ್ತು ಪಡೆದುಕೊಂಡಿತ್ತು.
ಈ ಹಿಂದೆ ಮೈಸೂರು ಮೃಗಾಲಯದಿಂದ ಜಾವಗಲ್ ಶ್ರೀನಾಥ್-ಚಿರತೆ, ಅನಿಲ್ ಕುಂಬ್ಳೆ-ಜಿರಾಫೆ, ಜಹೀರ್ ಖಾನ್ -ಬ್ರಹ್ಮ ಹೆಸರಿನ ಹುಲಿ, ಎಂಎಸ್ ಧೋನಿ ಅವರು ಅಗಸ್ತ್ಯ ಹೆಸರಿನ ಹುಲಿಯನ್ನು ದತ್ತು ಪಡೆದುಕೊಂಡಿದ್ದರು.












Click it and Unblock the Notifications