ತಾಯಿಯನ್ನೇ ಬ್ಲಾಕ್ ಮೇಲ್ ಮಾಡಲು ಹೋಗಿ ಶೀನಾ ಕೊಲೆಯಾದಳೆ?

ನವದೆಹಲಿ,ಸೆಪ್ಟೆಂಬರ್. 12 : ಶೀನಾ ಬೋರಾ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರೋಪಿಗಳಲ್ಲಿ ಒಬ್ಬನಾಗಿರುವ ಚಾಲಕ ಶ್ಯಾಮ್ ರಾಯ್ ಇಂದ್ರಾಣಿ ಮುಖರ್ಜಿ ಕೊಲೆ ಮಾಡಿರುವ ಬಗ್ಗೆ ಕಾರಣವೊಂದನ್ನು ನೀಡಿದ್ದಾನೆ.

ಇಂದ್ರಾಣಿ ಮತ್ತು ಪೀಟರ್ ನಡುವಿನ ಅಕ್ರಮ ಸಂಬಂಧ ತಾನು(ಶೀನಾ ಬೋರಾ) ಬಾಯಿಬಿಡಬಾರದು ಎಂದಾದರೆ ಮುಂಬೈನಲ್ಲಿ ಸುಸಜ್ಜಿತ ಮನೆಯೊಂದನ್ನು ನೀಡಬೇಕು ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ಚಾಲಕ ಹೇಳಿದ್ದಾನೆ.[ಶೀನಾ ಬೋರಾ ಡಿಎನ್ಎ ಪರೀಕ್ಷೆ ವರದಿ ಬಹಿರಂಗ]

mumbai

ಇಂದ್ರಾಣಿ ಶೀನಾಳನ್ನು ಹೇಗೆ ಕೊಲೆ ಮಾಡಿದಳು ಎಂಬ ಬಗ್ಗೆಯೂ ಚಾಲಕ ಮಾಹಿತಿ ನೀಡಿದ್ದಾನೆ. ಇಂದ್ರಾಣಿ ಶೀನಾ ಬಗ್ಗೆ ಸದಾ ಕೋಪ ಕಾರುತ್ತಿದ್ದಳು. ಕೊಲೆ ಮಾಡಿದ ನಂತರ ಸಿಟ್ಟಿನಲ್ಲಿ 'ನಿನಗೆ ಬೇಕಾದ ಸುಸಜ್ಜಿತ ಮನೆಯನ್ನು ಬಾಂದ್ರಾ ದಲ್ಲಿ ತೆಗೆದುಕೋ' ಎಂದು ಹೇಳಿದ್ದಳು ಎಂದು ಚಾಲಕ ಘಟನೆಯ ಕರಾಳತೆಯನ್ನು ಬಿಚ್ಚಿಟ್ಟಿದ್ದಾನೆ.[ಶೀನಾ ಬೋರಾ ಹತ್ಯೆಯ ಫುಲ್ ಡಿಟೇಲ್ಸ್]

ಕೊಲೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶೀನಾ ಸಹೋದರ ಮಿಖಾಯಲ್ , ತಾಯಿ ನನ್ನ ಪಾಕೆಟ್ ಮನಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅಲ್ಲದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಶೀನಾ ಹೇಳಿಕೊಂಡಿದ್ದಳು ಎಂದು ತಿಳಿಸಿದ್ದಾರೆ.

ಕಳೆದ 2012 ರಲ್ಲಿ ಶೀನಾ ಬೋರಾ ನಾಪತ್ತೆಯಾಗಿದ್ದಳು. ಆಕೆಯ ತಾಯಿ ಇಂದ್ರಾಣಿ ಮೂಖರ್ಜಿ, ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಆಕೆಯನ್ನು ಕೊಲೆಮಾಡಿ ಮುಂಬೈ ನಿಂದ ದೂರದಲ್ಲಿರುವ ರಾಯಘಡ ಅರಣ್ಯಕ್ಕೆ ಎಸೆದು ಬಂದಿದ್ದರು. ಈ ಆಧಾರದಲ್ಲಿಯೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+