'ಅಪ್ಪುಗೆಯ ಅಮ್ಮ' ನವರ ಆಶ್ರಮದಲ್ಲಿ ಕಾಮದ ಘಮ
ಕೊಚ್ಚಿ, ಫೆ.21: 'ಅಪ್ಪುಗೆ ಅಮ್ಮ' ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ಸ್ತ್ರೀಯರ ಮೇಲೆ ನಿರಂತರವಾಗಿ ಲೈಂಗಿಕ ಕಿರುಕುಳ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ವಯಂಘೋಷಿತ ದೈವಮಾತಾ ಅಮೃತಾನಂದಮಯಿ ಅವರ ಪರಮಾಪ್ತೆಯಾಗಿದ್ದ ಗಾಯತ್ರಿ ಎಂಬುವರು ಈ ರೀತಿ ಆರೋಪಿಸಿದ್ದಾರೆ.
'ಹೋಲಿ ಹೆಲ್, ಮೆಮಾಯಿರ್ ಆಫ್ ಫೈತ್' ಎಂಬ ಹೆಸರಿನ ಪುಸ್ತಕ ಬರೆದಿರುವ ಗಾಯತ್ರಿ ಅವರು ಕೇರಳದ ಅಮೃತಪುರಿಯಲ್ಲಿರುವ ಮಾತಾ ಅಮೃತಾನಂದಮಯಿ ಆಶ್ರಮದ ಕಾಮಕಾಂಡವನ್ನು ವಿವರಿಸಿದ್ದಾರೆ.ಗೈಲ್ ಟ್ರೇಡ್ ವೆಲ್ ಎಂಬ ಹೆಸರಿನವರಾದ ಗಾಯತ್ರಿ ಆಸ್ಟ್ರೇಲಿಯಾ ಮೂಲದವರಾಗಿದ್ದು ಮಾತಾ ಆಶ್ರಮಕ್ಕೆ ಬಂದ ಮೇಲೆ ದೀಕ್ಷೆ ಸ್ವೀಕರಿಸಿ ಗಾಯತ್ರಿ ಎಂಬ ನಾಮ ಪಡೆದಿದ್ದರು. ಮಾತಾ ಅವರ ಆಪ್ತಬಳಗದಲ್ಲಿ ಒಬ್ಬರಾಗಿ ಸುಮಾರು ಎರಡು ದಶಕಗಳ ಕಾಲ ಜತೆಗಿದ್ದರು.
1999ರಲ್ಲಿ ಮಾತಾ ಅಮೃತಾನಂದಮಯಿ ಆಶ್ರಮ ತೊರೆದ ಮೇಲೆ 'ಹೋಲಿ ಹೆಲ್..' ಪುಸ್ತಕ ಬರೆದು ಆಧ್ಯಾತ್ಮದ ಹೆಸರಿನಲ್ಲಿ ಇಲ್ಲಿ ಅತಿಯಾದ ಕಾಮದಹನ ಗುಟ್ಟಾಗಿ ನಡೆಯುತ್ತಿದೆ. ಹಿರಿಯ ಆಶ್ರಮವಾಸಿಗಳು ಎಲ್ಲರೂ ಇದರಲ್ಲಿ ತೊಡಗಿದ್ದಾರೆ. ನನ್ನ ಮೇಲೂ ಲೈಂಗಿಕ ದೌರ್ಜನ್ಯ ಜರುಗಿತ್ತು ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಶ್ರಮದ ಪ್ರತಿನಿಧಿ ಸುದೀಪ್ ಕುಮಾರ್ ಅವರು, ಗಾಯತ್ರಿ ಅವರ ಆರೋಪಗಳು ಆಧಾರ ರಹಿತ, ಅವರ ಹೇಳಿಕೆಗಳು ಆಘಾತಕಾರಿ ಎಂದಿದ್ದಾರೆ.1978ರಲ್ಲಿ ಟ್ರೆಡ್ ವೆಲ್ ಗೆ 19 ವರ್ಷವಿದ್ದಾಗ ಕೇರಳದ ಆಶ್ರಮಕ್ಕೆ ಬಂದು ಮಾತಾ ಅವರ ಸಾನಿಧ್ಯ ಬಯಸಿದ್ದರು. ಅಮೃತಾನಂದಮಯಿ ಶಿಕ್ಷಣ ಟ್ರಸ್ಟ್, ನೆಟ್ವರ್ಕ್ ಗಳ ಬಗ್ಗೆ ಆಕೆಗೆ ವಿಶೇಷ ಒಲವಿತ್ತು. ಆಕೆ ಆಶ್ರಮ ತೊರೆದ ಮೇಲೂ ಆಕೆಗೆ ಆಶ್ರಮದ ವತಿಯಿಂದ ಸಕಲ ಸೌಕರ್ಯವನ್ನು ಒದಗಿಸಲಾಗಿದೆ ಎಂದು ಸುದೀಪ್ ಹೇಳಿದ್ದಾರೆ.
ಆದರೆ, ಗಾಯತ್ರಿ ಹೇಳುವ ಪ್ರಕಾರ ಬಾಲು ಎಂಬ ಭಕ್ತನಿಂದ ಮಾತಾ ಅವರ ಸಮಸ್ತ ಆಸ್ತಿಯ ವಿವರಗಳ ಬಗ್ಗೆ ತಿಳಿದು ಬಿಟ್ಟಿತ್ತು. ಅಮ್ಮ ಅವರ ಕುಟುಂಬದ ಮೀನುಗಾರಿಕೆ ವ್ಯವಹಾರ ಮುಂತಾದ ಗುಟ್ಟಿನ ವಿಷಯ ತಿಳಿಯಿತು. 1987ರ ಹೊತ್ತಿಗೆ ನನಗೆ ಬೆದರಿಕೆ ಕರೆಗಳು ಬರಲು ಶುರುವಾಯಿತು. ಕೊನೆಗೆ ವಿಧಿಯಿಲ್ಲದೆ ನಾನು ಪುಸ್ತಕ ರೂಪದಲ್ಲಿ ಎಲ್ಲವನ್ನು ಬರೆಯಬೇಕಾಯಿತು ಎಂದಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications