ಪ್ರಸವಪೂರ್ವ ಲಿಂಗ ಪತ್ತೆ ಜಾಹೀರಾತು ಹಾಕಲ್ಲ : ಗೂಗಲ್

ನವದೆಹಲಿ, ಡಿಸೆಂಬರ್ 14: ಪ್ರಸವಪೂರ್ವ ಲಿಂಗ ಪತ್ತೆಗೆ ಸಂಬಂಧಿಸಿದ ಜಾಹೀರಾತುಗಳನ್ನು ಹಾಕುತ್ತಿಲ್ಲ, ಈ ರೀತಿ ಯಾವುದೇ ಜಾಹೀರಾತು ಕಂಡು ಬಂದರೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳಿಗೆ ತಿಳಿಸುವುದಾಗಿ ಸುಪ್ರೀಂಕೋರ್ಟಿಗೆ ಸರ್ಚ್ ಇಂಜಿನ್ ದೈತ್ಯ ಗೂಗಲ್ ತಿಳಿಸಿದೆ.

ಪ್ರಸವಪೂರ್ವ ಲಿಂಗ ಪತ್ತೆಗೆ ಸಂಬಂಧಿಸಿದ ಜಾಹೀರಾತು ಪ್ರಸಾರ ಕುರಿತಂತೆ ಆನ್ ಲೈನ್ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್, ಯಾಹೂ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

Sex determination ads must be blocked: Supreme Court

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಆರ್. ಭಾನುಮತಿ ಅವರನ್ನನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಕ್ರಮ ಜರುಗಿಸುವಂತೆ ಸೂಚಿಸಿದೆ. ದೇಶದಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಇಳಿಮುಖ ಆಗುತ್ತಿರುವ ಬಗ್ಗೆ ನ್ಯಾಯಾಲಯದ ಅಭಿಪ್ರಾಯ ಕೋರಿ ಡಾ. ಸಾಬು ಮ್ಯಾಥ್ಯೂ ಜಾರ್ಜ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಹೆಣ್ಣು ಭ್ರೂಣ ಹತ್ಯೆ ತಡೆಯುವ ಉದ್ದೇಶದಿಂದಲೇ 1994ರಲ್ಲಿ ಗರ್ಭಧಾರಣೆ ನಂತರ ಮತ್ತು ಪ್ರಸವಪೂರ್ವ ಲಿಂಗಪತ್ತೆ ಪರೀಕ್ಷೆ ನಿಷೇಧ ಕಾಯ್ದೆ[Pre-Conception and Pre-Natal Diagnostic Techniques (PC-PNDT) Act]ಯನ್ನು ಜಾರಿಗೆ ತರಲಾಗಿದೆ.ಆನ್‌ಲೈನ್ ಕಂಪೆನಿಗಳು ವೆಬ್‌ಸೈಟ್‌ಗಳಲ್ಲಿ ಪ್ರಸವಪೂರ್ವ ಲಿಂಗ ಪತ್ತೆಗೆ ಸಂಬಂಧಿಸಿದ ಜಾಹೀರಾತು ಪ್ರಕಟಿಸುವ ಮೂಲಕ ದೇಶದ ಕಾನೂನನ್ನು ಉಲ್ಲಂಘಿಸುತ್ತಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+